newsics.com
ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ಗೆ ಬೇಡಿಕೆ ವಿಪರೀತವಾಗುತ್ತಿದೆ. ಇದೇ ವೇಳೆ ಇದಕ್ಕೆ ಸಾಕ್ಷಿ ಎಂಬಂತೆ, ಪ್ಲೇಸ್ಟೋರ್ನಲ್ಲಿ ಇಂಡಿಯನ್ ಆಯಿಲ್ನ ಒನ್ ಆ್ಯಪ್ ನಂಬರ್ ಒನ್ ಎನಿಸಿದೆ. ಅಲ್ಲದೇ, ಚ್ಯಾಟ್ಜಿಪಿಟಿ ಇತ್ಯಾದಿ ಸ್ಟಾರ್ ಆ್ಯಪ್ಗಳನ್ನು ಇದು ಹಿಂದಿಕ್ಕಿದೆ.
ಹೌದು, ಇಂಡಿಯನ್ ಆಯಿಲ್ನ ಒನ್ ಆ್ಯಪ್ ಭಾರೀ ಪ್ರಮಾಣದಲ್ಲಿ ಡೌನ್ಲೋಡ್ ಆಗುತ್ತಿದೆ. ಪ್ಲೇಸ್ಟೋರ್ನಲ್ಲಿ ಚ್ಯಾಟ್ಜಿಪಿಟಿಯಂತಹ ಆ್ಯಪ್ಗಳನ್ನು ಮೀರಿಸಿ ಒನ್ ಆ್ಯಪ್ ನಂಬರ್ ಸ್ಥಾನದಲ್ಲಿದೆ. ಈ ಆ್ಯಪ್ನಲ್ಲಿ ಹೊಸ ಎಲ್ಪಿಜಿ ಕನೆಕ್ಷನ್, ಸಿಲಿಂಡರ್ ಬುಕಿಂಗ್, ಏಜೆನ್ಸಿ ಬದಲಾವಣೆ ಇತ್ಯಾದಿ ಕಾರ್ಯಗಳನ್ನು ಮಾಡಬಹುದು.
ಎಕ್ಸ್ ಬಳಕೆದಾರರೊಬ್ಬರು ಇಂಡಿಯನ್ ಆಯಿಲ್ನ ಈ ಒನ್ ಆ್ಯಪ್ ಟಾಪ್ ಚಾರ್ಟ್ಸ್ನಲ್ಲಿ ನಂಬರ್ ಒನ್ ಆಗಿರುವುದನ್ನು ತಮ್ಮ ಟ್ವೀಟ್ವೊಂದರಲ್ಲಿ ಎತ್ತಿತೋರಿಸಿದ್ದಾರೆ. ನೀವು ಈ ಆ್ಯಪ್ ಈಗ ಡೌನ್ಲೋಡ್ ಮಾಡಿ ಓಪನ್ ಮಾಡಿದಾಗ ಕೆಲ ಫೀಚರ್ಗಳು ಕೆಲಸ ಮಾಡುವುದಿಲ್ಲ. ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಿಢೀರನೇ ಈ ಆ್ಯಪ್ ಗಣನೀಯ ಸಂಖ್ಯೆಯಲ್ಲಿ ಡೌನ್ಲೋಡ್ ಆಗಿರುವುದು ಇದಕ್ಕೆ ಕಾರಣ.
ಚ್ಯಾಟ್ಜಿಪಿ, ಸ್ಟೋರಿ ಟಿವಿ, ಫ್ರೀರೀಲ್ಸ್, ಮೀಶೋ, ಫ್ಲಿಪ್ಕಾರ್ಟ್, ಜಿಯೋಹಾಟ್ಸ್ಟಾರ್ ಇತ್ಯಾದಿ ಆ್ಯಪ್ಗಳನ್ನು ಮೀರಿಸಿ, ಇಂಡಿಯನ್ ಆಯಿಲ್ ಒನ್ ಆ್ಯಪ್ ಅತಿಹೆಚ್ಚು ಡೌನ್ಲೋಡ್ ಆದ ಆ್ಯಪ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡಲು ಒನ್ ಆ್ಯಪ್ ಬಳಸುವುದು ಅನಿವಾರ್ಯವೇನಲ್ಲ. ನಿಮ್ಮ ಗ್ಯಾಸ್ ಏಜೆನ್ಸಿಯ ಗ್ಯಾಸ್ ಬುಕಿಂಗ್ ನಂಬರ್ ಮೂಲಕವೇ ಸಿಲಿಂಡರ್ ಬುಕಿಂಗ್ ಮಾಡಬಹುದು. ಮೊದಲೆಲ್ಲಾ 1-3 ದಿನದೊಳಗೆ ಸಿಲಿಂಡರ್ ಸಿಗುತ್ತಿತ್ತು. ಈಗ ಸ್ವಲ್ಪ ವಿಳಂಬವಾಗಬಹುದು.
ಒನ್ ಆ್ಯಪ್ನಲ್ಲಿ ಇಂಡೇನ್ ಗ್ರಾಹಕರು ಎಲ್ಪಿಜಿ ಬುಕಿಂಗ್ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಬಹುದು. ಹೊಸ ಎಲ್ಪಿಜಿ ಕನೆಕ್ಷನ್, ಏಜೆನ್ಸಿ ಬದಲಾವಣೆ, ಗ್ಯಾಸ್ ಬುಕಿಂಗ್ ಇತ್ಯಾದಿ ಕೆಲಸಗಳನ್ನು ಈ ಒನ್ ಆ್ಯಪ್ನಲ್ಲಿ ಮಾಡಲು ಅವಕಾಶ ಇರುತ್ತದೆ
ಗೆಳತಿಗಾಗಿ ಐಷಾರಾಮಿ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ; ಇದರ ಬೆಲೆ ಎಷ್ಟು?