https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ರಾಯ್ಪುರ: ಅಣ್ಣ ಗದರಿದ್ದಕ್ಕೆ ಮನನೊಂದು 10 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್ ಗಢದ ಭಿಲಾಯಿಯ ದುರ್ಗ್ನಲ್ಲಿ ನಡೆದಿದೆ.
ಯಾವುದೋ ವಿಷಯಕ್ಕೆ ಅಣ್ಣ-ತಂಗಿ ನಡುವೆ ಜಗಳವಾಗಿದೆ. ಅಣ್ಣ ತನ್ನ ತಂಗಿಯನ್ನು ಗದರಿಸಿದ್ದಾನೆ. ಇದರಿಂದ ನೊಂದ ಬಾಲಕಿ ಮತ್ತೊಂದು ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ವೇಳೆ ಪೋಷಕರು ಮನೆಯಲ್ಲಿರಲಿಲ್ಲ. ಮನೆಗೆ ಬಂದು ನೋಡಿದಾಗ ಬಾಲಕಿ ನೇಣಿಗೆ ಕೊರಳೊಡ್ಡಿದ್ದಳು. ಕುಟುಂಬಸ್ಥರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಾಲಕಿ ತನ್ನ ಪೋಷಕರು ಮತ್ತು ಸಹೋದರನೊಂದಿಗೆ ದುರ್ಗ್‌ನ ಗಣೇಶ್ ನಗರದಲ್ಲಿ ವಾಸಿಸುತ್ತಿದ್ದಳು. ತಂದೆ ಚಾಲಕ ಮತ್ತು ತಾಯಿ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ದರಿಂದ, ಇಬ್ಬರೂ ಹೊರಗೆ ಹೋಗಿದ್ದರು. ಈ ಸಮಯದಲ್ಲಿ, ಅಣ್ಣ-ತಂಗಿ ನಡುವೆ ಜಗಳವಾಗಿದೆ. ಅಣ್ಣ ಬೈದನೆಂಬ ಕಾರಣಕ್ಕೆ ಬಾಲಕಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.
https://www.newsics.com/2026/03/21/monalisa-marriage-controversy-complaint-filed-in-madhya-pradesh/