https://youtube.com/shorts/AWyQA9JMFI4?si=6teca9JBs0VZQurx
newsics.com
ನವದೆಹಲಿ: ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರು ದಿಢೀರ್ ರಾಜೀನಾಮೆ ನೀಡಿದೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ.
2022ರಲ್ಲಿ ನೇಮಕಗೊಂಡಿದ್ದ ಇವರ ಅಧಿಕಾರಾವಧಿ 2027ರವರೆಗೆ ಇತ್ತಾದರೂ, ವೈಯಕ್ತಿಕ ಅಥವಾ ಇತರ ಕಾರಣಗಳಿಂದಾಗಿ ಅವರು ಅವಧಿಗೂ ಮುನ್ನವೇ ಹೊರನಡೆದಿದ್ದಾರೆ. ಏರ್ ಇಂಡಿಯಾದ ಬದಲಾವಣೆಯ ಪರ್ವದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಲ್ಸನ್ ಅವರ ನಿರ್ಗಮನವು ವಾಯುಯಾನ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ಐದು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ಏರ್ ಇಂಡಿಯಾದ ಸಿಇಒ ಆಗಿ ಅವರ ಅಧಿಕಾರಾವಧಿಯು ಜುಲೈ 2027 ರಲ್ಲಿ ಮುಕ್ತಾಯಗೊಳ್ಳಬೇಕಿತ್ತು. ವಿಲ್ಸನ್ ಅವರು ನ್ಯೂಜಿಲೆಂಡ್‌ನ ಕ್ಯಾಂಟರ್ಬರಿ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಮಾಸ್ಟರ್ ಆಫ್ ಕಾಮರ್ಸ್ (ಪ್ರಥಮ ದರ್ಜೆ ಗೌರವ) ಪದವಿ ಪಡೆದಿದ್ದಾರೆ.
https://www.newsics.com/2026/04/07/bomb-attack-on-house-in-manipur-two-children-killed-on-the-spot/