newsics.com/ನ್ಯೂಸಿಕ್ಸ್
ಪದ್ಮಿನಿ ಏಕಾದಶಿಯನ್ನೇ ಕಮಲ ಏಕಾದಶಿಯೆಂದು ಹಲವು ಕಡೆಗಳಲ್ಲಿ ಕರೆಯಲಾಗುತ್ತದೆ. ಈ ದಿನದಂದು ಜನರು ವಿಷ್ಣು ದೇವನ ಆರಾಧನೆಯನ್ನು ಮಾಡುತ್ತಾರೆ. ಈ ಏಕಾದಶಿ ವ್ರತದ ಪ್ರಮುಖ ವಿಚಾರವೆಂದರೆ, ಇದು ಅಧಿಕ ಮಾಸದ ಮೊದಲನೇ ಏಕಾದಶಿ ವ್ರತವಾಗಿರುತ್ತದೆ. ಈ ಏಕಾದಶಿ ವ್ರತವನ್ನು ಕ್ರಮಬದ್ಧವಾಗಿ ಆಚರಿಸುವುದರಿಂದ ಲಕ್ಷ್ಮಿ ನಾರಾಯಣರ ಕೃಪೆಗೆ ಪಾತ್ರರಾಗಬಹುದು.
ಜೀವನದ ಪ್ರತಿ ಸಮಸ್ಯೆಗಳಿಗೂ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬಹುದು. ಆದರೆ, ಈ ಏಕಾದಶಿ ದಿನದಂದು ಕೆಲವೊಂದು ಕೆಲಸಗಳನ್ನು ಮಾಡುವುದು ಮುಖ್ಯವಾಗಿದೆ. 2026ರ ಪದ್ಮಿನಿ ಏಕಾದಶಿ ವ್ರತದ ದಿನದಂದು ನೀವು ಯಾವೆಲ್ಲಾ ಕೆಲಸಗಳನ್ನು ಮಾಡುವುದು ತುಂಬಾ ಒಳ್ಳೆಯದು.
1. 2026ರ ಪದ್ಮಿನಿ ಏಕಾದಶಿ ದಿನ ಈ ಕೆಲಸಗಳನ್ನು ಮಾಡಿ:
– ಕಮಲ ಏಕಾದಶಿ ಅಥವಾ ಪದ್ಮಿನಿ ಏಕಾದಶಿ ವ್ರತದ ದಿನದಂದು ಜನರು ತಪ್ಪದೇ ವಿಷ್ಣು ಷಟ್ಪದಿ ಸ್ತೋತ್ರವನ್ನು. ವಿಷ್ಣು ಸಹಸ್ರನಾಮ ಇಂತಹ ಸ್ತೋತ್ರಗಳನ್ನ ಪಠಿಸಬೇಕು.
– ಈ ಮಂಗಳಕರವಾದ ಏಕಾದಶಿಯ ದಿವಸ ರಾತ್ರಿ ಜಾಗರಣೆ ಇದ್ದು ಭಗವಂತನ ನಾಮ ಸ್ಮರಣೆ ಮತ್ತು ಸಂಕೀರ್ತನೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಭಾಗವತದಂತಹ ಪುರಾಣ ಪುಣ್ಯ ಕಥೆಗಳನ್ನು ಕೇಳಬೇಕು.
– ನಂತರ ಏಕಾದಶಿಯ ಮಾರನೇಯ ದಿನದಂದು ಅಂದರೆ ದ್ವಾದಶಿ ತಿಥಿಯಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧರಾಗಿ ಮತ್ತೊಮ್ಮೆ ಶ್ರೀಹರಿಯನ್ನು ಅಂದರೆ, ವಿಷ್ಣು ದೇವನನ್ನು ಹಳದಿ ಬಣ್ಣದ ಹೂವುಗಳಿಂದ, ತುಳಸಿ ದಳಗಳಿಂದ ಪೂಜಿಸಬೇಕು.
– ಭಗವಂತನಿಗೆ ವಿವಿದ ರೀತಿಯ ನೈವೇದ್ಯವನ್ನು ಸಮರ್ಪಣೆ ಮಾಡಿ ಪ್ರಸಾದ ರೂಪದಲ್ಲಿ ದ್ವಾದಶಿ ಪಾರಣೆ, ಅಂದರೆ ಆಹಾರವನ್ನು ಸ್ವೀಕರಿಸಬೇಕು.
– ಏಕಾದಶಿ ಮತ್ತು ದ್ವಾದಶೀಯ ದಿವಸ ವಿಷ್ಣುವಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿದರೆ ಲಕ್ಷ್ಮಿ ನಾರಾಯಣರ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ್ದಾರೆ.
– ಈ ಏಕಾದಶಿ ಶುಭ ದಿನದಂದು ನೀವು ವಿಷ್ಣು ದೇವನಿಗೆ ಸಾವಿರ ತುಳಸಿ ದಳಗಳನ್ನು ಮಂತ್ರಗಳೊಂದಿಗೆ ಅರ್ಪಿಸಿದರೆ ವೈಕುಂಠ ಲೋಕ ದೊರೆಯುವುದು. ಬಿಲ್ವಪತ್ರೆಯನ್ನು ಅರ್ಪಿಸಿದರೆ ಲಕ್ಷ್ಮಿ ದೇವಿಯ ಪೂರ್ಣಾನುಗ್ರಹ ಪ್ರಾಪ್ತವಾಗುವುದು. ಸುವಾಸಿತ ಪುಷ್ಪಗಳಿಂದ ಸಾವಿರ ಸಲ ಅರ್ಚನೆ ಮಾಡಿದರೆ ವಿವಿಧ ಕಾಮನೆಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ.
– ಏಕಾದಶಿಯ ದಿನದಂದು ವಿಷ್ಣುವನ್ನು ಶಾಸ್ತ್ರೋಕ್ತವಾಗಿ ವಿಧಿ – ವಿಧಾನಗಳ ಮೂಲಕ ಪೂಜಿಸಿ, “ಅಜ್ಞಾನ ತಿಮಿರಾಂದಸ್ಯ ವ್ರತಂ ಅನೇನಾ ಕೇಶವ| ಪ್ರಸೀದ ಸುಮುಖೋ ಭೂತ್ವಾ ಜ್ಞಾನ ದೃಷ್ಟಿ ಪ್ರದೋ ಭವ” ಎಂದು ಸ್ತೋತ್ರವನ್ನು ಪಠಿಸುತ್ತಾ ಪ್ರಾರ್ಥನೆಯನ್ನು ಮಾಡುವುದು ಶುಭ.
– ಕೆಲವೊಂದು ಪುರಾಣಗಳಲ್ಲಿ ಅಧಿಕಮಾಸದ ತ್ರಯೋದಶಿ ದಿವಸ ಪಾರಣೆ ಮಾಡಿದರೆ ನೂರು ಯಜ್ಞ ಮಾಡಿದಷ್ಟು ಫಲ ಸಿಗುತ್ತದೆ ಎಂದು ಹೇಳಿದ್ದಾರೆ. ಅಧಿಕಮಾಸದ ಅಂದರೆ ಪುರುಷೋತ್ತಮ ಮಾಸ ಡಾ ಕೃಷ್ಣ ಪಕ್ಷದ ಏಕಾದಶಿ ವ್ರತ ಕಮಲಾ ಏಕಾದಶಿ ಎಂದು ಲಕ್ಷ್ಮಿಯ ಹೆಸರಿನಿಂದ ಪ್ರಸಿದ್ಧವಾಗಿದೆ. ಇದನ್ನು ಮಾಡುವವರು ಲೌಕಿಕ ಮತ್ತು ಪಾರಮಾರ್ಥಿಕ ಫಲವನ್ನು ಪಡೆಯುತ್ತಾರೆ.
– ಜ್ಞಾನೇಂದ್ರಿಯಗಳಿಂದ ಅಂದರೆ ಕಣ್ಣಿನಿಂದ ಭಗವಂತನ ರೂಪವನ್ನು ನೋಡಬೇಕು, ಕಿವಿಯಿಂದ ಭಗವಂತನ ಗುಣ ಗಾನವನ್ನು ಕೇಳಬೇಕು. ನಾಲಿಗೆಯಿಂದ ಭಗವಂತನ ನಾಮ ಸ್ಮರಣೆ ಮಾಡಬೇಕು.
2. ಏಕಾದಶಿ ಉಪವಾಸದ ಅರ್ಥವೇನು.?
“ಉಪ ವಸತಿ ಇತಿ ಉಪವಾಸಃ” ಎಂದು ಶಾಸ್ತ್ರಗಳು ಹೇಳುತ್ತದೆ ಅಂದರೆ ಭಗವಂತನ ಸಮೀಪದಲ್ಲಿ ಇರುವುದು ಎಂದು ಅರ್ಥ. ಅಂದರೆ ದಿನವಿಡಿ ದೇವರ ಮನೆಯಲ್ಲಿ ಕುಳಿತಿರುವುದು ಎಂದು ಅರ್ಥ ಅಲ್ಲ. ಭಗವಂತನಲ್ಲಿ ನಮ್ಮನ್ನ ನಾವು ಸಂಪೂರ್ಣವಾಗಿ ಸಮರ್ಪಣೆಯನ್ನ ಮಾಡಿಕೊಂಡು ನಮ್ಮ ಪಂಚೇಂದ್ರಿಯಗಳಿಗೂ ಕೂಡ ವಿರಾಮವನ್ನು ಕೊಡಬೇಕು ಅಂದರೆ ನೋಡಬಾರದನ್ನು ನೋಡುವುದು ಕೇಳಬಾರದನ್ನು ಕೇಳುವುದು ಆಡಬಾರದನ್ನು ಆಡುವುದು ತಿನ್ನಬಾರದನ್ನ ತಿನ್ನುವುದು ಇವುಗಳನ್ನೆಲ್ಲ ಏಕಾದಶಿಯ ದಿವಸ ಮಾಡಬಾರದು.
ನಮ್ಮಉಚ್ಛ್ವಾಸ ನಿಶ್ವಾಸ ದಲ್ಲಿ ಭಗವಂತನ ನಾಮ ಜಪ ಇರಬೇಕು . ಹೀಗೆ ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು ಎಲ್ಲವೂ ಕೂಡ ಭಗವಂತನ ಕಡೆ ತಿರುಗಿಸುವುದಕ್ಕೆ ಉಪವಾಸ ಎಂದು ಹೆಸರು ಭೌತಿಕವಾಗಿ ಮತ್ತು ಮಾನಸಿಕವಾಗಿ ಭಗವಂತನಿಗೆ ನಾವು ನಮ್ಮನ್ನು ಸಮರ್ಪಣೆಯನ್ನು ಮಾಡಿಕೊಂಡು ಆಚರಿಸಿದರೇ ಈ ಅಧಿಕಮಾಸದ ಕಮಲ ಏಕಾದಶಿ ನಮ್ಮ ಎಲ್ಲಾ ಕಾಮನೆಗಳನ್ನು ಈಡೇರಿಸುತ್ತದೆ ಎಂಬುದಾಗಿದೆ.
https://www.newsics.com/2026/05/26/has-the-basil-plant-dried-up-if-you-have-2-rupees-the-basil-plant-will-always-stay-green/
2026ರ ಪದ್ಮಿನಿ ಏಕಾದಶಿ ವ್ರತವನ್ನು ಈ ಮೇಲಿನ ನಿಯಮಗಳೊಂದಿಗೆ ಪಾಲಿಸುವುರಿಂದ ವ್ರತದ ಪ್ರಯೋಜನಗಳನ್ನು ನೀವು ಪಡೆದುಕೊಳ್ಳುತ್ತೀರಿ. ಇಂದು ಪದ್ಮಿನಿ ಏಕಾದಶಿ ವ್ರತವಾಗಿರುವುದರಿಂದ ನೀವು ಈ ಮೇಲಿನ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಏಕಾದಶಿ ವ್ರತವನ್ನು ಮಾಡುವುದರಿಂದ ಅದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ.
Sleeping with Wet Hair ರಾತ್ರಿ ಒದ್ದೆ ಕೂದಲಿನಲ್ಲಿ ಮಲಗುತ್ತೀರಾ? ಹಾಗಾದ್ರೆ ಈ ಸಮಸ್ಯೆ ಫಿಕ್ಸ್..!