Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಖಗೋಳ ಪ್ರಿಯರ ಪಾಲಿಗೆ 2026 ನೇ ವರ್ಷವು ವಿಶೇಷವಾಗಿರಲಿದೆ. ಈ ವರ್ಷದ ಮೊದಲ ಖಗೋಳ ವಿಸ್ಮಯವಾದ ಕಂಕಣ ಸೂರ್ಯಗ್ರಹಣ ಫೆಬ್ರವರಿ 17 ರಂದು ಸಂಭವಿಸಲಿದೆ. ಆಕಾಶದಲ್ಲಿ ಸೂರ್ಯನು ಬೆಂಕಿಯ ಉಂಗುರದಂತೆ ಕಾಣುವ ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜಗತ್ತು ಕಾತರದಿಂದ ಕಾಯುತ್ತಿದೆ.
ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು ಮಧ್ಯಾಹ್ನ 3:26ಕ್ಕೆ ಪ್ರಾರಂಭವಾಗಿ ಸುಮಾರು ಸಂಜೆ 7:57 ರವರೆಗೆ ಇರುತ್ತದೆ. ಇದರ ಒಟ್ಟು ಅವಧಿ ಸುಮಾರು 4 ಗಂಟೆ 30 ನಿಮಿಷಗಳಾಗಿರುತ್ತದೆ. ಆದಾಗ್ಯೂ, ಇದರ ಗೋಚರತೆಯು ವಿವಿಧ ದೇಶಗಳಲ್ಲಿ ಬದಲಾಗಬಹುದು ಎಂದು ಜ್ಯೋತಿಷ್ಯ ತಿಳಿಸಿದೆ.
ಈ ಸೂರ್ಯ ಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ. ಬದಲಾಗಿ ಅಂಟಾರ್ಕ್ಟಿಕಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗೋಚರಿಸುತ್ತದೆ. ಇದು ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ಪ್ರದೇಶಗಳಲ್ಲಿ ಕಂಡುಬರುವುದರಿಂದ ಭಾರತದ ಮೇಲೆ ಯಾವುದೇ ಪರಿಣಾಮಗಳು ಬೀಳುವುದಿಲ್ಲ ಎಂದು ತಿಳಿಸಲಾಗಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣ ಯಾವ ಪ್ರದೇಶದಲ್ಲಿ ಗೋಚರಿಸುತ್ತದೆಯೋ, ಅಲ್ಲಿ ಮಾತ್ರ ಸೂತಕವನ್ನು ಆಚರಿಸಲಾಗುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸದ ಕಾರಣ ಈ ದೇಶಕ್ಕೆ ಸೂತಕ ಆವರಿಸಿಕೊಳ್ಳುವುದಿಲ್ಲ. ಹಾಗಾಗಿ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬಹುದು ಜೊತೆಗೆ ಆಚರಣೆಗಳನ್ನು ಕೂಡಾ ಮಾಡಬಹುದು.