Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮೊನಾಲಿಸಾ ಮದುವೆ ವಿವಾದ : ಮಧ್ಯಪ್ರದೇಶದಲ್ಲಿ ದೂರು ದಾಖಲು!
ದೇಶಪ್ರಮುಖಮನರಂಜನೆ

ಮೊನಾಲಿಸಾ ಮದುವೆ ವಿವಾದ : ಮಧ್ಯಪ್ರದೇಶದಲ್ಲಿ ದೂರು ದಾಖಲು!

Share
2 Min Read
SHARE

https://youtube.com/shorts/1G3iDuCfqaQ?si=rbtHZp_4mD8cY9Sv

newsics.com

ಪೋಷಕರ ವಿರೋಧದ ನಡುವೆಯೂ ಕುಂಭಮೇಳ ವೈರಲ್‌ ಹುಡುಗಿ ಮೊನಾಲಿಸಾ ಭೋಸ್ಲೆ ಮೊಹಮ್ಮದ್ ಫರ್ಮಾನ್ ಜೊತೆ ಮದುವೆ ಆಗಿದ್ದಾರೆ. ಕಳೆದ ಆರು ತಿಂಗಳಿಂದ ಅವರಿಬ್ಬರು ಡೇಟಿಂಗ್ ಮಾಡಿದ್ದರೂ ಕೂಡ ವಿಷಯ ಬಹಿರಂಗ ಆಗಿರಲಿಲ್ಲ. ಇದೀಗ ಏಕಾಏಕಿ ಕೇರಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಾಗಿದ್ದಾರೆ.

ಇದೊಂದು ಅಂತರ್ಧಮೀಯ ಮದುವೆಯಾಗಿದ್ದು, ಲವ್​ ಜಿಹಾದ್​ ಎಂಬ ಆರೋಪದಿಂದಾಗಿ ವಿವಾದಕ್ಕೆ ಗುರಿಯಾಯಿತು. ಆದರೆ, ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮೊನಾಲಿಸಾ ಹೇಳಿಕೆ ನೀಡಿದ ಬಳಿಕ ವಿವಾದ ತಣ್ಣಾಗಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಮತ್ತೊಂದು ವಿವಾದ ಭುಗಿಲೆದ್ದಿದೆ. ಅದೇನೆಂದರೆ, ಮೊನಾಲಿಸಾ ಇನ್ನು ಅಪ್ರಾಪ್ತೆ ಎಂಬ ಸುದ್ದಿ ಹರಿದಾಡುತ್ತಿದೆ.

ಮೊನಾಲಿಸಾಗೆ ಇನ್ನೂ 18 ವರ್ಷ ವಯಸ್ಸಾಗಿಲ್ಲ, ಆಕೆಗಿನ್ನೂ 16 ವರ್ಷ ಎಂಬ ಹೊಸ ವಾದದೊಂದಿಗೆ ಅದಕ್ಕೆ ಸಾಕ್ಷಿಯಾಗಿ ಮಧ್ಯಪ್ರದೇಶ ಸರ್ಕಾರದ ಜನನ ಪ್ರಮಾಣಪತ್ರವನ್ನು ವಿಶ್ವ ಹಿಂದೂ ಪರಿಷತ್​ ನೀಡಿದೆ. ಹೀಗಾಗಿ, ಇದೀಗ ಮೊನಾಲಿಸಾ ವಯಸ್ಸಿನ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿದೆ. ಅಲ್ಲದೆ, ಈ ಸಂಬಂಧ ಮಧ್ಯಪ್ರದೇಶದಲ್ಲಿ ದೂರು ಕೂಡ ದಾಖಲಾಗಿದೆ.

 

ಈ ವಿವಾಹ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್​ನ ಪ್ರಧಾನ ಕಾರ್ಯದರ್ಶಿ ಅನಿಲ್ ವಿಲಾಯಿಲ್ ಅವರು 2025, ಜನವರಿ 21 ರಂದು ಮೊನಾಲಿಸಾ ತಮ್ಮ 16 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಎಂದು ಡಿಜಿಪಿಗೆ ದೂರು ನೀಡಿದ್ದರು. ಆದಾಗ್ಯೂ, ಮದುವೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಇಬ್ಬರೂ ತಮ್ಮ ವಯಸ್ಸಿನ ಬಗ್ಗೆ ಆರೋಪಗಳನ್ನು ನಿರಾಕರಿಸಿದರು. ಅಲ್ಲದೆ, ಮೊನಾಲಿಸಾಗೆ 18 ವರ್ಷ ತುಂಬಿದೆ ಮತ್ತು ಇದನ್ನು ದೃಢಪಡಿಸಿದ ನಂತರವೇ ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಂಪನೂರು ಪೊಲೀಸರು ಬಹಿರಂಗಪಡಿಸಿದ್ದರು.

ಮಧ್ಯಪ್ರದೇಶ ಸರ್ಕಾರದ ಹೆಸರಿನಲ್ಲಿರುವ ಜನನ ಪ್ರಮಾಣಪತ್ರದ ಪ್ರಕಾರ, ಈ ಹೇಳೆಕೆಗಳೆಲ್ಲ ಸುಳ್ಳು. ಜನನ ಪ್ರಮಾಣಪತ್ರದಲ್ಲಿ ಮೊನಾಲಿಸಾಳ ಜನ್ಮ ದಿನಾಂಕವನ್ನು 2009, ಡಿಸೆಂಬರ್ 30ರ ಸಂಜೆ 5.30ಕ್ಕೆ ದಾಖಲಿಸಲಾಗಿದೆ. ಇದರ ಪ್ರಕಾರ, ಮೊನಾಲಿಸಾಗೆ 16 ವರ್ಷ, ಎರಡು ತಿಂಗಳು ಮತ್ತು 12 ದಿನಗಳು. ಭೋಪಾಲ್‌ನಲ್ಲಿರುವ ವಿಎಚ್‌ಪಿ ಕಾರ್ಯಕರ್ತರು ಈ ಜನನ ಪ್ರಮಾಣಪತ್ರವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ ಎಂದು ಅನಿಲ್ ವಿಲಾಯಿಲ್ ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಮಧ್ಯಪ್ರದೇಶದಲ್ಲಿ ಪ್ರಕರಣ ಕೂಡ ದಾಖಲಿಸಲಿದೆ.

https://www.newsics.com/2026/03/21/security-guard-performs-amazing-steps-to-the-song-baby-doll-with-young-women/

TAGGED:Monalisa marriage controversy: Complaint filed in Madhya Pradesh!
Share This Article
Facebook Twitter Copy Link Print
Previous Article ಯುವತಿಯರ ಜತೆ ಬೇಬಿ ಡಾಲ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಸೆಕ್ಯೂರಿಟಿ ಗಾರ್ಡ್ : ವೈರಲ್ ವಿಡಿಯೋ ನೋಡಿ
Next Article ಅಣ್ಣ ಗದರಿದ್ದಕ್ಕೆ ಮನನೊಂದು 10 ವರ್ಷದ ಬಾಲಕಿ ಆತ್ಮ*ಹತ್ಯೆ

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?