Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಕೊಂದು, ಜೆಸಿಬಿಯಿಂದ ಶವ ಹೂತ ಪತ್ನಿ ಪ್ರಿಯಕರ
ದೇಶಪ್ರಮುಖ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಕೊಂದು, ಜೆಸಿಬಿಯಿಂದ ಶವ ಹೂತ ಪತ್ನಿ ಪ್ರಿಯಕರ

Share
2 Min Read
SHARE

newsics.com/ನ್ಯೂಸಿಕ್ಸ್

ನಾರಾಯಣಖೇಡ್: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಂಗಾರೆಡ್ಡಿ ಜಿಲ್ಲೆಯ ಮನ್ಸೂರ್ ಮಂಡಲದ ಎಲ್ಗೋಯಿ ಗ್ರಾಮದಲ್ಲಿ ನಡೆದಿದೆ.

ನಾರಾಯಣಖೇಡ್ ಮಂಡಲದ ಗಂಗಾಪುರ ಗ್ರಾಮದ ನಿವಾಸಿ ಚೆಂಬನುಳ್ಳ ಮುತ್ಯಂ ರೆಡ್ಡಿ (35) ಕೊಲೆಯಾದ ದುರ್ದೈವಿ. ಈತ ಬೋರ್ವೆಲ್ ಮೋಟಾರ್ ರಿಪೇರಿ ಕೆಲಸ ಮಾಡಿಕೊಂಡಿದ್ದನು. ಇವನ ಪತ್ನಿ ಕಲ್ಪನಾ ನಾರಾಯಣಖೇಡ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಸಮಯದಲ್ಲಿ ಮನ್ಸೂರ್ ಮಂಡಲದ ಎಲ್ಗೋಯಿ ಗ್ರಾಮದ ಗೌನಿ ಪಂಡರಿ ಎಂಬಾತ ಆರ್ಟಿಸಿ (RTC) ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದನು.

 

ಕೆಲಸದ ನಡುವೆ ಕಲ್ಪನಾ ಹಾಗೂ ಪಂಡರಿ ಮಧ್ಯೆ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಇವರ ಅಕ್ರಮ ಸಂಬಂಧಕ್ಕೆ ಮುತ್ಯಂ ರೆಡ್ಡಿ ಅಡ್ಡಿಯಾಗುತ್ತಿದ್ದನು. ಇದರಿಂದ ಆತನನ್ನು ಮುಗಿಸಲು ಇಬ್ಬರೂ ಸೇರಿ ಸ್ಕೆಚ್ ಹಾಕಿದ್ದಾರೆ.

 

ಪ್ಲಾನ್ ಮಾಡಿ ಕೊಲೆ:

ಒಂಬತ್ತು ದಿನಗಳ ಹಿಂದೆ ಮುತ್ಯಂ ರೆಡ್ಡಿಯನ್ನು ನಾರಾಯಣಖೇಡ್-ರಾಯ್ಪಲ್ಲಿ ರಸ್ತೆಯಲ್ಲಿರುವ ದಾಬಾಕ್ಕೆ ಕರೆದೊಯ್ದು ಮದ್ಯ ಕುಡಿಸಿ, ಊಟ ಮಾಡಿಸಿದ್ದಾರೆ. ಬಳಿಕ ಎಲ್ಗೋಯಿ ಗ್ರಾಮದ ಹೊರವಲಯದ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಯಾರಿಗೂ ಅನುಮಾನ ಬಾರದಿರಲು “ತಾತನ ಸಮಾಧಿ ನಿರ್ಮಾಣಕ್ಕಾಗಿ” ಎಂದು ಮುಂಚಿತವಾಗಿಯೇ ಜೆಸಿಬಿ (JCB) ಮೂಲಕ ಗುಂಡಿ ತೋಡಿಸಿದ್ದರು. ಹತ್ಯೆಯ ನಂತರ ಅದೇ ಗುಂಡಿಯಲ್ಲಿ ಶವವನ್ನು ಹೂತುಹಾಕಿದ್ದಾರೆ.

 

ಬಯಲಿಗೆಳೆದ ಪೊಲೀಸರು:

ಮುತ್ಯಂ ರೆಡ್ಡಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಾಗ, ಕಲ್ಪನಾಳ ಫೋನ್ ಕಾಲ್ ಡೇಟಾದಲ್ಲಿ ಅನುಮಾನಾಸ್ಪದ ವಿವರಗಳು ಲಭ್ಯವಾಗಿವೆ. ಇದರ ಆಧಾರದ ಮೇಲೆ ಪೊಲೀಸರು ಪಂಡರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಲ್ಲದೆ, ಶವ ಹೂತಿಟ್ಟ ಸ್ಥಳವನ್ನು ತೋರಿಸಿದ್ದಾನೆ.

ಮೃತ ಮುತ್ಯಂ ರೆಡ್ಡಿಗೆ ಐದು ವರ್ಷದ ಹೆಣ್ಣು ಮಗಳಿದ್ದಾಳೆ. ಹೆಂಡತಿಯೇ ಗಂಡನನ್ನು ಕೊಂದಿರುವ ವಿಷಯ ತಿಳಿದು ಮೃತನ ಪೋಷಕರು ಕಣ್ಣೀರು ಮುನ್ನೀರಾಗಿದ್ದಾರೆ. ಘಟನಾ ಸ್ಥಳಕ್ಕೆ ಡಿಎಸ್ಪಿ ವೆಂಕಟ್ ರೆಡ್ಡಿ, ಸಿಐ ಶ್ರೀನಿವಾಸ್ ರೆಡ್ಡಿ, ಎಸ್ಐ ಕೋಟೇಶ್ವರರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Health Tips ಬಸಳೆ ಸೊಪ್ಪಿನ, ಪ್ರಯೋಜನಗಳು ಗೊತ್ತಾದ್ರೆ, ದಿನಾ ತಿನ್ನುವಿರಿ!

TAGGED:buries body with JCBWife kills husband who interfered with illicit affair
Share This Article
Facebook Twitter Copy Link Print
Previous Article Health Tips ಬಸಳೆ ಸೊಪ್ಪಿನ, ಪ್ರಯೋಜನಗಳು ಗೊತ್ತಾದ್ರೆ, ದಿನಾ ತಿನ್ನುವಿರಿ!
Next Article ವರದಕ್ಷಿಣೆ ಬೇಡವೆಂದ ಮದುಮಗನಿಗೆ ಫಸ್ಟ್ ನೈಟ್‌ನಲ್ಲೇ ಶಾಕ್!

Popular Posts

Tragedy ನನ್ನ ಸಾವಿಗೆ ಮೋದಿ ಕಾರಣ: SIR ಫಾರ್ಮ್‌ನಲ್ಲೇ‌ ಡೆತ್‌ನೋಟ್ ಬರೆದಿಟ್ಟು ಜೀವ ಕಳೆದುಕೊಂಡ ಪೇಂಟರ್!

1 Min Read

Russia Ukraine war ಸೇನಾ ಕೈಗಾರಿಕೆ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: 6 ಸಾ*ವು, 26 ಮಂದಿಗೆ ಗಾಯ

1 Min Read

Clash for misbehave ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಚುಡಾವಣೆ: ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ!

1 Min Read

PM Narendra Modi ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಮಾಸ್ಟರ್ ಪ್ಲಾನ್ ; 10 ವರ್ಷ ಜೈಲು, ₹10 ಕೋಟಿ ದಂಡಕ್ಕೆ ಕೇಂದ್ರ ಸಂಪುಟ ಸಮ್ಮತಿ

1 Min Read

You Might Also Like

ಪ್ರಮುಖವಿದೇಶ

Humen bomber attack ಭೀಕರ ಆತ್ಮಾ*ಹುತಿ ದಾಳಿ: 12 ಸೈನಿಕರು ಸೇರಿ 15 ಮಂದಿ ದಾರುಣ ಸಾವು

1 Min Read
ಪ್ರಮುಖCrimeಕರ್ನಾಟಕ

Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

1 Min Read
ಪ್ರಮುಖಕರ್ನಾಟಕ

Landslide ವರುಣನ ಆರ್ಭಟ; ಗದ್ದೆ-ತೋಟಗಳು ಜಲಾವೃತ, ಹೆದ್ದಾರಿಯಲ್ಲಿ ಭೂಕುಸಿತ

1 Min Read
ಪ್ರಮುಖಕರ್ನಾಟಕ

Rain Alert ಭಾರಿ ಮಳೆ ಎಚ್ಚರಿಕೆ; 4 ದಿನ 17 ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?