Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪ್ಲೇಯರ್ ಜತೆ ಮದುವೆ, ಸ್ನೇಹಿತನೊಂದಿಗೆ ಸರಸ! ಮುಂದಾಗಿದ್ದೇನು?
ದೇಶಪ್ರಮುಖ

ಪ್ಲೇಯರ್ ಜತೆ ಮದುವೆ, ಸ್ನೇಹಿತನೊಂದಿಗೆ ಸರಸ! ಮುಂದಾಗಿದ್ದೇನು?

Share
2 Min Read
SHARE

newsics.com/ನ್ಯೂಸಿಕ್ಸ್

ಸೆಲೆಬ್ರಿಟಿ  ಹಾಗೂ ಆಟಗಾರರ ಲೈಫ್‌ನ  ಪ್ರೇಮಕಥೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜೀವನ ಕೂಡ ಇದರಲ್ಲಿ ಒಂದು. ಎಷ್ಟೇ ವೈಯಕ್ತಿಕ ಜೀವನದಲ್ಲೂ ವಿವಾದಗಳು ಆದರೂ ಕೆಲವು ವಾಸ್ತವಗಳೊಂದಿಗೆ, ದಿನೇಶ್ ಆನಂದದಾಯಕ ಜೀವನವನ್ನು ನಡೆಸುತ್ತಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬದುಕಿನಲ್ಲಿ ಎದ್ದಿದ್ದ ಬಿರುಗಾಳಿ ಸಖತ್ ಸುದ್ದಿಯಾಗಿತ್ತು. ಪ್ರಾಣಸ್ನೇಹಿತನೇ ಅವರಿಗೆ ವಿಲನ್ ಆಗಿ ದ್ರೋಹವೆಸಗಿದ್ದರು.

ಬಾಲ್ಯದ ಸ್ನೇಹಿತರಾಗಿದ್ದ ದಿನೇಶ್ ಕಾರ್ತಿಕ್ ಮತ್ತು ನಿಕಿತಾ ವಂಜಾರಾ ಪ್ರೀತಿಸಿ ವಿವಾಹವಾದರು. ಅದು 2007 ರ ವರ್ಷ, 21 ವರ್ಷದ ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿಕಿತಾ ಅವರ ತಂದೆ ಮತ್ತು ದಿನೇಶ್ ಅವರ ತಂದೆ ಕೂಡ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ನಿಕಿತಾ ಮತ್ತು ದಿನೇಶ್ ಬಾಲ್ಯದಿಂದಲೂ ಪರಸ್ಪರ ಪರಿಚಿತರು, ಒಟ್ಟಿಗೆ ಬೆಳೆದವರು. ನಿಕಿತಾ ಮತ್ತು ದಿನೇಶ್ ಮದುವೆ ವಯಸ್ಸಿಗೆ ಬಂದ ಕೂಡಲೇ ಇಬ್ಬರ ಮನೆಯವರೂ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ದಿನೇಶ್ ಮತ್ತು ನಿಕಿತಾ ಮುಂಬೈನಲ್ಲಿ ಮದುವೆಯಾದರು.

ದಿನೇಶ್ ಕಾರ್ತಿಕ್ ಅವರ ಆಪ್ತ ಗೆಳೆಯ ಮುರಳಿ ವಿಜಯ್‌ ಆಗಾಗ್ಗೆ ಇವರ ಮನೆಗೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ನಿಖಿತಾ ಮತ್ತು ಮುರಳಿ ನಡುವೆ ಪ್ರೇಮಾಂಕುರವಾಗಿದೆ. ಇವರಿಬ್ಬರೂ ದಿನೇಶ್‌ ಕಾರ್ತಿಕ್‌ ಬಗ್ಗೆ ಕೊಂಚವೂ ಯೋಚಿಸದೇ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗುತ್ತದೆ. ಮುರುಳಿ ಜೊತೆಗಿನ ಸಂಬಂಧದಿಂದ ನಿಕಿತಾ ಗರ್ಭಿಣಿಯಾಗಿದ್ದರು. ಈ ವಿಚಾರ ತಿಳಿದ ದಿನೇಶ್ ಕಾರ್ತಿಕ್ ಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು.

ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಇಬ್ಬರು ಜನಪ್ರಿಯ ಭಾರತೀಯ ಕ್ರಿಕೆಟಿಗರು. ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಕಾರ್ತಿಕ್ ಅವರ ಪತ್ನಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಮುರಳಿ ಅವರ ಸುಖಸಂಸಾರದಲ್ಲಿ ಹುಳಿ ಹಿಂಡಿದ್ದರು.

2012 ರಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ದಿನೇಶ್ ಕಾರ್ತಿಕ್ ಗೆ ಒಂದು ದೊಡ್ಡ ರಹಸ್ಯ ತಿಳಿಯಿತು ಎನ್ನಲಾಗಿದೆ. ತಮ್ಮ ಪತ್ನಿ ನಿಕಿತಾ ಹಾಗೂ ಸ್ನೇಹಿತ ಮುರಳಿ ವಿಜಯ್ ಅವರ ಸಂಬಂಧದ ಗುಟ್ಟು ದಿನೇಶ್‌ ಅವರಿಗೆ ತಿಳಿದಿದೆ. ನಂತರ ದಿನೇಶ್ ಕಾರ್ತಿಕ್ ವಿಚ್ಛೇದನ ಪಡೆಯಲು ನಿರ್ಧರಿಸಿದರು.

ಮುರಳಿ ವಿಜಯ್ ಕಾರಣದಿಂದ ದಿನೇಶ್ ಕಾರ್ತಿಕ್ ವಿಚ್ಛೇದನ ಪಡೆದರು. ಈ ವಿಚ್ಛೇದನದಿಂದ ಇಬ್ಬರ ಸ್ನೇಹ ಶಾಶ್ವತವಾಗಿ ಮುರಿದುಹೋಯಿತು.

2012ರಲ್ಲಿ ದಿನೇಶ್ ಕಾರ್ತಿಕ್‌ ವಿಚ್ಛೇದನ ಪಡೆದರು. ಬಳಿಕ ಅದೇ ವರ್ಷ ನಿಕಿತಾ ಮತ್ತು ಮುರಳಿ ವಿಜಯ್ ವಿವಾಹವಾದರು. 2013 ರಲ್ಲಿ ವಿಜಯ್ ಮತ್ತು ನಿಕಿತಾ ದಂಪತಿಗೆ ಮಗ ಜನಿಸಿದನು. ನಿಕಿತಾ ದಿನೇಶ್‌ಗೆ ವಿಚ್ಛೇದನ ನೀಡಿದಾಗ ಗರ್ಭಿಣಿಯಾಗಿದ್ದರು.

ನಿಕಿತಾಗೆ ವಿಚ್ಛೇದನ ನೀಡಿದ ನಂತರ ದಿನೇಶ್ ಕಾರ್ತಿಕ್ 2015ರಲ್ಲಿ ಭಾರತೀಯ ಸ್ಕ್ವ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಭೇಟಿಯಾದರು.ಕಾರ್ತಿಕ್ ಜೊತೆಗಿನ ಕೆಲ ಭೇಟಿಗಳ ನಂತರ ಅವರನ್ನು ಇಷ್ಟಪಡಲು ಶುರುಮಾಡಿದರು. ಇಬ್ಬರೂ ಪ್ರೀತಿಸುತ್ತಾ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆಗಸ್ಟ್ 2015 ರಲ್ಲಿ ಇಬ್ಬರೂ ಮದುವೆಯಾದರು.

ಮದುವೆ ಆಗೋದಾಗಿ ಹೇಳಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

TAGGED:flirting with a friend! What's next?Marriage with a player
Share This Article
Facebook Twitter Copy Link Print
Previous Article ಮದುವೆ ಆಗೋದಾಗಿ ಹೇಳಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ
Next Article ಮಳೆಗಾಲ ಮುಕ್ತಾಯದವರೆಗೆ ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?