Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸುವೇಂದು ಸಿಎಂ ಆಗ್ತಿದ್ದಂತೆ ಅತೀ ದೊಡ್ಡ ಬದಲಾವಣೆ ಮಾಡಿದ ಮಮತಾ!
ಪ್ರಮುಖ

ಸುವೇಂದು ಸಿಎಂ ಆಗ್ತಿದ್ದಂತೆ ಅತೀ ದೊಡ್ಡ ಬದಲಾವಣೆ ಮಾಡಿದ ಮಮತಾ!

Share
3 Min Read
SHARE

ಪಶ್ಚಿಮ ಬಂಗಾಳ  ಇತಿಹಾಸ ರಚನೆಯಾಗಿದೆ. ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದಾರೆ. ಇನ್ನು ಮುಂದೆ ಬಂಗಾಳದಲ್ಲಿ ಕೇಸರಿ ಕಲರವ ಜೋರಾಗಿ ಇರಲಿದೆ.

ಈ ಮಧ್ಯೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ಹಠ ಹಿಡಿದಿದ್ದ ಮಮತಾ ಬ್ಯಾನರ್ಜಿ ಸದ್ದಿಲ್ಲದೇ ತಮ್ಮ ಸೋಲನ್ನು ಒಪ್ಪಿಕೊಂಡಂತಿದೆ. ಅದಕ್ಕೆ ಪ್ರಮುಖ ಸಾಕ್ಷಿ ಅವರೇ ಮಾಡಿರುವ ಈ ಬದಲಾವಣೆ.

ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಬಂದ ಆಘಾತಕಾರಿ ಸೋಲಿನ ನಂತರವೂ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಮಮತಾ ಬ್ಯಾನರ್ಜಿ ಕೆಲ ದಿನ ಹಿಂಜರಿದಿದ್ದರು. ಆದರೆ ಈಗ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯ ಬಯೋವನ್ನು ಬದಲಾಯಿಸಿರುವುದು, ತಮ್ಮ ದೀರ್ಘಾವಧಿಯ ಆಡಳಿತಕ್ಕೆ ಅಂತ್ಯವಾಯಿತು ಎಂಬುದನ್ನು ಅವರು ಒಳಗೊಳಗೆ ಒಪ್ಪಿಕೊಂಡಿದ್ದಾರೆ ಎಂಬ ಸೂಚನೆ ನೀಡುತ್ತಿದೆ.

ಬಂಗಾಳದ ಸಂಪೂರ್ಣ ಚಿತ್ರಣ ಬದಲು

ಹೌದು, ಅತ್ತ ಸುವೇಂದು ಅಧಿಕಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಂಗಾಳದ ಸಂಪೂರ್ಣ ಚಿತ್ರಣ ಬದಲಾಗಿದೆ. ಕೊಲ್ಕತ್ತಾ ಪೊಲೀಸರು ಕೂಡ ಮಮತಾ ಬ್ಯಾನರ್ಜಿ, ಅಭಿಷೇಕ್​ ಬ್ಯಾನರ್ಜಿ ಮತ್ತು ಟಿಎಂಸಿ ನಾಯಕರನ್ನು ಅನ್​ ಫಾಲೋ ಮಾಡಿ, ಬಿಜೆಪಿ ನಾಯಕರನ್ನು ಫಾಲೋ ಮಾಡಲು ಶುರುಮಾಡಿದೆ. ಈ ಬೆನ್ನಲ್ಲೇ ಇತ್ತ ಮಮತಾ ಬ್ಯಾನರ್ಜಿ ತಮ್ಮ ಸೋಲನ್ನು ಸದ್ದಿಲ್ಲದೇ ಒಪ್ಪಿಕೊಂಡಂತಿದ್ದು, ತಮ್ಮ ಎಕ್ಸ್​ ಖಾತೆಯಲ್ಲಿ ಬಯೋ ಬದಲಾವಣೆ ಮಾಡಿದ್ದಾರೆ.

ತಮ್ಮ ಬಯೋ ಬದಲಿಸಿದ ಮಮತಾ ಬ್ಯಾನರ್ಜಿ!

ಹಿಂದಿನಂತೆ ತಮ್ಮನ್ನು ‘ಗೌರವಾನ್ವಿತ ಮುಖ್ಯಮಂತ್ರಿ, ಪಶ್ಚಿಮ ಬಂಗಾಳ’ ಎಂದು ಪರಿಚಯಿಸಿದ್ದ ಮಮತಾ, ಈಗ ತಮ್ಮ ಬಯೋದಲ್ಲಿ ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಸಂಸ್ಥಾಪಕ ಅಧ್ಯಕ್ಷೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (15, 16 ಮತ್ತು 17 ನೇ ವಿಧಾನಸಭೆ)’ ಎಂದು ಬರೆದಿದ್ದಾರೆ. ಇದು ಅವರು ಈಗಿನ ಮುಖ್ಯಮಂತ್ರಿಯಲ್ಲ, ಹಿಂದಿನ ಅವಧಿಗಳ ಮುಖ್ಯಮಂತ್ರಿಯಾಗಿದ್ದರು ಎಂಬ ಸ್ಪಷ್ಟ ಸಂದೇಶವಾಗಿದೆ. ಈ ಬದಲಾವಣೆ ಅವರು ಸದ್ದಿಲ್ಲದೇ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾದ ದಿನವೇ ಬದಲಾವಣೆ!

ಈ ಬದಲಾವಣೆ, ಅವರ ಹಳೆಯ ಆಪ್ತ ಮತ್ತು ಈಗಿನ ರಾಜಕೀಯ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ನಡೆದಿದೆ. ಅಧಿಕಾರಿ ಮುಖ್ಯಮಂತ್ರಿಯಾದುದರಿಂದ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರಕ್ಕೆ ದಾರಿ ತೆರೆದಿದ್ದು, ಸುಮಾರು ಒಂದು ದಶಕಕ್ಕಿಂತ ಹೆಚ್ಚು ಕಾಲ ರಾಜ್ಯ ರಾಜಕಾರಣವನ್ನು ಆಳಿದ ತೃಣಮೂಲ ಕಾಂಗ್ರೆಸ್‌ ಪ್ರಾಬಲ್ಯಕ್ಕೆ ದೊಡ್ಡ ಬ್ರೇಕ್ ಬಿದ್ದಿದೆ.

ಮಮತಾ ಬ್ಯಾನರ್ಜಿ 2011 ರಲ್ಲಿ ಎಡರಂಗದ 34 ವರ್ಷಗಳ ನಿರಂತರ ಆಳ್ವಿಕೆಯನ್ನು ಕೊನೆಗೊಳಿಸಿ ಅಧಿಕಾರಕ್ಕೆ ಬಂದಿದ್ದರು. ಅವರ ನಾಯಕತ್ವದಲ್ಲಿ ಟಿಎಂಸಿ 3 ಬಾರಿ ನಿರಂತರವಾಗಿ ವಿಧಾನಸಭಾ ಚುನಾವಣೆಯನ್ನು ಗೆದ್ದಿತ್ತು. ಅವರು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ದೊಡ್ಡ ವಿರೋಧಿ ಮುಖವಾಗಿ ಪರಿಣಮಿಸಿದ್ದರು. ಆದರೆ 2026 ರ ಚುನಾವಣೆಯಲ್ಲಿ ಬಿಜೆಪಿ ತೃಣಮೂಲದ ಭದ್ರಕೋಟೆ ಎಂದುಕೊಂಡಿದ್ದ ಅನೇಕ ಪ್ರದೇಶಗಳಲ್ಲೂ ತಳಮಟ್ಟಕ್ಕೆ ನುಗ್ಗಿ ದೊಡ್ಡ ಮುನ್ನಡೆ ಸಾಧಿಸಿತು. ಈ ಫಲಿತಾಂಶ ಮಮತಾ ಅವರ ರಾಜಕೀಯ ಬದುಕಿನಲ್ಲಿಯೇ ಅತಿದೊಡ್ಡ ಹಿನ್ನಡೆಯಾಗಿ ಕಾಣಿಸಿತು.

ಸದ್ದಿಲ್ಲದೇ ಸೋಲು ಒಪ್ಪಿಕೊಂಡ್ರಾ ಮಮತಾ ಬ್ಯಾನರ್ಜಿ?

ಫಲಿತಾಂಶ ಪ್ರಕಟವಾದ ತಕ್ಷಣ ಮಮತಾ ರಾಜೀನಾಮೆ ನೀಡಲು ನಿರಾಕರಿಸಿ, ಸರ್ಕಾರ ರಚನೆಗೆ ಸಂಬಂಧಿಸಿದ ಸಾಂವಿಧಾನಿಕ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೂ ತಾವು ಸ್ಥಾನದಲ್ಲೇ ಇರುವುದು ಸರಿಯೆಂದು ವಿವರಿಸಿದ್ದರು. ಈ ನಿಲುವು ಬಿಜೆಪಿ ನಾಯಕರ ಟೀಕೆಗೆ ಗುರಿಯಾಯಿತು. ಜನತೆ ಸ್ಪಷ್ಟವಾಗಿ ಸರ್ಕಾರ ಬದಲಾವಣೆಗೆ ತೀರ್ಪು ನೀಡಿರುವಾಗ, ನಿವೃತ್ತಿಯಾಗಬೇಕಾದ ಮುಖ್ಯಮಂತ್ರಿ ಅಧಿಕಾರ ವರ್ಗಾವಣೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಂತಹ ಸಂದರ್ಭದಲ್ಲೇ ಮಮತಾ ತಮ್ಮ ಸಾಮಾಜಿಕ ಮಾಧ್ಯಮ ಬಯೋವನ್ನು ಬದಲಾಯಿಸಿರುವುದು, ಚುನಾವಣಾ ತೀರ್ಪನ್ನು ಅವರು ಈಗ ಸ್ವೀಕರಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕರಾಗಿ ಹೊಸ ಪಾತ್ರಕ್ಕೆ ತಯಾರಾಗುತ್ತಿದ್ದಾರೆ ಎಂಬ ಸಾರ್ವಜನಿಕ ಸೂಚನೆಯಾಗಿ ನೀಡಲಾಗುತ್ತಿದೆ. ಹೊರಗೆ ನೇರವಾಗಿ ಹೇಳದೇ ಇದ್ದರೂ, ಈ ಸಣ್ಣ ಬದಲಾವಣೆ ದೊಡ್ಡ ರಾಜಕೀಯ ಸಂದೇಶವನ್ನು ಹೊತ್ತಿದೆ.

IFS topper ಕರ್ನಾಟಕದ ರೈತನ ಮಗನಿಗೆ ಐಎಫ್ಎಸ್ ಟಾಪರ್ ಪಟ್ಟ!

TAGGED:Mamata made a huge change as Suvendu became CM!
Share This Article
Facebook Twitter Copy Link Print
Previous Article IFS topper ಕರ್ನಾಟಕದ ರೈತನ ಮಗನಿಗೆ ಐಎಫ್ಎಸ್ ಟಾಪರ್ ಪಟ್ಟ!
Next Article Accident ಲಾರಿ- ಕಾರು ಡಿಕ್ಕಿ: ಮಂಡ್ಯದ ನಾಲ್ವರ ಸಾವು

Popular Posts

Ayodhya Ram Mandir ದೇಣಿಗೆ ವಿವಾದದ ಬೆನ್ನಲ್ಲೇ ಜುಲೈ 22 ರಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಮಹತ್ವದ ಸಭೆ

1 Min Read

Pressure Cooker ನಿಮ್ಮ ಮನೆಯ ಕುಕ್ಕರ್ ವಿಷಲ್ ಸರಿಯಾಗಿ ಬರ್ತಿಲ್ವಾ? ಜಿಡ್ಡು ಮತ್ತು ಕೊಳಕು ನಿವಾರಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

1 Min Read

Landslide ವರುಣನ ಆರ್ಭಟ; ಭೀಕರ ಪ್ರವಾಹ, ಭೂಕುಸಿತಕ್ಕೆ 11 ಬಲಿ, ಹೈ ಅಲರ್ಟ್ ಘೋಷಣೆ

2 Min Read

Tattoo HIV Case ಟ್ಯಾಟೂ ಪ್ರೇಮಿಗಳೇ ಎಚ್ಚರ..! ಹಚ್ಚೆ ಹಾಕಿಸಿಕೊಂಡ ಮಹಿಳೆಗೆ ತಗುಲಿದ ಎಚ್‌ಐವಿ ಸೋಂಕು

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ

2 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read
ದೇಶಆರೋಗ್ಯಪ್ರಮುಖ

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read
ದೇಶಪ್ರಮುಖ

Techie mysterious death ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹೊತ್ತೊಯ್ದ ಯುವತಿ ನಿಗೂಢ ಸಾವು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?