newsics.com/ನ್ಯೂಸಿಕ್ಸ್
ನಟ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಮೇ 10) ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದರಿಂದ ಅವರ ಆಪ್ತರ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ನಟಿ ತ್ರಿಶಾ ಕೃಷ್ಣನ್ಆಗಮಿಸಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರೊಂದಿಗೆ ನಟಿ ತ್ರಿಶಾ ಆತ್ಮೀಯ ಸಂಬಂಧ ಹೊಂದಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನವೇ ಅವರು ಕ್ರೀಡಾಂಗಣಕ್ಕೆ ಆಗಮಿಸಿದ್ದು, ಈ ಕ್ಷಣದ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ.
ತಮ್ಮ ಆತ್ಮೀಯ ಸ್ನೇಹಿತನ ಜೀವನದ ಅತಿ ದೊಡ್ಡ ಮೈಲಿಗಲ್ಲಿಗೆ ಸಾಕ್ಷಿಯಾಗಲು ತ್ರಿಶಾ ಅವರು ಆಗಮಿಸಿದ್ದರು. ಅವರು ನೆಹರು ಸ್ಟೇಡಿಯಂ ಪ್ರವೇಶಿಸಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಅಭಿಮಾನಿಗಳತ್ತ ಕೈಬೀಸುತ್ತಾ ಸರಳವಾಗಿ ಸಾಗಿದ ತ್ರಿಶಾ ಅವರ ನಗು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಅವರ ರಾಜಕೀಯ ಪ್ರಯಾಣದ ಆರಂಭದಲ್ಲಿ ತ್ರಿಶಾ ಅವರ ಉಪಸ್ಥಿತಿಯು ಅವರ ನಡುವಿನ ಗಟ್ಟಿ ಸ್ನೇಹಕ್ಕೆ ಸಾಕ್ಷಿಯಾಗಿದೆ.
ಈ ಕಾರ್ಯಕ್ರಮಕ್ಕೆ ತ್ರಿಶಾ ಅವರು ಬಹಳ ಸೊಗಸಾದ ಮತ್ತು ಸಾಂಪ್ರದಾಯಿಕ ಉಡುಗೆಯನ್ನು ಆಯ್ಕೆ ಮಾಡಿಕೊಂಡಿದ್ದರು. ತಿಳಿ ನೀಲಿ ಬಣ್ಣದ ಸೀರೆಯಲ್ಲಿ ಅವರು ಅತ್ಯಂತ ಸುಂದರವಾಗಿ ಕಂಡುಬಂದರು. ಈ ಸೀರೆಗೆ ಹೊಂದಿಕೆಯಾಗುವಂತಹ ಸುಂದರವಾದ ಡಿಸೈನರ್ ಬ್ಲೌಸ್ ಧರಿಸಿದ್ದ ಅವರು, ತಲೆಗೆ ಮಲ್ಲಿಗೆ ಹೂವನ್ನು ಮುಡಿದು ಅಪ್ಪಟ ತಮಿಳು ಸಂಸ್ಕೃತಿಯನ್ನು ಬಿಂಬಿಸಿದರು. ಅವರ ಈ ಸಾಂಪ್ರದಾಯಿಕ ನೋಟವು ನೆರೆದಿದ್ದ ಗಣ್ಯರ ಮೆಚ್ಚುಗೆಗೆ ಪಾತ್ರವಾಯಿತು. ಗಿಲ್ಲಿ ಸಿನೆಮಾದಿಂದ ಶುರುವಾದ ಅವರ ಮತ್ತು ವಿಜಯ್ ಅವರ ಜೋಡಿಯು ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿರುವುದು ಆಶ್ಚರ್ಯಕರವಾಗಿದೆ.
https://www.newsics.com/2026/05/10/deep-groundwater-in-the-malenadi-area/