Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮಲೆನಾಡಿ ಭಾಗದಲ್ಲಿ ಆಳಕ್ಕಿಳಿದ ಅಂತರ್ಜಲ
ಕರ್ನಾಟಕಪ್ರಮುಖ

ಮಲೆನಾಡಿ ಭಾಗದಲ್ಲಿ ಆಳಕ್ಕಿಳಿದ ಅಂತರ್ಜಲ

Share
2 Min Read
SHARE

newsics.com/ನ್ಯೂಸಿಕ್ಸ್

ಚಿಕ್ಕಮಗಳೂರು : ಪ್ರತಿ ಮಳೆಗಾಲದಲ್ಲಿ ಅತಿವೃಷ್ಟಿ ಪರಿಸ್ಥಿತಿ ಅನುಭವಿಸುವ ಮಲೆನಾಡು ಭಾಗದ ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕಿನಲ್ಲೇ ತೀವ್ರವಾಗಿ ಅಂತರ್ಜಲ ಮಟ್ಟ ಕುಸಿದಿರುವುದು ಆತಂಕ ಮೂಡಿಸಿದೆ.

ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಸ್ಥಿರವಾಗಿತ್ತು. ಆದರೆ, ಈ ವರ್ಷ ಸಾಕಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಮಲೆನಾಡು ಸೇರಿದಂತೆ ಬಯಲು ಭಾಗದಲ್ಲಿ ಜನವರಿ ತನಕವೂ ಧಾರಾಕಾರ ಮಳೆ ಸುರಿದಿತ್ತು. ಬಹುತೇಕ ಎಲ್ಲ ಕೆರೆ, ಕಟ್ಟೆಗಳು ತುಂಬಿದ್ದವು. ಆದರೆ, ಈ ಬಾರಿ ಬಿಸಿಲಿನ ತಾಪ ಹೆಚ್ಚಾಗುವ ಜತೆಗೆ ಈವರೆಗೆ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ.

ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಹಾಗೂ ತುಂಗಾ, ಭದ್ರಾ ನದಿಗಳು ಹರಿಯುವ ಕೊಪ್ಪ ಹಾಗೂ ನರಸಿಂಹರಾಜಪುರದಲ್ಲಿ ಸರಾಸರಿ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ವರ್ಷ ಕೊಪ್ಪದಲ್ಲಿ ಹೆಚ್ಚು ಇಳಿಕೆ ಕಂಡು ಬಂದಿತ್ತು. ಈ ವರ್ಷ ನರಸಿಂಹರಾಜಪುರ ತಾಲೂಕಿನಲ್ಲಿ ಹೆಚ್ಚು ಪ್ರಮಾಣದ ಇಳಿಕೆಯಾಗಿದೆ.

ತರೀಕೆರೆ, ಕಡೂರು, ಅಜ್ಜಂಪುರ ತಾಲೂಕಿನಲ್ಲಿ ಕಳೆದ 10 ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. 2014 ರಲ್ಲಿ ಕಡೂರು ತಾಲೂಕಿನಲ್ಲಿ ಸರಾಸರಿ 20.31 ಇದ್ದ ಅಂತರ್ಜಲ ಮಟ್ಟ 2017ರ ವೇಳೆಗೆ 27.86 ಮೀಟರ್‌ ಆಳಕ್ಕೆ ಹೋಗಿತ್ತು. ಬಳಿಕ 2022 ರಲ್ಲಿ 8.22 ಮೀಟರ್‌ಗೆ ಏರಿಕೆಯಾಗಿತ್ತು. ಬರಗಾಲ ಇದ್ದ ಕಾರಣ 2024 ರಲ್ಲಿ 12.22 ಮೀಟರ್‌ ಇತ್ತು. ಆದರೆ, 2025 ರಲ್ಲಿ ಉತ್ತಮ ಮಳೆಯಾದ ಕಾರಣ ಕಳೆದ ವರ್ಷ 7.94 ಮೀಟರ್‌ಗೆ ಏರಿಕೆಯಾಗಿತ್ತು. ಆದರೆ, ಕಳೆದ ವರ್ಷ 12.60 ಮೀಟರ್‌ನಿಂದ ಈ ವರ್ಷ 13.94 ಮೀಟರ್‌ಗೆ ಇಳಿಕೆಯಾಗಿದೆ.

ಅಜ್ಜಂಪುರ ತಾಲೂಕಿನಲ್ಲಿ ಕಳೆದ ವರ್ಷ 11.93 ಮೀಟರ್‌ ಇದ್ದ ಅಂತರ್ಜಲ ಮಟ್ಟ ಈ ವರ್ಷ 12.85 ಮೀಟರ್‌ಗೆ ಇಳಿದಿದ್ದರೆ, ತರೀಕೆರೆ ತಾಲೂಕಿನಲ್ಲಿ 10.65 ಮೀಟರ್‌ನಿಂದ 11.85 ಮೀಟರ್‌ಗೆ ಕುಸಿದಿದೆ.

ಮಲೆನಾಡು ಭಾಗದ ತಾಲೂಕುಗಳಾದ ಶೃಂಗೇರಿ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅಂತರ್ಜಲ ಮಟ್ಟ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಶೃಂಗೇರಿ ತಾಲೂಕಿನಲ್ಲಿ ಕಳೆದ ವರ್ಷ 8.43 ಮೀಟರ್‌ಗೆ ಇಳಿಕೆಯಾಗಿದ್ದ ಅಂತರ್ಜಲ ಈ ವರ್ಷ 8.41 ಮೀಟರ್‌ಗೆ ಏರಿಕೆಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 10.69 ಮೀಟರ್‌ನಿಂದ 10.65 ಮೀಟರ್‌ಗೆ ಏರಿಕೆ ಕಂಡುಬಂದಿದೆ.

https://www.newsics.com/2026/05/10/new-poster-of-rowdy-janardhan-released-vijay-deverakonda-in-a-ragged-look/

 

TAGGED:Deep groundwater in the Malenadi area
Share This Article
Facebook Twitter Copy Link Print
Previous Article Vijay Devarakonda ರೌಡಿ ಜನಾರ್ದನ ಚಿತ್ರದ ಹೊಸ ಪೋಸ್ಟರ್ ರಿಲೀಸ್ : ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ
Next Article Vijay – Trisha ಸಾಂಪ್ರದಾಯಿಕ ಉಡುಗೆಯಲ್ಲಿ ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಬಂದ ತ್ರಿಶಾ

Popular Posts

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?