https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಭಾರತದಿಂದ ಆಮದಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.10ಕ್ಕೆ ಇಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಇದೀಗ ಸೋಲಾರ್ ವಸ್ತುಗಳ ಮೇಲೆ ಶೇ.126ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದೆ.
ಭಾರತ ಸರ್ಕಾರವು ಅವುಗಳ ಉತ್ಪಾದನೆಗೆ ನೀಡುತ್ತಿರುವ ಸಬ್ಸೀಡಿಗಳು ನ್ಯಾಯೋಚಿತವಾಗಿಲ್ಲ; ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ ಎಂದು ಆರೋಪಿಸಿ ಈ ನಿರ್ಧಾರ ಕೈಗೊಂಡಿದೆ. ಇದರನ್ವಯ ಇನ್ನು ಭಾರತದಿಂದ ರಫ್ತಾಗುವ ಸೌರಫಲಕ ಮತ್ತು ಸೆಲ್‌ಗಳ ಮೇಲೆ ಶೇ.126ರಷ್ಟು ತೆರಿಗೆ ಬೀಳಲಿದೆ.
ಈ ಬಗ್ಗೆ ಹೊರಡಿಸಲಾಗಿರುವ ಆದೇಶದಲ್ಲಿ, ‘2022ರಲ್ಲಿ 762 ಕೋಟಿ ರು. ಮೊತ್ತದ ಸೋಲಾರ್ ಉಪಕರಣಗಳನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿತ್ತು. 2024ರಲ್ಲಿ ಇದು 7.2 ಸಾವಿರ ಕೋಟಿ ರು. ಆಗಿದೆ. ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್ ದೇಶಗಳು ಕಡಿಮೆ ದರದಲ್ಲಿ ಸೋಲಾರ್ ಉಪಕರಣಗಳನ್ನು ಉತ್ಪಾದಿಸಿ ಅಮೆರಿಕದ ಮಾರುಕಟ್ಟೆಗೆ ಸುರಿಯುತ್ತಿದ್ದಾರೆ. ಇದರ ವಿರುದ್ಧ ನಮ್ಮ ಆರ್ಥಿಕ ಸಚಿವಾಲಯ ತನಿಖೆ ನಡೆಸುತ್ತಿದೆ’ ಎನ್ನಲಾಗಿದೆ.
ನಾನು ವಿದೇಶಗಳ ಮೇಲೆ ಹೇರಿರುವ ಆಮದು ತೆರಿಗೆಯಿಂದಾಗಿ ಕೋಟ್ಯಂತರ ಡಾಲರ್ ಸಂಗ್ರಹವಾಗುತ್ತಿದೆ. ಆದ್ದರಿಂದ ಇನ್ನು ಸ್ವಲ್ಪ ಸಮಯದಲ್ಲೇ ಅಮೆರಿಕನ್ನರು ಆದಾಯ ತೆರಿಗೆ ಕಟ್ಟುವ ಅಗತ್ಯವೇ ಇರುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.