newsics.com/ನ್ಯೂಸಿಕ್ಸ್
ನವದೆಹಲಿ: ಭಾರತದಲ್ಲಿ ಈ ವರ್ಷದ ಮುಂಗಾರು ಮಳೆ ನಿರೀಕ್ಷೆಗಿಂತ ಕ್ಷೀಣಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಮುನ್ಸೂಚನೆಯಲ್ಲಿ ತಿಳಿಸಿದೆ.
ಎಲ್ ನಿನೊ ಹವಾಮಾನ ವೈಪರೀತ್ಯದ ಪ್ರಭಾವದಿಂದಾಗಿ, ಕಳೆದ ಮೂರು ವರ್ಷಗಳಲ್ಲೇ ಮೊದಲ ಬಾರಿಗೆ 2026ರಲ್ಲಿ ಮುಂಗಾರು ಮಳೆಯು ಸರಾಸರಿಗಿಂತ ಕಡಿಮೆ ಇರುವ ಸಾಧ್ಯತೆಯಿದೆ.
ಈ ವರ್ಷ ಮುಂಗಾರು ಮಳೆಯು ಸುದೀರ್ಘ ಅವಧಿಯ ಸರಾಸರಿಯ ಶೇಕಡಾ 90 ರಷ್ಟನ್ನು ಮಾತ್ರ ತಲುಪುವ ನಿರೀಕ್ಷೆಯಿದೆ
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಐಎಂಡಿ, ದೇಶಾದ್ಯಂತ ನೈಋತ್ಯ ಮುಂಗಾರು ಹಂಗಾಮಿನ ಒಟ್ಟಾರೆ ಮಳೆಯು ಶೇ. +4 ರಷ್ಟು ಮಾದರಿ ದೋಷದೊಂದಿಗೆ ಸುದೀರ್ಘ ಅವಧಿಯ ಸರಾಸರಿಯ (LPA) ಶೇಕಡಾ 90 ರಷ್ಟು ಇರುವ ಸಾಧ್ಯತೆಯಿದೆ. ಇದು ಈ ಬಾರಿ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಅಥವಾ ಅತ್ಯಂತ ಕಡಿಮೆ ಮಳೆಯಾಗುವುದನ್ನು ಸೂಚಿಸುತ್ತದೆ ಎಂದು ತಿಳಿಸಿದೆ.