Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Revenue deficit ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಆದಾಯ ಕೊರತೆ: ಕೇಂದ್ರ ಹಣಕಾಸು ಇಲಾಖೆ ಎಚ್ಚರಿಕೆ
ಕರ್ನಾಟಕದೇಶಪ್ರಮುಖ

Revenue deficit ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಆದಾಯ ಕೊರತೆ: ಕೇಂದ್ರ ಹಣಕಾಸು ಇಲಾಖೆ ಎಚ್ಚರಿಕೆ

Share
1 Min Read
SHARE

newsics.com/ನ್ಯೂಸಿಕ್ಸ್

ನವದೆಹಲಿ: ದೇಶದ ಪ್ರಮುಖ ರಾಜ್ಯಗಳು ಆರ್ಥಿಕ ಸಂಕಷ್ಟದತ್ತ ಮುನ್ನುಗ್ಗುತ್ತಿವೆಯೇ? ಕೇಂದ್ರ ಹಣಕಾಸು ಇಲಾಖೆಯ ಇತ್ತೀಚಿನ ವರದಿ ಇಂತಹದ್ದೊಂದು ಗಂಭೀರ ಮುನ್ಸೂಚನೆಯನ್ನು ನೀಡಿದೆ.

ಆದಾಯ ಕೊರತೆ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯಿಂದಾಗಿ ಕರ್ನಾಟಕ ಸೇರಿದಂತೆ ಒಟ್ಟು 9 ರಾಜ್ಯಗಳು ಶೀಘ್ರದಲ್ಲೇ ಭಾರಿ ಹಣಕಾಸು ಒತ್ತಡಕ್ಕೆ ಸಿಲುಕಲಿವೆ ಎಂದು ಕೇಂದ್ರ ಎಚ್ಚರಿಸಿದೆ.

ಕೇಂದ್ರ ಹಣಕಾಸು ಇಲಾಖೆಯ ವಿಶ್ಲೇಷಣೆಯ ಪ್ರಕಾರ, 2026-27ನೇ ಹಣಕಾಸು ಸಾಲಿನಲ್ಲಿ ದೇಶದ 18 ದೊಡ್ಡ ರಾಜ್ಯಗಳ ಪೈಕಿ ಅರ್ಧದಷ್ಟು ಅಂದರೆ 9 ರಾಜ್ಯಗಳು ಆರ್ಥಿಕ ಅಸ್ಥಿರತೆಯನ್ನು ಎದುರಿಸಲಿವೆ. ರಾಜಸ್ವ ಸಂಗ್ರಹದ ಕೊರತೆ ಮತ್ತು ಅನಿಯಂತ್ರಿತ ಸಾಲದ ಪ್ರಮಾಣವೇ ಈ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ.

ಯಾವ ರಾಜ್ಯದ ಸ್ಥಿತಿ ಎಷ್ಟು ಗಂಭೀರ?

ವರದಿಯ ಅನ್ವಯ ಅತಿ ಹೆಚ್ಚು ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿ ನೋಡುವುದಾದರೆ, ಹಿಮಾಚಲ ಪ್ರದೇಶ ಶೇ.2.4 ರಷ್ಟು ಕೊರತೆಯೊಂದಿಗೆ ಮೊದಲ ಸ್ಥಾನ ದಲ್ಲಿದೆ 2ನೇ ಸ್ಥಾನದಲ್ಲಿ ಪಂಜಾಬ್ (ಶೇ.2.2ಕೊರತೆ), 3ನೇ ಸ್ಥಾನದಲ್ಲಿ ಕೇರಳ ( ಶೇ2.1), 4ನೇ ಸ್ಥಾನದಲ್ಲಿ ಆಂಧ್ರಪ್ರದೇಶ, ರಾಜಸ್ಥಾನ ( ಶೇ 1.1), 5ನೇ ಸ್ಥಾನದಲ್ಲಿ ಹರಿಯಾಣ (ಶೇ 0.9), 6ನೇ ಸ್ಥಾನದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ( ಶೇ 0.7) ಹಾಗೂ ಛತ್ತೀಸ್‌ಗಢ (ಶೇ 0.3) ಸ್ಥಾನದಲ್ಲಿವೆ.

ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ

ಆರ್ಥಿಕವಾಗಿ ಸದೃಢವೆಂದು ಪರಿಗಣಿಸಲ್ಪಟ್ಟಿರುವ ಕರ್ನಾಟಕವು ಶೇ. 0.7 ರಷ್ಟು ಆದಾಯ ಕೊರತೆಯೊಂದಿಗೆ ಆರನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರವು ತನ್ನ ಸಾಲದ ಪ್ರಮಾಣವನ್ನು ನಿಯಂತ್ರಿಸದಿದ್ದರೆ ಮತ್ತು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳದಿದ್ದರೆ ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದು ಕೇಂದ್ರದ ವರದಿ ಸೂಚಿಸಿದೆ.

 

Friend for rent ಭಾರತಕ್ಕೂ ಬಂತು ಫ್ರೆಂಡ್ ಫಾರ್ ರೆಂಟ್ ಸಂಸ್ಕೃತಿ! ಏನಿದು ಹೊಸ ಟ್ರೆಂಡ್?

Locked house beat ಪೊಲೀಸರಿಗೆ ಹೇಳಿ ಆರಾಮಾಗಿ ಪ್ರವಾಸ ಮಾಡಿ… ಇಂದಿನಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಂ ಶುರು

Smallest fox ಜಗತ್ತಿನ ಅತಿ ಸಣ್ಣ ಗಾತ್ರದ ಫೆನ್ನೆಕ್ ಫಾಕ್ಸ್ ಪತ್ತೆ!

TAGGED:Revenue deficit in 9 states including Karnataka: Union Finance Department warns
Share This Article
Facebook Twitter Copy Link Print
Previous Article Nursery rhymes 12 ವರ್ಷದ ಬಾಲಕಿಯಿಂದ 38 ಶಿಶುಗೀತೆ! ಖುಷಿಪಟ್ಟ ಚೇತನ್ ಭಗತ್
Next Article Moringa leaves ಇಮ್ಯುನಿಟಿ ಬೂಸ್ಟರ್ ನುಗ್ಗೆ ಸೊಪ್ಪು ತಿನ್ನದಿದ್ದರೆ ಹತ್ತಾರು ಆರೋಗ್ಯ ಸಮಸ್ಯೆ!

Popular Posts

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read

You Might Also Like

ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read
ಕರ್ನಾಟಕದೇಶಪ್ರಮುಖ

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?