Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ
ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

Share
2 Min Read
SHARE

newsics.com/ನ್ಯೂಸಿಕ್ಸ್

ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಎಷ್ಟು ಬಾರಿ ಪ್ರೀತಿಯಲ್ಲಿ ಬೀಳುತ್ತಾನೆ? ಇದು ನಮ್ಮೆಲ್ಲರನ್ನೂ ಕಾಡುವ ಒಂದು ರೋಚಕ ಪ್ರಶ್ನೆ. ಪ್ರೀತಿ ಅನ್ನೋದು ಒಂದು ಸುಂದರ ಅನುಭವ, ಆದರೆ ಸಿನಿಮಾ ಮತ್ತು ಕಾದಂಬರಿಗಳಲ್ಲಿ ನೋಡುವಂತೆ ಅದು ಪದೇ ಪದೇ ಸಂಭವಿಸುತ್ತದೆಯೇ? ಅಥವಾ ನಮ್ಮ ಬದುಕಿನಲ್ಲಿ ಅದಕ್ಕೆ ಒಂದು ಮಿತಿ ಇದೆಯೇ? ಇಂದಿನ ಓಟದ ಬದುಕಿನಲ್ಲಿ ನಾವು ಪ್ರೀತಿಯ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ.

ಆದರೆ ವಾಸ್ತವದಲ್ಲಿ ಅಪ್ಪಟವಾದ ಪ್ರೀತಿ ಎನ್ನುವುದು ಮನುಷ್ಯನಿಗೆ ಎಷ್ಟು ಸಾರಿ ಆಗಬಹುದು ಎಂದು ಅಮೆರಿಕದ ಕಿನ್ಸಿ ಇನ್‌ಸ್ಟಿಟ್ಯೂಟ್ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಜೀವನದಲ್ಲಿ ಒಬ್ಬ ವ್ಯಕ್ತಿಗೆ ಎಷ್ಟು ಬಾರಿ ನಿಜವಾದ ಮತ್ತು ಆಳವಾದ ಪ್ರೀತಿ ಆಗುತ್ತದೆ ಎಂಬುದನ್ನು ತಿಳಿಯಲು ಪ್ರಯತ್ನಿಸಿದ್ದಾರೆ. ಈ ಅಧ್ಯಯನದ ಫಲಿತಾಂಶಗಳು ಇಂಟರ್‌ಪರ್ಸೋನಾ  ಜರ್ನಲ್‌ನಲ್ಲಿ ಪ್ರಕಟಗೊಂಡಿವೆ.

ಕಿನ್ಸೆ ಇನ್ಸ್ಟಿಟ್ಯೂಟ್‌ನ ವಿಜ್ಞಾನಿ ಡಾ. ಅಮಂಡಾ ಗೆಸೆಲ್‌ಮನ್ ನೇತೃತ್ವದಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಸುಮಾರು 10,036 ಜನ ಭಾಗವಹಿಸಿದ್ದರು. 18 ರಿಂದ 99 ವರ್ಷದವರೆಗಿನ ಜನರಿಗೆ “ನಿಮ್ಮ ಜೀವನದಲ್ಲಿ ಈವರೆಗೆ ಎಷ್ಟು ಬಾರಿ ನೀವು ಪ್ರಾಮಾಣಿಕವಾಗಿ ಪ್ರೀತಿಸಿದ್ದೀರಿ?” ಎಂಬ ಸರಳ ಪ್ರಶ್ನೆಯನ್ನು ಕೇಳಲಾಗಿತ್ತು. ಇದರ ಫಲಿತಾಂಶದ ಪ್ರಕಾರ, ಒಬ್ಬ ಮನುಷ್ಯ ಸರಾಸರಿ ಎರಡು ಬಾರಿ ಮಾತ್ರ ತನ್ನ ಜೀವನದಲ್ಲಿ ಗಾಢವಾದ ಪ್ರೀತಿಯಲ್ಲಿ ಬೀಳುತ್ತಾನೆ. ವರದಿಯನ್ನು ಇನ್ನು ಆಳವಾಗಿ ಗಮನಿಸಿದರೆ, ಶೇ. 30 ರಷ್ಟು ಜನ ಎರಡು ಬಾರಿ ಪ್ರೀತಿಸಿದ್ದರೆ, ಶೇ. 28 ರಷ್ಟು ಜನ ಒಂದೇ ಒಂದು ಬಾರಿ ಪ್ರೀತಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 14 ರಷ್ಟು ಜನ ತಮಗೆ ಇದುವರೆಗೆ ಪ್ರೀತಿಯೇ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಧ್ಯಯನದ ಫಲಿತಾಂಶದ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸರಾಸರಿ 2.05 ಬಾರಿ ನಿಜವಾದ ಪ್ರೀತಿಯನ್ನು ಅನುಭವಿಸುತ್ತಾನೆ ಎಂದು ತಿಳಿದುಬಂದಿದೆ. ಅಂದರೆ ಹೆಚ್ಚಿನ ಜನರಿಗೆ ಜೀವನದಲ್ಲಿ ಎರಡು ಬಾರಿ ಆಳವಾದ ಪ್ರೀತಿ ಆಗುವ ಸಾಧ್ಯತೆ ಇದೆ.

ಎಷ್ಟು ಜನರಿಗೆ ಎಷ್ಟು ಬಾರಿ ಪ್ರೀತಿ?

ಅಧ್ಯಯನದಲ್ಲಿ ಭಾಗವಹಿಸಿದವರ ಉತ್ತರಗಳ ಪ್ರಕಾರ:

14% ಜನರಿಗೆ ಜೀವನದಲ್ಲಿ ಎಂದಿಗೂ ಆಳವಾದ ಪ್ರೀತಿ ಆಗಿಲ್ಲ.

28% ಜನರಿಗೆ ಒಮ್ಮೆ ಮಾತ್ರ ಪ್ರೀತಿ ಆಗಿದೆ.

30% ಜನರಿಗೆ ಎರಡು ಬಾರಿ ಪ್ರೀತಿ ಆಗಿದೆ.

17% ಜನರಿಗೆ ಮೂರು ಬಾರಿ ಪ್ರೀತಿ ಆಗಿದೆ.

11% ಜನರಿಗೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪ್ರೀತಿ ಆಗಿದೆ.

ಈ ಅಂಕಿಅಂಶಗಳು ಹೆಚ್ಚಿನ ಜನರು ಜೀವನದಲ್ಲಿ ಒಂದು ಅಥವಾ ಎರಡು ಮಹತ್ವದ ಪ್ರೇಮಕಥೆಗಳನ್ನು ಅನುಭವಿಸುತ್ತಾರೆ ಎಂಬುದನ್ನು ಸೂಚಿಸುತ್ತವೆ.

ಈ ಅಧ್ಯಯನ ಹೊರಹಾಕಿದ ಮತ್ತೊಂದು ಸ್ವಾರಸ್ಯಕರ ಸತ್ಯವೆಂದರೆ, ವಯಸ್ಸಾಗುತ್ತಿದ್ದಂತೆ ಪ್ರೀತಿ ಹುಟ್ಟುವ ಅವಕಾಶಗಳೇನೂ ಕಡಿಮೆಯಾಗುವುದಿಲ್ಲ. ಅಚ್ಚರಿಯ ವಿಷಯವೆಂದರೆ, ಯುವಕರಿಗಿಂತ ಹಿರಿಯ ವಯಸ್ಸಿನವರೇ ತಮ್ಮ ಜೀವನದಲ್ಲಿ ಹೆಚ್ಚು ಬಾರಿ ಪ್ರೀತಿಯ ಅನುಭವ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಅಂದರೆ, ನೀವು 20 ಅಥವಾ 30ರ ವಯೋಮಾನ ದಾಟಿದ ಮೇಲೆಯೂ ನಿಮ್ಮ ಹೃದಯದಲ್ಲಿ ಮತ್ತೆ ಹೊಸ ಪ್ರೇಮದ ಗಂಟೆ ಬಾರಿಸುವ ಸಾಧ್ಯತೆ ದಟ್ಟವಾಗಿರುತ್ತದೆ.

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

TAGGED:How many times does a person fall in love for real? Here is the surprising truth revealed by the study
Share This Article
Facebook Twitter Copy Link Print
Previous Article Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​
Next Article ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?