https://youtube.com/shorts/LDfmKu7KOK0?si=Y4NKvWZkUj7zuhsW
newsics.com
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸದೆ ನುಣುಚಿಕೊಳ್ಳುವ ವಾಹನ ಸವಾರರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹ) ಎರಡನೇ ತಿದ್ದುಪಡಿ ನಿಯಮಗಳು, 2026’ ಅನ್ನು ಜಾರಿಗೆ ತಂದಿದೆ.
ಹೊಸ ನಿಯಮದಂತೆ, ಟೋಲ್ ಪಾವತಿಸದ ವಾಹನ ಮಾಲೀಕರಿಗೆ ಇ-ನೋಟಿಸ್ ನೀಡಲಾಗುತ್ತಿದ್ದು, 72 ಗಂಟೆಯೊಳಗೆ ಬಾಕಿ ಪಾವತಿಸದಿದ್ದರೆ ದುಪ್ಪಟ್ಟು ದಂಡ ತೆರಬೇಕಾಗುತ್ತದೆ.
ಹೊಸ ನಿಯಮಗಳು ಏನು ಹೇಳುತ್ತವೆ?
ಇ-ನೋಟಿಸ್ : ಟೋಲ್ ಪಾವತಿಸದ ವಾಹನಗಳ ಸಂಚಾರವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ETC) ವ್ಯವಸ್ಥೆಯಲ್ಲಿ ದಾಖಲಾದ ತಕ್ಷಣ, ವಾಹನ ಮಾಲೀಕರಿಗೆ ಎಸ್‌ಎಂಎಸ್, ಇಮೇಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಇ-ನೋಟಿಸ್ ಕಳುಹಿಸಲಾಗುತ್ತದೆ.
72 ಗಂಟೆಗಳ ಕಾಲಾವಕಾಶ: ನೋಟಿಸ್ ಬಂದ 72 ಗಂಟೆಗಳ ಒಳಗಾಗಿ ಬಾಕಿ ಇರುವ ಟೋಲ್ ಹಣವನ್ನು ಪಾವತಿಸಿದರೆ, ಯಾವುದೇ ಹೆಚ್ಚುವರಿ ದಂಡವಿಲ್ಲದೆ ಕೇವಲ ಅಸಲು ಮೊತ್ತವನ್ನು ಮಾತ್ರ ಪಾವತಿಸಬಹುದು.
ದುಪ್ಪಟ್ಟು ದಂಡ: ಒಂದು ವೇಳೆ 72 ಗಂಟೆಗಳ ನಂತರವೂ ಪಾವತಿ ಮಾಡದಿದ್ದರೆ, ಅನ್ವಯವಾಗುವ ಟೋಲ್ ಮೊತ್ತದ ಎರಡರಷ್ಟು (Double) ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ.
ವಾಹನ ಸೇವೆಗಳ ಸ್ಥಗಿತ: ಒಂದು ವೇಳೆ ಟೋಲ್ ಬಾಕಿ ಉಳಿಸಿಕೊಂಡು 15 ದಿನಗಳು ಕಳೆದರೆ, ಆ ವಾಹನದ ಮಾಹಿತಿಯನ್ನು ‘ವಾಹನ್’ (VAHAN) ಡೇಟಾಬೇಸ್‌ನಲ್ಲಿ ದಾಖಲಿಸಲಾಗುತ್ತದೆ. ಬಾಕಿ ಹಣ ಪಾವತಿಸುವವರೆಗೂ ಆ ವಾಹನಕ್ಕೆ ಸಂಬಂಧಿಸಿದ ಸರ್ಕಾರಿ ಸೇವೆಗಳ ಮೇಲೆ (ಉದಾಹರಣೆಗೆ ಎಫ್‌ಸಿ ನವೀಕರಣ, ಮಾಲೀಕತ್ವ ವರ್ಗಾವಣೆ) ನಿರ್ಬಂಧ ಹೇರಲಾಗುತ್ತದೆ.