newsics.com/ನ್ಯೂಸಿಕ್ಸ್
ನವದೆಹಲಿ: ಇತ್ತೀಚೆಗಷ್ಟೇ 30,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಅಮೆರಿಕ ಮೂಲದ ಒರಾಕಲ್ ಸಂಸ್ಥೆ ಇದೀಗ ಹೊಸ ನೇಮಕಾತಿಗಳನ್ನು ರದ್ದುಗೊಳಿಸುವ ಕ್ರಮ ತೆಗೆದುಕೊಂಡಿದೆ. ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ ಮತ್ತು ಎನ್‌ಐಟಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ನೀಡಿದ್ದ ಫುಲ್-ಟೈಮ್ ಉದ್ಯೋಗದ ಆಫರ್‌ಗಳನ್ನು ಕೊನೆಯ ಕ್ಷಣದಲ್ಲಿ ವಾಪಸ್ ಪಡೆದಿದೆ.
https://youtube.com/shorts/qM17NYCF6QQ?si=P9kdXfY-X5l0cveO
ವರದಿಗಳ ಪ್ರಕಾರ, ಸುಮಾರು 50ಕ್ಕೂ ಹೆಚ್ಚು ಐಐಟಿ ವಿದ್ಯಾರ್ಥಿಗಳು ಹಾಗೂ ಅನೇಕ ಎನ್‌ಐಟಿ ವಿದ್ಯಾರ್ಥಿಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಹುತೇಕ ವಿದ್ಯಾರ್ಥಿಗಳು ಈಗಾಗಲೇ ಇತರೆ ಕಂಪನಿಗಳ ಅವಕಾಶಗಳನ್ನು ತಿರಸ್ಕರಿಸಿ ಒರಾಕಲ್ ಆಫರ್‌ನ್ನೇ ಅಂತಿಮಗೊಳಿಸಿದ್ದರು. ಆದರೆ ಈಗ ಆಫರ್ ವಾಪಸ್ ಪಡೆಯಲಾಗಿರುವುದರಿಂದ ಅವರ ಭವಿಷ್ಯದ ಬಗ್ಗೆ ಆತಂಕ ಹೆಚ್ಚಾಗಿದೆ.
ಒರಾಕಲ್ ಜಾಗತಿಕವಾಗಿ ನಡೆಸುತ್ತಿರುವ 30,000 ವಜಾಗಳಲ್ಲಿ ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂಜಿನಿಯರ್‌ಗಳು, ಆರ್ಕಿಟೆಕ್ಟ್‌ಗಳು ಮತ್ತು ಪ್ರೋಗ್ರಾಂ ಮ್ಯಾನೇಜರ್‌ಗಳು ಈ ವಜಾ ಪಟ್ಟಿಯಲ್ಲಿದ್ದಾರೆ.
ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸಂಬಳದ ಆಫರ್ ನೀಡುತ್ತಿದ್ದ ಒರಾಕಲ್‌ನಂತಹ ಕಂಪನಿಗಳ ಈ ನಡೆ, ಕ್ಯಾಂಪಸ್ ಪ್ಲೇಸ್‌ಮೆಂಟ್ ಪ್ರಕ್ರಿಯೆಯ ಮೇಲೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಬೀರುವ ಆತಂಕ ಮೂಡಿಸಿದೆ.