newsics.com/ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ಸರ್ಕಾರ ಹೊಸ ಅಬಕಾರಿ ನೀತಿ ಜಾರಿಗೆ ತಂದಿದ್ದು, ಮೇ 11 ರಿಂದ ನೂತನ ಆಲ್ಕೋಹಾಲ್ ಇನ್ ಬೆವರೇಜ್ ನೀತಿ ಜಾರಿಗೆ ಬಂದಿದೆ.
https://youtube.com/shorts/vd_Fn8drod4?si=CvPPZAJu5QmGONhu
ಪ್ರೀಮಿಯಂ ಬಿಯರ್ ಹಾಗೂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಸಾಮಾನ್ಯ ಜನರು ಬಳಸುವ ಕಡಿಮೆ ದರದ ಮದ್ಯದ ಬೆಲೆ ಏರಿಕೆಯಾಗಿದೆ.
ಹೊಸ ಅಬಕಾರಿ ನೀತಿಯನ್ವಯ ಶೇ 5ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆ ಶೇ 20 ರಿಂದ 25 ರಷ್ಟು ಇಳಿಕೆಯಾಗಿದೆ. ಕಿಂಗ್‌ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ 650 ಎಂಎಲ್ ಬಾಟಲಿಗಳ ಮೇಲೆ ಸುಮಾರು 75 ರೂ. ಇಳಿಕೆಯಾಗಿದೆ. ಹೈನೆಕೆನ್ ಮೇಲೆ 70 ರೂ., ಯುಬಿ ಎಕ್ಸ್‌ಪೋರ್ಟ್ ಮೇಲೆ 25 ರೂ. ಹಾಗೂ ಬಡ್‌ವೈಸರ್ ಪ್ರೀಮಿಯಂ ಮೇಲೆ 20 ರೂ.ಗಳವರೆಗೆ ರಿಯಾಯಿತಿ ಸಿಗಲಿದೆ.
ವಿದೇಶಿ ಬ್ರಾಂಡ್‌ನ ಸ್ಕಾಚ್ ವಿಸ್ಕಿಗಳ ಬೆಲೆಯೂ ಶೇ. 20 ರಷ್ಟು ಕಡಿಮೆಯಾಗಿದೆ. ಬ್ಲ್ಯಾಕ್ ಲೇಬಲ್ ಮತ್ತು ಶಿವಾಸ್ ರೀಗಲ್‌ನ 750 ಎಂಎಲ್ ಬಾಟಲಿಯ ಬೆಲೆ 5,190 ರೂ.ಗಳಿಂದ 4,100 ರೂ.ಗೆ ಇಳಿದಿದೆ. ಇದು ಶ್ರೀಮಂತ ವರ್ಗದ ಮದ್ಯಪ್ರಿಯರಿಗೆ ಖುಷಿತಂದಿದೆ.
https://www.newsics.com/2026/05/15/new-date-announced-for-neet-ug-re-examination/