Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ
ಪ್ರಮುಖ

ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ

Share
2 Min Read
SHARE

ನವದೆಹಲಿ: ದೇಶದಲ್ಲಿ ಮಾರಾಟವಾಗುವ ಖಾದ್ಯ ತೈಲಗಳ (ಅಡುಗೆ ಎಣ್ಣೆ) ಪ್ಯಾಕಿಂಗ್‌ನಲ್ಲಿ ಏಕರೂಪತೆ ತರಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅಂದರೆ, ಇನ್ನು ಮುಂದೆ 100 ಮಿ.ಲೀ. 200 ಮಿ.ಲೀ. 500 ಮಿ.ಲೀ. 1 ಲೀ. 2 ಲೀ. 5 ಲೀ.ನಂಥ ಪ್ಯಾಕ್‌ಗಳಲ್ಲಿ ಎಣ್ಣೆಯನ್ನು ಮಾರಾಟ ಮಾಡಲು ಅನುಮತಿ ಸಿಗಲಿದೆ.
ಗ್ರಾಹಕರು ವಿವಿ‘ ಕಂಪನಿಗಳ ಎಣ್ಣೆಗಳ ಬೆಲೆಯನ್ನು ಸುಲ‘ವಾಗಿ ಹೋಲಿಕೆ ಮಾಡಲು ಅನುಕೂಲವಾಗುವಂತೆ ಪ್ರಮಾಣೀಕೃತ ಪ್ಯಾಕಿಂಗ್ ಗಾತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ 850 ಮಿ.ಲೀ., 910 ಮಿ.ಲೀ., 925 ಮಿ.ಲೀ. ಮೊದಲಾದ ವಿಭಿನ್ನ ಗಾತ್ರದ ಪ್ಯಾಕ್‌ಗಳ ಬದಲು ನಿಗದಿತ ಪ್ರಮಾಣದ ಪ್ಯಾಕ್‌ಗಳಲ್ಲಿ ಮಾತ್ರ ಎಣ್ಣೆ ಮಾರಾಟ ಮಾಡಲು ಅವಕಾಶ ಇರಲಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಕಾನೂನು ಮಾಪನಶಾಸ್ತ್ರ ವಿಭಾಗ (ಲೀಗಲ್ ಮೆಟ್ರಾಲಜಿ) ಈ ಸಂಬಂ‘ ಆದೇಶ ಹೊರಡಿಸಿದ್ದು, ದೇಶೀಯವಾಗಿ ಉತ್ಪಾದನೆಯಾಗುವ ಹಾಗೂ ಆಮದು ಮಾಡಿಕೊಳ್ಳುವ ಎಲ್ಲ ಖಾದ್ಯ ತೈಲಗಳಿಗೂ ಈ ನಿಯಮ ಅನ್ವಯವಾಗಲಿದೆ.
ಪ್ಯಾಕಿಂಗ್‌ನಲ್ಲಿ ಗೊಂದಲ
ಕಳೆದ ಕೆಲವು ವರ್ಷಗಳಿಂದ ಅನೇಕ ಕಂಪನಿಗಳು ಎಣ್ಣೆಯ ಬೆಲೆ ಹೆಚ್ಚಳದ ಒತ್ತಡವನ್ನು ನೇರವಾಗಿ ಗ್ರಾಹಕರ ಮೇಲೆ ಹಾಕದೆ, ಪ್ಯಾಕೆಟ್‌ನ ಪ್ರಮಾಣವನ್ನು ಕಡಿಮೆ ಮಾಡುವ ಮಾರ್ಗ ಅನುಸರಿಸುತ್ತಿದ್ದವು. ಉದಾಹರಣೆಗೆ, ಹಿಂದೆ 1 ಲೀಟರ್ ಪ್ಯಾಕ್‌ನಲ್ಲಿ ಮಾರಾಟವಾಗುತ್ತಿದ್ದ ಉತ್ಪನ್ನವನ್ನು 910ಮಿ.ಲೀ. ಅಥವಾ850  ಮಿ.ಲೀ. ಪ್ಯಾಕ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಪ್ಯಾಕೆಟ್‌ನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಿಸದ ಕಾರಣ ಗ್ರಾಹಕರಿಗೆ ನೈಜ ಬೆಲೆ ಏರಿಕೆಯ ಅರಿವು ಆಗುತ್ತಿರಲಿಲ್ಲ.
ಈ ರೀತಿಯ ಪ್ಯಾಕಿಂಗ್ ಕ್ರಮದಿಂದ ವಿವಿ‘ ಬ್ರ್ಯಾಂಡ್‌ಗಳ ನಡುವಿನ ಬೆಲೆಯನ್ನು ಹೋಲಿಕೆ ಮಾಡುವುದು ಕಷ್ಟಕರವಾಗಿತ್ತು. ಒಂದೇ ರೀತಿಯ ಬೆಲೆಯ ಎರಡು ಪ್ಯಾಕ್‌ಗಳಲ್ಲಿಯೂ ಪ್ರಮಾಣದಲ್ಲಿ ವ್ಯತ್ಯಾಸ ಇರುವುದರಿಂದ ಗ್ರಾಹಕರು ಯಾವ ಉತ್ಪನ್ನ ಹೆಚ್ಚು ಲಾ‘ದಾಯಕ ಎಂಬುದನ್ನು ತಕ್ಷಣ ಅರ್ಥಮಾಡಿಕೊಳ್ಳಲು ಸಾಧ್ಯವಾಗ್ತಿರಲಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂಬ ಆರೋಪಗಳು ಹಲವು ವರ್ಷಗಳಿಂದ ಕೇಳಿಬರುತ್ತಿದ್ದವು.
ಪ್ರಮಾಣಿತ ಪ್ಯಾಕ್ ಗಾತ್ರಗಳ ನಿಗದಿ
ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ/ಹರಳೆಣ್ಣೆ, ಕಡಲೇಕಾಯಿ ಎಣ್ಣೆ, ಎಳ್ಳೆಣ್ಣೆ, ಅಕ್ಕಿ ತೌಡಿನ ಎಣ್ಣೆ, ಹತ್ತಿಬೀಜದ ಎಣ್ಣೆ ಮತ್ತು ಮೆಕ್ಕೆಜೋಳದ ಎಣ್ಣೆ ಸೇರಿದಂತೆ ಪ್ರಮುಖ ಖಾದ್ಯ ತೈಲಗಳು ಮತ್ತು ಮಿಶ್ರಿತ ಖಾದ್ಯ ತೈಲಗಳಿಗೆ ಪ್ರಮಾಣಿತ ಪ್ಯಾಕ್ ಗಾತ್ರಗಳನ್ನು ನಿಗದಿಪಡಿಸುತ್ತದೆ.

TAGGED:Uniformity for cooking oil packaging: New rules to be implemented soon
Share This Article
Facebook Twitter Copy Link Print
Previous Article ಟ್ರೋಲ್ ಆದ ​ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರ!
Next Article ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?