Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬ್ಯಾಗ್, ಫೋನ್ ರೈಲಲ್ಲೇ ಮರೆತು ಹೋಯ್ತಾ? ಜಸ್ಟ್ ಈ ರೀತಿ ಮಾಡಿ ಸಾಕು!
ಪ್ರಮುಖ

ಬ್ಯಾಗ್, ಫೋನ್ ರೈಲಲ್ಲೇ ಮರೆತು ಹೋಯ್ತಾ? ಜಸ್ಟ್ ಈ ರೀತಿ ಮಾಡಿ ಸಾಕು!

Share
3 Min Read
SHARE

newsics.com/ನ್ಯೂಸಿಕ್ಸ್

ರೈಲ್ ಮದದ್’ ಆಯಪ್ ಮತ್ತು 139 ಸಹಾಯವಾಣಿ ಮೂಲಕ ಕಳೆದುಹೋದ ವಸ್ತುಗಳನ್ನು ಸುಲಭವಾಗಿ ಮರಳಿ ಪಡೆಯುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.ಪ್ರತಿದಿನ ಕೋಟ್ಯಂತರ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ. ಇದು ಒಂದು ದೊಡ್ಡ ಸಾಹಸವೇ ಸರಿ.

ಆದರೆ, ನಮ್ಮ ನಿಲ್ದಾಣ ಬಂದಾಗ ಆ ಅವಸರದಲ್ಲಿ, ನಿದ್ದೆಗಣ್ಣಿನಲ್ಲಿ ಅಥವಾ ಮಕ್ಕಳ ಗಲಾಟೆಯಲ್ಲಿ ಲಗೇಜ್ ಅನ್ನು ರೈಲಿನಲ್ಲೇ ಮರೆಯುವುದು ಅನೇಕರಿಗೆ ಆಗುವ ಅನುಭವ. ಪ್ಲಾಟ್‌ಫಾರ್ಮ್‌ಗೆ ಇಳಿದ ಮೇಲೆಯೇ ‘ಅಯ್ಯೋ.. ಬ್ಯಾಗ್ ಸೀಟಿನ ಕೆಳಗೇ ಉಳಿದು ಹೋಯ್ತು!’ ಅಂತ ನೆನಪಾಗುತ್ತೆ. ಅಷ್ಟರಲ್ಲಾಗಲೇ ರೈಲು ಹೊರಟಿರುತ್ತದೆ. ಆಗ ಎದೆ ಬಡಿತವೇ ನಿಂತಂತಾಗುತ್ತದೆ. ಫೋನ್, ಪರ್ಸ್, ಪ್ರಮುಖ ದಾಖಲೆಗಳಿದ್ದ ಬ್ಯಾಗ್ ಕಳೆದು ಹೋದರೆ ಆ ನೋವು ಹೇಳತೀರದು. ಇನ್ನು ಆ ಸಾಮಾನು ಸಿಗುವುದೇ ಇಲ್ಲ ಎಂದು ಹಲವರು ನಿರ್ಧರಿಸಿಬಿಡುತ್ತಾರೆ. ಆದರೆ, ಡಿಜಿಟಲ್ ಇಂಡಿಯಾದಲ್ಲಿ ಭಾರತೀಯ ರೈಲ್ವೆ ಈಗ ಬಹಳ ಅಪ್‌ಡೇಟ್ ಆಗಿದೆ. ನಿಮ್ಮ ಲಗೇಜ್ ಎಲ್ಲಿಗೂ ಹೋಗಲ್ಲ. ಅದನ್ನು ಸುಲಭವಾಗಿ ಟ್ರ್ಯಾಕ್ ಮಾಡಿ, ಮರಳಿ ಪಡೆಯಬಹುದು.

ರೈಲಿನಲ್ಲಿ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ‘ರೈಲ್ ಮದದ್’ (Rail Madad) ಎಂಬ ಅದ್ಭುತ ವೇದಿಕೆಯನ್ನು ತಂದಿದೆ. ಇದು 24×7 ಲಭ್ಯವಿರುವ ಕೇಂದ್ರೀಕೃತ ದೂರು ವ್ಯವಸ್ಥೆ.

• ಮೊದಲು ನಿಮ್ಮ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್ ಅಥವಾ ಆಯಪ್ ಸ್ಟೋರ್‌ನಿಂದ ‘Rail Madad’ ಆಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

• ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಂಡು, ಲಾಗಿನ್ ಆಗಿ. • ಅಲ್ಲಿ ‘Grievance’ ಆಯ್ಕೆಗೆ ಹೋಗಿ, ನಿಮ್ಮ ಟಿಕೆಟ್ ಮೇಲಿರುವ PNR ಸಂಖ್ಯೆಯನ್ನು ನಮೂದಿಸಿ.

• ನೀವು ಕಳೆದುಕೊಂಡ ವಸ್ತುವಿನ ವಿವರ ಅಂದರೆ ಬ್ಯಾಗ್ ಬಣ್ಣ, ಗಾತ್ರ, ಒಳಗೆ ಏನಿದೆ, ನಿಮ್ಮ ಕೋಚ್, ಸೀಟ್ ಸಂಖ್ಯೆಯಂತಹ ವಿವರಗಳನ್ನು ಸ್ಪಷ್ಟವಾಗಿ ಬರೆಯಿರಿ. ಸಾಧ್ಯವಾದರೆ ಆ ಲಗೇಜ್ ಫೋಟೋ ಅಪ್‌ಲೋಡ್ ಮಾಡಿ.

• ಸಬ್ಮಿಟ್ ಮಾಡಿದ ತಕ್ಷಣ ನಿಮಗೆ ‘ಗ್ರೀವೆನ್ಸ್ ಐಡಿ’ ಸಿಗುತ್ತದೆ. ಇದರ ಮೂಲಕ ನಿಮ್ಮ ದೂರಿನ ಸ್ಟೇಟಸ್ ಎಲ್ಲಿದೆ ಎಂದು ಲೈವ್ ಆಗಿ ಟ್ರ್ಯಾಕ್ ಮಾಡಬಹುದು.

ಒಂದು ವೇಳೆ ನಿಮಗೆ ಆಯಪ್ ಬಳಸುವುದು ಕಷ್ಟ ಎನಿಸಿದರೆ, ನೇರವಾಗಿ railmadad.indianrailways.gov.in ವೆಬ್‌ಸೈಟ್‌ಗೆ ಹೋಗಿ ಕೂಡ ಇದೇ ಪ್ರಕ್ರಿಯೆಯ ಮೂಲಕ ದೂರು ನೀಡಬಹುದು. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದರ ಮೂಲಕ ದೃಢೀಕರಿಸಿ ದೂರು ದಾಖಲಿಸಬೇಕು. ಇಷ್ಟೇ ಅಲ್ಲದೆ, ಸರಳವಾಗಿ 139 ಸಹಾಯವಾಣಿ ಸಂಖ್ಯೆಯೂ ಇದೆ. ಇದು ಭಾರತೀಯ ರೈಲ್ವೆಯ ಅಧಿಕೃತ ಇಂಟಿಗ್ರೇಟೆಡ್ ಸಂಖ್ಯೆ. ಈ ನಂಬರ್‌ಗೆ ಕರೆ ಮಾಡಿ ನಿಮ್ಮ PNR ಸಂಖ್ಯೆ, ಕಳೆದುಹೋದ ಲಗೇಜ್ ವಿವರಗಳನ್ನು ತಿಳಿಸಿದರೆ, ಅವರು ತಕ್ಷಣವೇ ಆ ರೈಲು ಹೋಗುವ ಮಾರ್ಗದಲ್ಲಿನ ಮುಂದಿನ ಪ್ರಮುಖ ರೈಲ್ವೆ ನಿಲ್ದಾಣದ ಸಿಬ್ಬಂದಿಯನ್ನು ಅಲರ್ಟ್ ಮಾಡುತ್ತಾರೆ. ಅಲ್ಲಿನ ಅಧಿಕಾರಿಗಳು ರೈಲು ಬಂದ ತಕ್ಷಣ ನಿಮ್ಮ ಕೋಚ್‌ಗೆ ಹೋಗಿ ಸಾಮಾನುಗಳನ್ನು ಸಂಗ್ರಹಿಸುತ್ತಾರೆ.

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಪ್ರಯಾಣಿಕರ ಲಗೇಜ್ ಸುರಕ್ಷತೆಗಾಗಿ ‘ಆಪರೇಷನ್ ಅಮಾನತ್’ (Operation Amanat) ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದೆ. ರೈಲಿನಲ್ಲಿ ಸಿಕ್ಕ ಗುರುತು ಪತ್ತೆಯಾಗದ ಲಗೇಜ್‌ಗಳನ್ನು, ಬ್ಯಾಗ್‌ಗಳನ್ನು ಆರ್‌ಪಿಎಫ್ ಪೊಲೀಸರು ವಶಪಡಿಸಿಕೊಂಡು, ಅವುಗಳ ಫೋಟೋ ತೆಗೆದು ರೈಲ್ವೆ ವಲಯದ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ. ಆ ಪೋರ್ಟಲ್‌ನಲ್ಲಿ ಲಗೇಜ್ ಸಿಕ್ಕ ದಿನಾಂಕ, ಸ್ಥಳ ಮತ್ತು ಅದರ ಅಂದಾಜು ಮೌಲ್ಯ ಎಲ್ಲವೂ ಇರುತ್ತದೆ. ಒಂದು ವೇಳೆ ಆನ್‌ಲೈನ್‌ನಲ್ಲಿ ಸಿಗದಿದ್ದರೆ, ನೀವು ಇಳಿದ ನಿಲ್ದಾಣದಲ್ಲಿರುವ ಆರ್‌ಪಿಎಫ್ ಪೊಲೀಸ್ ಠಾಣೆಯಲ್ಲಿ ಅಥವಾ ‘ಲಾಸ್ಟ್ ಪ್ರಾಪರ್ಟಿ ಸೆಂಟರ್’ನಲ್ಲಿ ನೇರವಾಗಿ ದೂರು ನೀಡಬಹುದು.

ಇಲ್ಲಿ ಪ್ರಯಾಣಿಕರು ನೆನಪಿಡಬೇಕಾದ ಅತಿ ಮುಖ್ಯವಾದ ಅಂಶವೆಂದರೆ ಸಮಯ. ನಿಮ್ಮ ವಸ್ತು ಕಳೆದುಹೋಗಿದೆ ಎಂದು ತಿಳಿದ ತಕ್ಷಣ ಎಷ್ಟು ಬೇಗ ದೂರು ನೀಡುತ್ತೀರೋ, ಅದು ಸಿಗುವ ಸಾಧ್ಯತೆ ಅಷ್ಟೇ ಹೆಚ್ಚಿರುತ್ತದೆ. ನೀವು ತಡ ಮಾಡಿದಷ್ಟು ಬೇರೆಯವರು ಆ ಲಗೇಜ್ ತೆಗೆದುಕೊಳ್ಳುವ ಅಪಾಯವಿದೆ. ರೈಲ್ವೆಯ ಈ 24 ಗಂಟೆಗಳ ಸಕ್ರಿಯ ವ್ಯವಸ್ಥೆಯಿಂದಾಗಿ ಈಗ ಹೆಚ್ಚಿನ ಪ್ರಕರಣಗಳಲ್ಲಿ ಪ್ರಯಾಣಿಕರ ಸಾಮಾನುಗಳು ಸುರಕ್ಷಿತವಾಗಿ ಮರಳಿ ಸಿಗುತ್ತಿವೆ. ಹಾಗಾಗಿ, ಮುಂದಿನ ಬಾರಿ ರೈಲು ಪ್ರಯಾಣದಲ್ಲಿ ಲಗೇಜ್ ತಪ್ಪಿಹೋದರೆ ಅಸಲು ಗಾಬರಿಯಾಗಬೇಡಿ, ರೈಲ್ ಮದದ್ ಬಳಸಿ.

ಬೆಂಗಳೂರಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ

TAGGED:Forgot your bag or phone on the train? Just do this!
Share This Article
Facebook Twitter Copy Link Print
Previous Article ಬೆಂಗಳೂರಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ
Next Article 60 ದಿನದಲ್ಲಿ ಅಮೆರಿಕ ಬಿಡಿ; ಭಾರತೀಯರನ್ನು ಕಾಡಲಾರಂಭಿಸಿದ ಲೇಆಫ್‌!

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?