newsics.com/ನ್ಯೂಸಿಕ್ಸ್
ಚೈನ್ನೈ : ಇಂದು ಚೆನ್ನೈನ ಜವಾಹರ್ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ವೇಳೆ ನಟ ವಿಜಯ್ ಪ್ರಮಾಣ ವಚನ ಸ್ವೀಕರಿಸಿ ಇದೀಗ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವೇದಿಕೆಯ ಮೇಲೆ ಸಿದ್ಧಪಡಿಸಲಾಗಿದ್ದ ಮುಖ್ಯಮಂತ್ರಿಗಳ ಅಧಿಕೃತ ಆಸನದ ಬಳಿ ಬಂದ ವಿಜಯ್, ಕೆಲ ಕ್ಷಣಗಳ ಕಾಲ ಕುರ್ಚಿಯನ್ನೇ ದಿಟ್ಟಿಸಿ ನೋಡಿದರು. ನಂತರ ಭಾವುಕರಾಗಿ ಕೈಮುಗಿದು, ಅತ್ಯಂತ ನಿಧಾನವಾಗಿ ಸಿಎಂ ಕುರ್ಚಿಯ ಮೇಲೆ ಆಸೀನರಾದರು.
ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ವಿಜಯ್ ಅವರು ಜನರ ನಿರೀಕ್ಷೆಯಂತೆ ಜನಪರ ಯೋಜನೆಗಳಿಗೆ ಚಾಲನೆ ನೀಡಿದರು. ತಮ್ಮ ಮೊದಲ ಕಡತವಾಗಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ ಸಹಿ ಹಾಕಿದರು.
ಯುವಶಕ್ತಿಯನ್ನು ಹಾಳುಮಾಡುತ್ತಿರುವ ಮಾದಕ ವ್ಯಸನದ ವಿರುದ್ಧ ಸಮರ ಸಾರಿರುವ ನೂತನ ಸಿಎಂ, ಮೂರನೇ ಪ್ರಮುಖ ಕಡತವಾಗಿ ‘ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ’ ರಚನೆಗೆ ಸಹಿ ಮಾಡಿದರು. ರಾಜ್ಯವನ್ನು ಡ್ರಗ್ಸ್ ಮುಕ್ತವಾಗಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಘೋಷಿಸಿದ ಅವರು, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ನೀಡಿದರು.