Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕೋಮಾದಲ್ಲಿರುವ ಪತಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿದ ಪತ್ನಿ
ದೇಶಪ್ರಮುಖ

ಕೋಮಾದಲ್ಲಿರುವ ಪತಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿದ ಪತ್ನಿ

Share
2 Min Read
SHARE

newsics.com

ಪ್ರೇಮವಿವಾಹವಾಗಿದ್ದ ಆ ದಂಪತಿ ಸುಂದರವಾದ ಬದುಕು ಕಟ್ಟಿಕೊಂಡಿದ್ದರು. ಸಂತೋಷವಾಗಿ ಜೀವನ ನಡೆಸುತ್ತಿದ್ದರು.

ಸಂಸಾರದಲ್ಲಿ ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಎನ್ನುವ ಹೊತ್ತಲ್ಲಿ, ವಿಧಿ ಅವರ ಬಾಳಲ್ಲಿ ಚೆಲ್ಲಾಟವಾಡಿತು. 2025ರ ಅಕ್ಟೋಬರ್ 12ರಂದು ಸಂಭವಿಸಿದ ಅಪಘಾತ ಆ ಜೋಡಿಯ ಸಂತೋಷವನ್ನೇ ಕಿತ್ತುಕೊಂಡಿತ್ತು. ಇದೀಗ ಹಾಸಿಗೆ ಹಿಡಿದಿರುವ ಪತಿಯ ಸೇವೆ ಮಾಡುತ್ತಾ ಜೀವನ ಸಾಗಿಸುತ್ತಿರುವ ಆ ಪತ್ನಿಯ ಸತತ ಪ್ರಯತ್ನಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ಪಶ್ಚಿಮ ಬಂಗಾಳದ ಅಸನ್‌ಸೋಲ್‌ನ ಸೀಮಾ ಚಟರ್ಜಿ ಅವರು ಕಳೆದ ಐದು ತಿಂಗಳುಗಳಿಂದ ಕರಾಳ ದಿನಗಳನ್ನು ಅನುಭವಿಸುತ್ತಿದ್ದಾರೆ. ಸೀಮಾ ಅವರ ಪತಿ ಆಕಾಶ್ 2025ರ ಅಕ್ಟೋಬ‌ರ್ 12ರಂದು ವಿಐಪಿ ರಸ್ತೆಯ ಹಲ್ಲಿರಾಮ್ ಮೋರ್ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಆಕಾಶ್ ಕೋಮಾಗೆ ಜಾರಿದ್ದರು. ಇದೊಂದು ಅಪಘಾತ ಸೀಮಾಳ ಜೀವನವನ್ನೇ ಬದಲಾಯಿಸಿತು.

ನಗುವಿನಿಂದ ಕೂಡಿದ ಆ ದಿನಗಳು ಮಾಯವಾಗಿ ಈಗ ಪತಿಯನ್ನು ಉಳಿಸಿಕೊಳ್ಳುವ ಹೋರಾಟ ಮಾಡುತ್ತಿದ್ದಾರೆ ಸೀಮಾ. ಆದರೆ ಸೀಮಾ ಅವರು ಎದೆಗುಂದದೆ ತಾಳ್ಮೆ ಮತ್ತು ದೇವರ ಮೇಲೆ ನಂಬಿಕೆಯಿಟ್ಟು ಮುನ್ನೆಡೆಯುತ್ತಿದ್ದಾರೆ. ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿರುವ ಸೀಮಾ ಪತಿಯನ್ನು ಸಹಜ ಸ್ಥಿತಿಗೆ ತರಲು ಹೆಣಗಾಡುತ್ತಿದ್ದಾರೆ. ಹಳೆಯ ನೆನಪು ಮರುಕಳಿಸಬಹುದೇ ಎಂಬ ಆಶಯದಿಂದ ಆಕಾಶ್‌ಗೆ ನೆಚ್ಚಿನ ಸುಗಂಧ ದ್ರವ್ಯ ಹಚ್ಚುತ್ತಾಳೆ. ಅವರ ಹಣೆಗೆ ಮುತ್ತು ನೀಡುತ್ತಾಳೆ. ಅವರ ಕೈಹಿಡಿದು ಪ್ರೀತಿಯಿಂದ ಮಾತನಾಡುತ್ತಾಳೆ. ಹೀಗೆ ನಿತ್ಯ ಅವರ ಜೊತೆಗೆ ಆಸ್ಪತ್ರೆಯಲ್ಲಿ ಕಾಲಕಳೆಯುತ್ತಿದ್ದಾರೆ.

ಈ ಕುರಿತು ಸೀಮಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪತಿಯ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದು, ಅದು ಎಲ್ಲರ ಗಮನ ಸೆಳೆದಿದೆ. ಹಾಸಿಗೆ ಹಿಡಿದ ಪತಿ ಜೊತೆಯೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಸಂತೋಷದ ಕ್ಷಣಗಳನ್ನು ಮರಳಿ ತರಲು ಸೀಮಾ ವಧುವಿನಂತೆ ಸಿಂಗಾರಗೊಂಡು, ಕೇಕ್ ಕತ್ತರಿಸಿ, ಹೂಗುಚ್ಛ, ಉಂಗುರವಿಟ್ಟು ಪತಿಗೆ ವಿವಾಹ ವಾರ್ಷಿಕೋತ್ಪಕ್ಕೆ ಶುಭ ಕೋರಿದ್ದಾರೆ. ಈ ಫೋಟೊಗಳನ್ನು ನೋಡಿದ ನೆಟ್ಟಿಗರು ಸೀಮಾಳ ಧೈರ್ಯ, ತಾಳ್ಮೆ ಹಾಗೂ ಪತಿಯ ಮೇಲಿನ ಅಚಲ ಪ್ರೀತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ, ‘ಆಕಾಶ್ ಬೇಗ ಗುಣಮುಖರಾಗಿ ಬನ್ನಿ’ ಎಂದು ಕಮೆಂಟ್ ಮೂಲಕ ನೆಟ್ಟಿಗರು ಹಾರೈಸುತ್ತಿದ್ದಾರೆ.

https://www.instagram.com/p/DVggNtEju33/?igsh=MjRmb3o3MmJyZnVh

ಹೊಟ್ಟೆಪಾಡಿಗಾಗಿ ಕಾಫಿ ಪುಡಿ ಮಾರುತ್ತಿರುವ ಖ್ಯಾತ ನಟ

TAGGED:Wife celebrates wedding anniversary with husband in coma
Share This Article
Facebook Twitter Copy Link Print
Previous Article ಮಗನ ಶಾಲೆಗೆ ವಾರ ಇರುವಾಗಲೇ ದುಬೈ ಬಿಟ್ಟು ಓಡಿ ಬಂದ ಸಾನಿಯಾ ಮಿರ್ಜಾ!
Next Article GOOD MORNING | Today’s Horoscope ಇಂದಿನ ರಾಶಿ‌ ಭವಿಷ್ಯ 18-03-2026, ಬುಧವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?