https://youtube.com/shorts/DiU6l59Harw?si=ZuaOlVBTxzvWqxLP
newsics.com
ನವದೆಹಲಿ: ಭೋಜ್‌ಪುರಿ ವೇದಿಕೆಯಲ್ಲಿ ಗಾಯಕ ಧನಂಜಯ್ ಶರ್ಮಾ ಎಂಬುವವರು ನೃತ್ಯಗಾರ್ತಿಯೊಬ್ಬರನ್ನು ಎತ್ತಿ ವೇದಿಕೆಯಿಂದ ಕೆಳಗೆ ನಿಂತಿದ್ದ ಪ್ರೇಕ್ಷಕರ ಗುಂಪಿನತ್ತ ಎಸೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಧನಂಜಯ್ ಶರ್ಮಾ ವೇದಿಕೆಯ ಮೇಲೆ ಹಾಡುತ್ತಾ ಪ್ರದರ್ಶನ ನೀಡುತ್ತಿರುತ್ತಾರೆ. ಈ ವೇಳೆ ಪಕ್ಕದಲ್ಲೇ ನೃತ್ಯ ಮಾಡುತ್ತಿದ್ದ ಮಹಿಳಾ ಕಲಾವಿದೆಯನ್ನು ಹಠಾತ್ತನೆ ಮೇಲೆತ್ತಿ, ವೇದಿಕೆಯ ಮುಂಭಾಗದಲ್ಲಿದ್ದ ಜನರ ಗುಂಪಿಗೆ ಎಸೆಯುತ್ತಾರೆ. ಗಾಯಕನ ಈ ಅನಿರೀಕ್ಷಿತ ಮತ್ತು ಅಪಾಯಕಾರಿ ನಡವಳಿಕೆಯಿಂದ ಅಲ್ಲಿ ನೆರೆದಿದ್ದವರು ಕ್ಷಣಕಾಲ ಸ್ತಬ್ಧರಾಗಿದ್ದಾರೆ.
ಈ ವಿಡಿಯೋ ಹರಡುತ್ತಿದ್ದಂತೆ ಸಾರ್ವಜನಿಕರು ಗಾಯಕನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
https://www.newsics.com/2026/03/17/sania-mirza-fled-dubai-just-a-week-before-her-sons-school-start/