Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೋರ್ಡ್ ಎಕ್ಸಾಂ ಬರೆಯುವಾಗ ಪರೀಕ್ಷಾ ಕೇಂದ್ರದಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಾಲಕಿ
ಕರ್ನಾಟಕಪ್ರಮುಖ

ಬೋರ್ಡ್ ಎಕ್ಸಾಂ ಬರೆಯುವಾಗ ಪರೀಕ್ಷಾ ಕೇಂದ್ರದಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಾಲಕಿ

Share
1 Min Read
SHARE

https://youtube.com/shorts/tAQS6h_SZWA?si=f1t_2CedcPuoHdto

Subscribe ನ್ಯೂಸಿಕ್ಸ್ ಕನ್ನಡ

newsics.com

ಎಸ್​ಎಸ್​ಎಲ್​ಸಿ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದ ಬಾಲಕಿಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಾತ್​ರೂಂಗೆ ಹೋದ ಆ ಬಾಲಕಿಗೆ ಅಲ್ಲೇ ಹೆರಿಗೆಯಾಗಿದೆ. ಮಧ್ಯಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪರೀಕ್ಷೆಗಳ ಕೇಂದ್ರವಾದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿಚಿತ್ರವೆಂದರೆ, ಆ ಬಾಲಕಿ ಗರ್ಭಿಣಿಯಾಗಿದ್ದಾಳೆಂಬ ವಿಷಯ ಆಕೆಯ ಹೆತ್ತವರಿಗೆ ಗೊತ್ತೇ ಇರಲಿಲ್ಲ.

ನಿನ್ನೆ ಗಣಿತ ಪತ್ರಿಕೆ ಬರೆಯಲು ಹಾಜರಾಗಿದ್ದ ಬಾಲಕಿ ಒಂದೂವರೆ ಗಂಟೆ ಪರೀಕ್ಷೆ ಬರೆದಿದ್ದಳು. ಆದರೆ, ಆಗ ಇದ್ದಕ್ಕಿದ್ದಂತೆ ಆಕೆಗೆ ಹೊಟ್ಟೆನೋವು ಜೋರಾಗಿತ್ತು. ಹೀಗಾಗಿ, ಪರೀಕ್ಷೆಯ ಮಧ್ಯದಲ್ಲಿ ಆಕೆ ಬಾತ್​ರೂಂಗೆ ಹೋಗಲು ಅನುಮತಿ ಕೇಳಿದ್ದಳು. ವಿಪರೀತ ಹೊಟ್ಟೆನೋವಿದ್ದುದರಿಂದ ಆಕೆಗೆ ಬಾತ್​ರೂಂಗೆ ಹೋಗಲು ಅನುಮತಿ ನೀಡಲಾಗಿತ್ತು. ಅದಾದ ಕೆಲವೇ ನಿಮಿಷಗಳಲ್ಲಿ ಬಾತ್​ರೂಂನಿಂದ ಮಗು ಅಳುವ ಶಬ್ದ ಕೇಳಿತ್ತು.

ಆಕೆ ಬಾತ್​​ರೂಂಗೆ ಹೋದಾಗ ಅಲ್ಲೇ ಆಕೆಗೆ ಹೆರಿಗೆಯಾಗಿದೆ. ಟಾಯ್ಲೆಟ್​​ನಲ್ಲೇ ಆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಅಳುವ ಶಬ್ದ ಕೇಳಿದ್ದರಿಂದ ಶಿಕ್ಷಕಿ ಟಾಯ್ಲೆಟ್ ಒಳಗೆ ಹೋಗಿ ನೋಡಿದರು. ಅಲ್ಲಿ ಆ ಬಾಲಕಿ ಹಾಗೂ ರಕ್ತ ಮೆತ್ತಿಕೊಂಡಿದ್ದ ಮಗುವನ್ನು ಕಂಡು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ವಿಷಯ ತಿಳಿಸಿದರು.

ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯು ತಕ್ಷಣ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ಮಾಹಿತಿ ನೀಡಿತು. ಆ ವಿದ್ಯಾರ್ಥಿನಿ ಮತ್ತು ಆಕೆಯ ನವಜಾತ ಶಿಶುವನ್ನು ಪಿತಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದರು. ಪ್ರಸ್ತುತ ತಾಯಿ ಹಾಗೂ ಮಗುವನ್ನು ಅಬ್ಸರ್ವೇಷನ್​​ನಲ್ಲಿಡಲಾಗಿದೆ.

ವಿದ್ಯಾವಂತೆಯಾದ ಬಾಲಕಿ ತಾನು ಗರ್ಭಿಣಿಯಾದರೂ ಆ ವಿಷಯ ಮುಚ್ಚಿಟ್ಟಿದ್ದೇಕೆ? ಮೊದಲೇ ಹೇಳಿದ್ದರೆ ಇಷ್ಟು ಚಿಕ್ಕ ವಯಸ್ಸಿಗೆ ತಾಯಿಯಾಗುವ ಅಪಾಯ ತಪ್ಪಿಸಬಹುದಿತ್ತು, ಆ ಮಗುವಿನ ತಂದೆ ಯಾರು ಎಂಬಿತ್ಯಾದಿ ಪ್ರಶ್ನೆಗಳೆದ್ದಿವೆ.

https://www.newsics.com/2026/02/26/modi-becomes-first-world-leader-to-cross-100-million-followers-on-instagram/

TAGGED:Girl gives birth to baby at exam centre while writing board exam
Share This Article
Facebook Twitter Copy Link Print
Previous Article ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್‌ ದಾಟಿದ ಮೊದಲ ವಿಶ್ವ ನಾಯಕ ಮೋದಿ
Next Article CBI ತನಿಖೆಗೆ ಹೆದರಿ BBMP ನಿವೃತ್ತ ಇಂಜಿನಿಯರ್ ಆತ್ಮ*ಹತ್ಯೆ !

Popular Posts

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

You Might Also Like

ಪ್ರಮುಖ

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read
ಕರ್ನಾಟಕಪ್ರಮುಖ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

0 Min Read
ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

3 Min Read

Social Networks

Facebook-f Instagram Twitter
Welcome Back!

Sign in to your account

Lost your password?