Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ
ಲೈಫ್‌ಸ್ಟೈಲ್

ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ

Share
2 Min Read
SHARE

ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕಸವಿದ್ರೂ ಜಿರಳೆ ಕಾಟ ಶುರುವಾಗುತ್ತದೆ. ಈ ಜಿರಳೆ ಸದ್ದಿಲ್ಲದೆ ನಾನಾ ಖಾಯಿಲೆ ಹರಡುತ್ತದೆ. ಜಿರಳೆ ಆಹಾರವನ್ನು ವಿಷಗೊಳಿಸುವುದಲ್ಲದೆ ಟೈಪಾಯಿಡ್, ಅಲರ್ಜಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಮಾರ್ಕೆಟ್ ನಲ್ಲಿ ಜಿರಳೆ ಸ್ಪ್ರೇ ಸಾಕಷ್ಟಿದೆ. ಆದ್ರೆ ಅವು ರಾಸಾಯನಿಕವಾಗಿರೋದ್ರಿಂದ ಬಳಕೆ ಬಹಳ ಅಪಾಯಕಾರಿ. ನೀವು ಮನೆಯಲ್ಲೇ ನೈಸರ್ಗಿಕ ಪದಾರ್ಥ ಬಳಸಿ ಜಿರಳೆ ಓಡಿಸಬಹುದು.

ಅಡುಗೆಮನೆಯಲ್ಲಿರುವ ಲವಂಗಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಜಿರಳೆಗಳನ್ನು ಹೊಡೆದೋಡಿಸುತ್ತದೆ. ಜಿರಳೆಗಳು ಲವಂಗಗಳ ಬಲವಾದ ವಾಸನೆಯನ್ನು ಸಹಿಸುವುದಿಲ್ಲ. ಅಡುಗೆಮನೆಯ ಡ್ರಾಯರ್ಗಳು ಮತ್ತು ಕ್ಯಾಬಿನೆಟ್ಗಳಲ್ಲಿ 8-10 ಲವಂಗಗಳನ್ನು ಇರಿಸಿ. ಅವುಗಳ ವಾಸನೆಗೆ ಜಿರಳೆ ಬರೋದಿಲ್ಲ.

ಬೇಕಿಂಗ್ ಸೋಡಾವನ್ನು ಜಿರಳೆ ತಿನ್ನುತ್ತಿದ್ದಂತೆ ಅದು ಸಾಯುತ್ತದೆ. ಅಡಿಗೆ ಸೋಡಾ ಮತ್ತು ಪುಡಿಮಾಡಿದ ಸಕ್ಕರೆಯನ್ನು ಸಮಾನ ಭಾಗದಲ್ಲಿ ಮಿಕ್ಸ್ ಮಾಡಿ ಅಡುಗೆಮನೆಯ ಮೂಲೆಗಳಲ್ಲಿ, ಸಿಂಕ್ ಅಡಿಯಲ್ಲಿ ಮತ್ತು ಕ್ಯಾಬಿನೆಟ್ಗಳ ಹಿಂದೆ ಹಾಕಬೇಕು. ಸಕ್ಕರೆ ವಾಸನೆಗೆ ಅಲ್ಲಿಗೆ ಬರುವ ಜಿರಳೆ ಬೇಕಿಂಗ್ ಸೋಡಾ ತಿಂದು ಸಾಯುತ್ತದೆ.

ನಮ್ಮ ಆಹಾರದ ಪರಿಮಳನವನ್ನು ಬೇವಿನ ಎಲೆ ಹೆಚ್ಚಿಸುತ್ತೆ. ಆದ್ರೆ ಜಿರಳೆಗಳು ಅವುಗಳ ವಾಸನೆಯನ್ನು ಇಷ್ಟಪಡುವುದಿಲ್ಲ. 5-6 ಬೇವಿನ ಎಲೆಗಳನ್ನು ಪುಡಿ ಮಾಡಿ ಅವುಗಳನ್ನು ಅಡುಗೆಮನೆಯ ಮೂಲೆಗಳಲ್ಲಿ ಇರಿಸಿ. ಈ ವಾಸನೆಗೆ ತಕ್ಷಣವೇ ಜಿರಳೆಗಳನ್ನು ಓಡುತ್ತವೆ.

ನಿಮ್ಮ ಮನೆಯಲ್ಲಿ ಜಿರಳೆ ಸಂಖ್ಯೆ ಹೆಚ್ಚಾಗಿದ್ದರೆ ನೀವು ಬೇವಿನ ಎಣ್ಣೆಯನ್ನು ಬಳಸಬಹುದು. ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಅದನ್ನು ಜಿರಳೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ. ನೀವು ಬೇವಿನ ಪುಡಿಯನ್ನು ಕೂಡ ಜಿರಳೆ ಇರುವ ಜಾಗಕ್ಕೆ ಸಿಂಪಡಿಸಬಹುದು.

ಅಡುಗೆಮನೆಯಿಂದ ಜಿರಳೆಗಳನ್ನು ಓಡಿಸಲು ವಿನೆಗರ್ ಕೂಡ ಅತ್ಯುತ್ತಮ ಮತ್ತು ಸುಲಭವಾದ ಮಾರ್ಗವಾಗಿದೆ. ಬಿಳಿ ವಿನೆಗರ್ ಮತ್ತು ನೀರನ್ನು ಸ್ಪ್ರೇ ಬಾಟಲಿಯಲ್ಲಿ ಸಮಾನ ಪ್ರಮಾಣದಲ್ಲಿ ಮಿಕ್ಸ್ ಮಾಡಿ. ರಾತ್ರಿ ಅಡುಗೆಮನೆ ಸ್ವಚ್ಛಗೊಳಿಸಿದ ನಂತ್ರ, ಗ್ಯಾಸ್ ಸ್ಟೌವ್ ಮತ್ತು ಸಿಂಕ್ ಸುತ್ತಲೂ ಸಿಂಪಡಿಸಿ.

ದಾಲ್ಚಿನಿ ಕೇವಲ ಮಸಾಲೆ ಪದಾರ್ಥವಲ್ಲ. ಜಿರಳೆಗಳಿಗೆ ನಿರೋಧಕವಾಗಿಯೂ ಕೆಲ್ಸ ಮಾಡುತ್ತದೆ. ಅಡುಗೆಮನೆಯ ಮೂಲೆಗಳಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ. ಇದರ ಬಲವಾದ ವಾಸನೆಯು ಜಿರಳೆ ಬರೋದನ್ನು ತಡೆಯುತ್ತದೆ.

ನಿಂಬೆ ರಸ ಕ್ಲೀನಿಂಗ್ ಎಜೆಂಟ್ ಆಗಿ ಕೆಲ್ಸ ಮಾಡುತ್ತದೆ. ನೀವು ಕೆಮಿಕಲ್ ಇಲ್ಲದ ಈ ನಿಂಬೆ ರಸವನ್ನು ಜಿರಳೆ ಓಡಿಸಲು ಬಳಸಬಹುದು. ಎರಡು ನಿಂಬೆಹಣ್ಣಿನ ರಸವನ್ನು ಬಕೆಟ್ ನೀರಿನಲ್ಲಿ ಬೆರೆಸಿ ಅಡುಗೆಮನೆಯ ನೆಲವನ್ನು ಒರೆಸಿ. ನಿಂಬೆಯ ಸಿಟ್ರಸ್ ವಾಸನೆ ಮತ್ತು ಶುಚಿತ್ವ ಜಿರಳೆಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ.

ಪುದೀನಾ ಎಣ್ಣೆ ವಾಸನೆಯನ್ನು ಜಿರಳೆಗಳು ಸಹಿಸೋದಿಲ್ಲ. ನೀರಿಗೆ ಕೆಲವು ಹನಿ ಪುದೀನಾ ಎಣ್ಣೆಯನ್ನು ಬೆರೆಸಿ ಸಿಂಪಡಿಸಿ. ಅಡುಗೆ ಮನೆಯಲ್ಲಿ ಪುದೀನಾ ಎಣ್ಣೆ ಹಾಕ್ತಿದ್ದಂತೆ ಜಿರಳೆ ಅಲ್ಲಿಂದ ಕಾಲ್ಕೀಳುತ್ತವೆ.

ಸೌತೆಕಾಯಿ ಸಿಪ್ಪೆಯನ್ನು ನಾವು ಕಸಕ್ಕೆ ಹಾಕ್ತೇವೆ. ಆದ್ರೆ ಈ ಸೌತೆಕಾಯಿ ಸಿಪ್ಪೆ ಕೂಡ ಜಿರಳೆ ಓಡಿಸಲು ಸಹಾಯ ಮಾಡುತ್ತದೆ. ಸೌತೆಕಾಯಿ ಸಿಪ್ಪೆಗಳನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಹಾಕಿ ರಾತ್ರಿಯಿಡೀ ಬಿಡಿ. ಸೌತೆಕಾಯಿ ಮತ್ತು ಅಲ್ಯೂಮಿನಿಯಂನ ಪ್ರತಿಕ್ರಿಯೆ ಜಿರಳೆ ಸಹಿಸಲಾಗದ ವಾಸನೆಯನ್ನು ಉಂಟುಮಾಡುತ್ತದೆ. ಇದನ್ನು ನೀವು ಕಿಚನ್ ನಲ್ಲಿ ಸಿಂಪಡಿಸಿ.

 

ಇನ್ಮುಂದೆ SSLC ಪಾಸ್ ಆಗಲು 173 ಅಂಕ ಪಡೆಯೋದು ಕಡ್ಡಾಯ

TAGGED:No need for spraythis thing in the kitchen keeps cockroaches away
Share This Article
Facebook Twitter Copy Link Print
Previous Article ಇನ್ಮುಂದೆ SSLC ಪಾಸ್ ಆಗಲು 173 ಅಂಕ ಪಡೆಯೋದು ಕಡ್ಡಾಯ
Next Article ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವ ಖಾಸಗಿ ಕಂಪನಿ ಉದ್ಯೋಗಿ

Popular Posts

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

You Might Also Like

ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಲೈಫ್‌ಸ್ಟೈಲ್

ಮಹಿಳೆಯರೇ. ಗಾಜಿನ ಬಳೆ ಧರಿಸೋದು ಎಷ್ಟು ಪ್ರಯೋಜನಕಾರಿ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?