newsics.com/ನ್ಯೂಸಿಕ್ಸ್
ಮನೆಯ ಮುಂಭಾಗದ ಒಂದು ಕುಂಡದಲ್ಲಿ ಬಳ್ಳಿಯಂತೆ ಬೆಳೆದು ಪಕ್ಕದಲ್ಲೇ ಇರುವ ಯಾವುದಾದರೂ ಒಂದು ಮರಕ್ಕೆ ಸುರಳಿಯಾಕಾರದಲ್ಲಿ ಹಬ್ಬಿ ಮನೆಯ ಅಂದವನ್ನು ಹೆಚ್ಚಿಸುವ ಬಸಳೆ ಸೊಪ್ಪಿನ ಬಳ್ಳಿ ಮನೆ ಮಂದಿಯ ಆರೋಗ್ಯ ರಕ್ಷಣೆಯಲ್ಲಿ ತನ್ನದೇ ಆದ ರೀತಿಯಲ್ಲಿ ನೆರವಿಗೆ ಬರುತ್ತದೆ.
ಹೆಚ್ಚಾಗಿ ನಮ್ಮ ಭಾರತದಲ್ಲಿ ಕಂಡು ಬರುವ ಈ ಸಸ್ಯ ಪಕ್ಕದ ಚೀನಾ, ಸಿಲೋನ್, ಮಲೇಷ್ಯಾ, ಆಫ್ರಿಕಾ, ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳಲ್ಲಿ ಸಹ ಬೆಳವಣಿಗೆ ಹೊಂದಿರುವುದನ್ನು ಕಾಣಬಹುದು. ಇದೊಂದು ಸದಾ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಬಳ್ಳಿಯಾಗಿದ್ದು, ಸುಮಾರು 9 ಮೀಟರ್ ಎತ್ತರ ಬೆಳೆಯಬಲ್ಲದು. ಬಸಳೆ ಬಳ್ಳಿಯ ಎಲೆಗಳು ನೋಡಲು ವೀಳ್ಯದ ಎಲೆಗಳಂತೆ ಇದ್ದು 3 ರಿಂದ 9 ಸೆಂಟಿಮೀಟರ್ ಅಗಲ ಹೊಂದಿರುತ್ತವೆ.
ಬಸಳೆ ಸೊಪ್ಪಿನಲ್ಲಿ ನಮಗೆ ದಿನನಿತ್ಯ ಬೇಕಾಗುವ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಕಬ್ಬಿಣಾಂಶ ಅಗಾಧ ಪ್ರಮಾಣದಲ್ಲಿದೆ. ಇದರಲ್ಲಿರುವ ಪ್ರಬಲ ಆಂಟಿಆಕ್ಸಿಡೆಂಟ್ಗಳು ದೇಹದ ರೋಗನಿರೋಧಕ ಶಕ್ತಿಯನ್ನು ದುಪ್ಪಟ್ಟುಗೊಳಿಸುತ್ತವೆ. ಇಂದಿನ ಜಿಟಿಜಿಟಿ ಜೀವನಶೈಲಿ ಹಾಗೂ ಜಂಕ್ ಫುಡ್ ಸಂಸ್ಕೃತಿಯಿಂದ ಹದಗೆಡುತ್ತಿರುವ ಆರೋಗ್ಯವನ್ನು ಸುಧಾರಿಸಲು ಇದು ಪ್ರಕೃತಿ ನೀಡಿದ ಅತ್ಯುತ್ತಮ ಔಷಧಿಯಾಗಿದೆ.
ಗ್ಯಾಸ್ಟ್ರಿಕ್, ಮಲಬದ್ಧತೆಗೆ ರಾಮಬಾಣ
ನಿಮಗೆ ಪದೇ ಪದೇ ಜೀರ್ಣಕ್ರಿಯೆಯ ತೊಂದರೆ ಅಥವಾ ಮಲಬದ್ಧತೆ ಕಾಡುತ್ತಿದ್ದರೆ, ಬಸಳೆ ಸೊಪ್ಪು ಅದಕ್ಕೆ ಸೂಕ್ತ ಪರಿಹಾರ. ಇದರಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಅಸಿಡಿಟಿ, ಎದೆ ಉರಿ ಹಾಗೂ ಹೊಟ್ಟೆಯ ಉರಿಯಿಂದ ಬಳಲುವವರು ಬಸಳೆ ಸೊಪ್ಪನ್ನು ನಿಯಮಿತವಾಗಿ ಬಳಸುವುದರಿಂದ ದೇಹ ತಂಪಾಗುತ್ತದೆ.
ರಕ್ತಹೀನತೆ ಕಾಯಿಲೆಗೆ ಇಲ್ಲಿದೆ ಬ್ರೇಕ್
ಮಹಿಳೆಯರು ಮತ್ತು ಮಕ್ಕಳಲ್ಲಿ ಕಾಡುವ ರಕ್ತಹೀನತೆ ಸಮಸ್ಯೆಗೆ ಬಸಳೆ ಸೊಪ್ಪು ಅತ್ಯುತ್ತಮ ಮನೆಮದ್ದಾಗಿದೆ. ಇದರಲ್ಲಿರುವ ಕಬ್ಬಿಣಾಂಶವು ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ಇದು ಕಣ್ಣಿನ ದೃಷ್ಟಿ ದೋಷಗಳನ್ನು ನಿವಾರಿಸಿ, ಮೂಳೆಗಳನ್ನು ಉಕ್ಕಿನಂತೆ ಬಲಪಡಿಸುತ್ತದೆ.
ವೇಗವಾಗಿ ತೂಕ ಇಳಿಸಿಕೊಳ್ಳಲು ಬೆಸ್ಟ್ ಫುಡ್
ಬಾಡಿ ಫಿಟ್ನೆಸ್ ಕಾಯ್ದುಕೊಳ್ಳಲು ಬಯಸುವವರು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ ಬಸಳೆ ಸೊಪ್ಪು ಪರ್ಫೆಕ್ಟ್ ಡಯಟ್. ಪ್ರತಿದಿನ ಬಸಳೆ ಸೊಪ್ಪಿನ ಸಾರು, ತಂಬುಳಿ ಅಥವಾ ಪಲ್ಯವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಣದಲ್ಲಿಡಬಹುದು.
ಕಪ್ಪೆ ಚಿಪ್ಪು ಆರಿಸಲು ಹೋಗಿ 11ಮಂದಿ ಜಲಸಮಾಧಿ : ಘೋರ ದುರಂತ ಸಂಭವಿಸಿದ್ದೇಗೆ?