https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್‌ಗಳನ್ನು ಹೊಂದುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಾರೆ. ಈ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿಯಾಗಿದ್ದಾರೆ.
2014ರಲ್ಲಿ ಇನ್‌ಸ್ಟಾಗ್ರಾಮ್ ಸೇರಿದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (4.32 ಕೋಟಿ) ಅವರಿಗಿಂತ ಎರಡರಷ್ಟು ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.ಇಂಡೋನೇಷ್ಯಾದ ಪ್ರಬೊವೊ ಸುಬಿಯಾಂಟೊ (1.5 ಕೋಟಿ), ಬ್ರೆಜಿಲ್‌ನ ಲೂಲಾ (1.44 ಕೋಟಿ), ಟರ್ಕಿಯ ಎರ್ಡೋಗನ್ (1.16 ಕೋಟಿ) ಮತ್ತು ಅರ್ಜೆಂಟೀನಾದ ಜೇವಿಯರ್ ಮಿಲಿ (64 ಲಕ್ಷ) ಅವರಿಗಿಂತ ಮೋದಿ ಬಹುದೂರ ಮುಂದಿದ್ದಾರೆ.
ಭಾರತದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (1.61 ಕೋಟಿ) ಎರಡನೇ ಸ್ಥಾನದಲ್ಲಿದ್ದರೆ, ರಾಹುಲ್ ಗಾಂಧಿ (1.26 ಕೋಟಿ) ಮೂರನೇ ಸ್ಥಾನದಲ್ಲಿದ್ದಾರೆ.
https://www.newsics.com/2026/02/26/trump-imposes-126-tax-on-indian-solar-products/