newsics.com/ನ್ಯೂಸಿಕ್ಸ್
ವಿಜಯ್ ದೇವರಕೊಂಡ ನಟನೆಯ ರೌಡಿ ಜನಾರ್ದನ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ವಿಜಯ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ.
ರವಿ ಕಿರಣ್ ಕೋಲಾ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸುರಿಯುವ ಮಳೆಯಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಕುಳಿತಿರುವ ವಿಜಯ್ ಅವರ ರಗಡ್ ಲುಕ್ ನೋಡಿದರೆ ಇದು ಪಕ್ಕಾ ಆ್ಯಕ್ಷನ್ ಸಿನಿಮಾ ಎಂಬುದನ್ನು ಸಾಬೀತುಪಡಿಸುತ್ತಿದೆ. ಜೊತೆಗೆ ರೊಮ್ಯಾನ್ಸ್ ಕೂಡ ಇರಲಿದೆ.
ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ನಟಿ ಕೀರ್ತಿ ಸುರೇಶ್ ಅವರ ಭಂಗಿ. ವಿಜಯ್ ದೇವರಕೊಂಡ ಎದೆಯ ಮೇಲೆ ಕೀರ್ತಿ ಸುರೇಶ್ ಕಾಲು ಇಟ್ಟಿರುವ ದೃಶ್ಯವು ಕುತೂಹಲ ಮೂಡಿಸಿದೆ.
https://www.newsics.com/2026/05/10/8-year-old-boy-killed-in-leopard-attack-in-mahadeshwar-hills/