https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಮೆಕ್ಸಿಕೋದ ಕುಖ್ಯಾತ ಮಾದಕವಸ್ತು ದೊರೆ ನೆಮೆಸಿಯೊ ಒಸೆಗುರಾ ಎಲ್ ಮೆಂಚೊ ಮಿಲಿಟರಿ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾರೆ. ಈ ಕಾರ್ಯಾಚರಣೆ ಹಲವಾರು ರಾಜ್ಯಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಬಸ್ಗಳಿಗೆ ಬೆಂಕಿ, ರಸ್ತೆ ತಡೆ, ವಿಮಾನ ಹಾರಾಟಗಳನ್ನು ರದ್ದು ಮಾಡಲಾಗಿದೆ.
ಪಶ್ಚಿಮ ಮೆಕ್ಸಿಕೋದ ಜಲಿಸ್ಕೋ ರಾಜ್ಯದಲ್ಲಿ ಸೈನಿಕ ದಾಳಿಯ ವೇಳೆ ಎಲ್ ಮೆಂಚೋ ಸಂಭವಿಸಿದ್ದರು. ಅವರು ನೇತೃತ್ವ ವಹಿಸಿದ್ದ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (ಸಿಜೆಎನ್‌ಜಿ) ಇತ್ತೀಚೆಗೆ ಮೆಕ್ಸಿಕೋದ ಅತಿ ಬಲಿಷ್ಠ ಸಂಘಟಿತ ಅಪರಾಧ ಜಾಲವಾಗಿ ಬೆಳೆದಿತ್ತು. ಅಮೆರಿಕಾಗೆ ಅಕ್ರಮ ಮದ್ದು ಸಾಗಾಣಿಕೆಯಲ್ಲಿ ಈ ಸಂಘಟನೆ ಪ್ರಮುಖ ಪಾತ್ರವಹಿಸಿತ್ತು.
ಎಲ್ ಮೆಂಚೋ ಜಾಲಿಸ್ಕೋ ರಾಜ್ಯದ ಹೆಸರನ್ನೇ ಹೊತ್ತ Jalisco New Generation Cartel (ಸಿಜೆಎನ್‌ಜಿ) ಸಂಘಟನೆಯ ನಾಯಕನಾಗಿದ್ದರು. ಎಲ್ ಮೆಂಚೊ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದರು. ಅವರು CJNG ಅನ್ನು ವಿಶ್ವದ ಅತ್ಯಂತ ಅಪಾಯಕಾರಿ ಕ್ರಿಮಿನಲ್ ಸಂಘಟನೆಗಳಲ್ಲಿ ಒಂದನ್ನಾಗಿ ಪರಿವರ್ತಿಸುವಲ್ಲಿ ಹೆಸರುವಾಸಿಯಾಗಿದ್ದರು. ನಂತರ ಅವರ ಮೇಲೆ ಯುನೈಟೆಡ್ ಸ್ಟೇಟ್ಸ್‌ಗೆ ಫೆಂಟನಿಲ್ ತಯಾರಿಸಿ ಕಳ್ಳಸಾಗಣೆ ಮಾಡಿದ ಆರೋಪ ಹೊರಿಸಲಾಗಿತ್ತು. 2022 ರಲ್ಲಿ US ನ್ಯಾಯ ಇಲಾಖೆ ಅವರ ಮೇಲೆ ಆರೋಪ ಹೊರಿಸಿತ್ತು.
ಎಲ್ ಮೆಂಚೋ ಸಾವಿನ ಸುದ್ದಿ ಹೊರಬಿದ್ದ ತಕ್ಷಣ ಮೆಕ್ಸಿಕೋದ ರಾಜ್ಯಗಳಲ್ಲಿ ಹಿಂಸಾಚಾರ ಉಂಟಾಯಿತು. ಕಾರುಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ಶಸ್ತ್ರಸಜ್ಜಿತವಾಗಿ ಬಂದ್ ಮಾಡಿರುವ ಘಟನೆಗಳು ವರದಿಯಾಗಿವೆ. ಪ್ರಮುಖ ಪ್ರವಾಸಿ ನಗರವಾದ ಪೋರ್ಟೊ ವಲ್ಲರ್ಟಾದಲ್ಲಿ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ರಾಜ್ಯ ರಾಜಧಾನಿ ಗ್ವಾಡಲಜರಾದಲ್ಲಿ ಸುಟ್ಟ ವಾಹನಗಳು ರಸ್ತೆ ತಡೆದಿರುವುದು ಕಂಡುಬಂದಿದೆ. ಭೀತಿಗೊಳಗಾದ ಜನರು ವಿಮಾನ ನಿಲ್ದಾಣಗಳಲ್ಲಿ ಓಡಾಟ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಜಾಲಿಸ್ಕೋ ಗವರ್ನರ್ ಪ್ಯಾಬ್ಲೊ ಲೆಮಸ್ ನವರೊ ಜನರಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಮನೆಗಳಲ್ಲೇ ಇರಲು ಮನವಿ ಮಾಡಿದ್ದಾರೆ.
https://www.newsics.com/2026/02/23/rashmika-mandanna-vijay-devarakonda-accepted-the-marriage-news/