newsics.com/ನ್ಯೂಸಿಕ್ಸ್
ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ.
ಕಿರುತೆರೆ ನಟಿ ಕಮ್ ಮಾಡೆಲ್ ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್‌ಗಳ ಮೂಲಕ. ಚಿತ್ರವಿಚಿತ್ರವಾದ ತರಹೇವಾರಿ ಡ್ರೆಸ್ ಗಳನ್ನ ತೊಡುವುದರಲ್ಲಿ ಉರ್ಫಿ ಜಾವೇದ್ ಸದಾ ಮುಂದು. ಈಗಾಗಲೇ ತಮ್ಮ ಔಟ್‌ಫಿಟ್ ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ.
ಆದರೆ, ಅವರ ಜೀವನದಲ್ಲಿ ಕೂಡ ಕಷ್ಟದ ದಿನಗಳು ಇದ್ದವು. ಇತ್ತೀಚೆಗೆ ನಟಿ ಸೋಹಾ ಅಲಿ ಖಾನ್ ಅವರ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ಉರ್ಫಿ, ತಾವು ಟಿವಿ ಇಂಡಸ್ಟ್ರಿಯಲ್ಲಿ ಎದುರಿಸಿದ ಅವಮಾನ ಹಾಗೂ ಕಷ್ಟದ ದಿನಗಳ ಬಗ್ಗೆ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. 40 ಸಾವಿರ ಸಂಬಳ ಇದ್ದಾಗ ಜೀವನ ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಆದರೆ ಫೇಮಸ್ ಆದ ನಂತರ ಅವರು ತಿಂಗಳಿಗೆ 2 ಲಕ್ಷ ರೂಪಾಯಿ ಸಂಪಾದಿಸುವ ಮಟ್ಟಕ್ಕೆ ಬೆಳೆದರು.
ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಉರ್ಫಿ, ‘ನನ್ನ ತಂದೆಯ ಕಿರುಕುಳ ತಾಳಲಾರದೆ ನಾನು ಮನೆಯಿಂದ ಓಡಿಬಂದಿದ್ದೆ. ಬದುಕಲು ದೆಹಲಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದೆ, ಮನೆಪಾಠ ಹೇಳಿಕೊಟ್ಟೆ. ಆದರೆ ನನ್ನ ಗುರಿ ಮುಂಬೈ ತಲುಪುವುದಾಗಿತ್ತು. ಮುಂಬೈಗೆ ಬಂದರೆ ಐದು ವರ್ಷದಲ್ಲಿ ಸ್ಟಾರ್ ಆಗಬಹುದು, ಕಾರು, ಬಂಗಲೆ ತಾನಾಗಿಯೇ ಬರುತ್ತದೆ ಅಂದುಕೊಂಡಿದ್ದೆ. ಆದರೆ ರಿಯಾಲಿಟಿ ತುಂಬಾನೇ ಭಿನ್ನವಾಗಿತ್ತು’ ಎಂದಿದ್ದಾರೆ.
ಮುಂಬೈನಂತಹ ದುಬಾರಿ ನಗರದಲ್ಲಿ ಬದುಕಲು, ಮನೆ ಬಾಡಿಗೆ ಕಟ್ಟಲು ಹಣ ಬೇಕಿತ್ತು. ಹಾಗಾಗಿ ತಿಂಗಳಿಗೆ ಸಿಗುತ್ತಿದ್ದ 40 ಸಾವಿರ ರೂಪಾಯಿಗಾಗಿ ಮನಸ್ಸಿಲ್ಲದಿದ್ದರೂ ಟಿವಿ ಧಾರಾವಾಹಿಗಳಲ್ಲಿ ನಟಿಸುವುದನ್ನು ಮುಂದುವರಿಸಿದೆ. ಆದರೆ ನನಗೆ ತೃಪ್ತಿ ಇರಲಿಲ್ಲ, ನಾನು ಯಾವಾಗಲೂ ಜನಪ್ರಿಯತೆಯಲ್ಲಿ ಇರಬೇಕೆಂದು ಬಯಸಿದ್ದೆ’ ಎಂದಿದ್ದಾರೆ ಉರ್ಫಿ ಜಾವೇದ್.
ಫ್ಯಾಷನ್‌ನಲ್ಲಿ ಆಸಕ್ತಿ ಇದ್ದರೂ ಉರ್ಫಿ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾ ಬೆಳೆದಂತೆ ತಾವೇ ವಿನ್ಯಾಸಗೊಳಿಸಿದ ಉಡುಪುಗಳನ್ನು ಧರಿಸಿ ವಿಡಿಯೋ ಮಾಡಲು ಆರಂಭಿಸಿದರು. ಈ ನಡುವೆ ಅವರಿಗೆ ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಅಲ್ಲಿ ಅವರು ಕಸದ ಚೀಲದಿಂದ ಮಾಡಿದ ಉಡುಪನ್ನು ಧರಿಸಿದ್ದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಯಿತು. ಅದೇ ಅವರ ಜೀವನದ ಬಿಗ್ ಟರ್ನಿಂಗ್ ಪಾಯಿಂಟ್.
ಒಂದು ಕಾಲದಲ್ಲಿ ಟಿವಿ ಸೀರಿಯಲ್‌ಗಳಲ್ಲಿ ತಿಂಗಳಿಗೆ 40 ಸಾವಿರ ರೂಪಾಯಿ ಗಳಿಸಲು ಒದ್ದಾಡುತ್ತಿದ್ದ ನಾನು, ಇಂದು ಸೋಶಿಯಲ್ ಮೀಡಿಯಾ ಬ್ರ್ಯಾಂಡ್ ಕೊಲಾಬರೇಷನ್‌ಗಳ ಮೂಲಕ ತಿಂಗಳಿಗೆ ಕನಿಷ್ಠ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.