Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Land conversion ಇನ್ನು ತಿಂಗಳೊಳಗೇ ಆಗಲಿದೆ ಭೂ ಪರಿವರ್ತನೆ! ಸ್ವಯಂಚಾಲಿತ ಕ್ರಮ ಜಾರಿಮಾಡಿದ ಸರ್ಕಾರ
ಕರ್ನಾಟಕಪ್ರಮುಖ

Land conversion ಇನ್ನು ತಿಂಗಳೊಳಗೇ ಆಗಲಿದೆ ಭೂ ಪರಿವರ್ತನೆ! ಸ್ವಯಂಚಾಲಿತ ಕ್ರಮ ಜಾರಿಮಾಡಿದ ಸರ್ಕಾರ

Share
1 Min Read
SHARE

newsics.com

ಬೆಂಗಳೂರು: ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲು ಸಲ್ಲಿಸುವ ‘ಅಫಿಡವಿಟ್ ಆಧಾರಿತ ಭೂ ಪರಿವರ್ತನೆ’ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಸರಳಗೊಳಿಸಿದೆ.

ನಿಗದಿತ 30 ದಿನಗಳೊಳಗೆ ಜಿಲ್ಲಾಧಿಕಾರಿಗಳು ಯಾವುದೇ ತೀರ್ಮಾನ ಕೈಗೊಳ್ಳದಿದ್ದಲ್ಲಿ, ಅದನ್ನು ‘ಪರಿಭಾವಿತ ಭೂ ಪರಿವರ್ತನೆ’ (Deemed Conversion) ಎಂದು ಪರಿಗಣಿಸಿ ಸ್ವಯಂಚಾಲಿತವಾಗಿ ಅನುಮೋದನೆ ನೀಡಲು ಕಂದಾಯ ಇಲಾಖೆ ಆದೇಶಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಅಫಿಡವಿಟ್ ಆಧಾರಿತ ಅರ್ಜಿಗಳನ್ನು ಸಲ್ಲಿಸಿದಾಗ, ಅಧಿಕಾರಿಗಳು ಕಾಲಮಿತಿಯೊಳಗೆ ಕಾರ್ಯನಿರ್ವಹಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.

ಕಾಲಮಿತಿ ನಿಗದಿ:
ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ವಿವಿಧ ಹಂತದ ಅಧಿಕಾರಿಗಳಿಗೆ ಈ ಕೆಳಗಿನಂತೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ:

ತಹಶೀಲ್ದಾರರು ಮತ್ತು ಅರಣ್ಯ ಇಲಾಖೆ: ಅಭಿಪ್ರಾಯ ನೀಡಲು 15 ದಿನಗಳು.

ಜಿಲ್ಲಾಧಿಕಾರಿ ಕಚೇರಿ ವಿಷಯ ನಿರ್ವಾಹಕರು: 5 ದಿನಗಳು.

ಅಪರ ಜಿಲ್ಲಾಧಿಕಾರಿಗಳು: 5 ದಿನಗಳು.

ಜಿಲ್ಲಾಧಿಕಾರಿಗಳು: 5 ದಿನಗಳು.

ಸ್ವಯಂಚಾಲಿತ ಅನುಮೋದನೆ ಹೇಗೆ?

ಅರ್ಜಿ ಸಲ್ಲಿಸಿದ ದಿನಾಂಕದಿಂದ ಒಟ್ಟು 30 ಕೆಲಸದ ದಿನಗಳೊಳಗೆ ಜಿಲ್ಲಾಧಿಕಾರಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ, ತಂತ್ರಾಂಶದ ಮೂಲಕವೇ ಆ ಅರ್ಜಿಗೆ ಅನುಮೋದನೆ ದೊರೆಯಲಿದೆ. ತಕ್ಷಣವೇ ಅರ್ಜಿದಾರರ ಲಾಗಿನ್‌ಗೆ ಶುಲ್ಕ ಪಾವತಿಸಲು ಸಂದೇಶ ಹೋಗಲಿದ್ದು, ಶುಲ್ಕ ಪಾವತಿಸಿದ ನಂತರ ಸ್ವಯಂಚಾಲಿತವಾಗಿ ಭೂ ಪರಿವರ್ತನಾ ಆದೇಶ ಸೃಜನೆಯಾಗಲಿದೆ.

ಸಾರ್ವಜನಿಕರು ಭೂ ಪರಿವರ್ತನೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕವಾಗಿ ಕೆಲಸ ನಿರ್ವಹಿಸುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ ಎಂದು ಕಂದಾಯ ಆಯುಕ್ತಾಲಯ ತಿಳಿಸಿದೆ.

ಮೌತ್‌ವಾಶ್ ಬಳಕೆ ಹೆಚ್ಚಾದರೆ ಹೈ ಬಿಪಿ ಬರುತ್ತಾ?

 

ಬೆಡ್‌ರೂಮ್‌ಗೆ ತಟ್ಟಿದ ಇರಾನ್‌ ಯುದ್ಧದ ಬಿಸಿ, ಹುಡುಕಿದ್ರೂ ಸಿಗ್ತಿಲ್ಲ ಕಾಂಡೋಮ್‌

 

40ರ ಹರೆಯದ ನಂತರ ಆರೋಗ್ಯ ಹದಗೆಡುತ್ತಿದೆಯೇ?

 

ರಾಜ್ಯದಲ್ಲಿ ಬಿಸಿಲಾಘಾತಕ್ಕೆ ಎರಡನೇ ಬಲಿ

 

ನಾನು ಒಳ್ಳೆಯ ಮಗನಾಗಲು ಆಗಲೇ ಇಲ್ಲ’: ನಲಪಾಡ್ ಈ ರೀತಿ ಹೇಳಿದ್ಯಾಕೆ

 

Reservoirs are drying up ಬಿಸಿ ಗಾಳಿ, ಪ್ರಖರ ಬಿಸಿಲು…ಬರಿದಾಗುತ್ತಿದೆ ರಾಜ್ಯದ ಜಲಾಶಯಗಳ ಒಡಲು

 

TAGGED:Land conversion will happen within a month! Government has implemented automatic measures
Share This Article
Facebook Twitter Copy Link Print
Previous Article Reservoirs are drying up ಬಿಸಿ ಗಾಳಿ, ಪ್ರಖರ ಬಿಸಿಲು…ಬರಿದಾಗುತ್ತಿದೆ ರಾಜ್ಯದ ಜಲಾಶಯಗಳ ಒಡಲು
Next Article Court orders to register FIR ತಮಾಷೆ ಮಾತು ತಂದ ಆಪತ್ತು: ಗೃಹಸಚಿವ ಪರಮೇಶ್ವರ ವಿರುದ್ಧ FIR ದಾಖಲಿಸಿ ತನಿಖೆ ನಡೆಸಲು ಕೋರ್ಟ್ ಸೂಚನೆ, ಏನಾಯ್ತು?

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?