https://youtube.com/shorts/LDfmKu7KOK0?si=Y4NKvWZkUj7zuhsW
newsics.com
ನಟಿ ಸಾನ್ಯಾ ಮಲ್ಹೋತ್ರಾ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಕೆಲವೇ ವರ್ಷಗಳು ಕಳೆದಿವೆ. ಅಷ್ಟರಲ್ಲಾಗಲೇ ಅವರು ಸಖತ್ ಜನಪ್ರಿಯತೆ ಪಡೆದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಅವರಿಗೆ ಸೂಪರ್ ಸಕ್ಸಸ್ ಸಿಕ್ಕಿತು.
ಹೌದು, ಅವರು ನಟಿಸಿದ್ದ ಚೊಚ್ಚಲ ಚಿತ್ರ ‘ದಂಗಲ್’. 2016ರಲ್ಲಿ ತೆರೆಕಂಡ ಆ ಸಿನಿಮಾದಲ್ಲಿ ಅವರಿಗೆ ಆಮಿರ್ ಖಾನ್ ಜೊತೆ ನಟಿಸುವ ಅವಕಾಶ ಸಿಕ್ಕಿತು. ಅಲ್ಪಾವಧಿಯಲ್ಲಿಯೇ ತಮ್ಮ ಸಹಜ ನಟನೆಗಾಗಿ ಮೆಚ್ಚುಗೆಯನ್ನು ಪಡೆದರು. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಅವರು ಮುಂಬೈನಲ್ಲಿ ಭವ್ಯವಾದ ಮನೆಯನ್ನು ಖರೀದಿಸಿದ್ದಾರೆ.
ಸಾನ್ಯಾ ಈ ಅಪಾರ್ಟ್‌ಮೆಂಟ್ ಅನ್ನು ಸುಮಾರು 14.3 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ. ಇದಕ್ಕಾಗಿ ಅವರು ಕೇವಲ 71.5 ಲಕ್ಷ ರೂ. ಸ್ಟಾಂಪ್ ಡ್ಯೂಟಿಯಲ್ಲಿ ಪಾವತಿಸಿದ್ದಾರೆ . ಮುಂಬೈನಲ್ಲಿ ಇದು ಅವರ ಎರಡನೇ ಮನೆ. ಅವರು 2018 ರಲ್ಲಿ ಫ್ಲಾಟ್ ಖರೀದಿಸಿದ್ದರು. ಆ ಫ್ಲ್ಯಾಟ್ ಚಿಕ್ಕದಾಗಿತ್ತು. ತಮ್ಮ ಕುಟುಂಬ ಸದಸ್ಯರು ದೆಹಲಿಯಿಂದ ಬಂದಾಗ ಆರಾಮವಾಗಿರಬೇಕೆಂಬ ಉದ್ದೇಶದಿಂದ ಈ ದೊಡ್ಡ ಮನೆಯನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಈ ಮನೆ ವಿಶಾಲವಾಗಿದೆ.
ಈ ಮನೆ ಸಮುದ್ರಕ್ಕೆ ಮುಖ ಮಾಡಿಕೊಂಡಿದೆ. ಹೀಗಾಗಿ, ಮನೆಯಲ್ಲೇ ಕುಳಿತು ಸಮುದ್ರ ತೀರದಲ್ಲಿ ನಡೆಯುವ ದೃಶ್ಯಗಳನ್ನು ಅವರು ಕಣ್ತುಂಬಿಕೊಳ್ಳಬಹುದು.
ಸಮುದ್ರವನ್ನು ನೋಡುತ್ತಾ ಮತ್ತು ಸೂರ್ಯಾಸ್ತವನ್ನು ಆನಂದಿಸುವ ವಿಶಾಲವಾದ ಬಾಲ್ಕನಿಗಳಿವೆ.ಆರ್ಥಿಕ ಸಮಸ್ಯೆಗಳಿಂದಾಗಿ ಸನ್ಯಾ ಮನೆ ಖರೀದಿಸಲು ಹಿಂಜರಿಯುತ್ತಿದ್ದರು. ಆದರೆ, ಬಾಡಿಗೆಗೆ ಪಡೆಯುವುದಕ್ಕಿಂತ ಸ್ವಂತ ಮನೆ ಹೊಂದಿರುವುದು ಉತ್ತಮ ಎಂದು ಅವರ ತಂದೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು.
https://www.instagram.com/p/DV3Jhh2kaku/?img_index=5&igsh=MWt1cTNhZ242aG1ybA==