https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ವಿದೇಶದಲ್ಲಿ ನೆಲೆಸಿರುವ ಗ್ಯಾಂಗ್’ಸ್ಟರ್ ಒಬ್ಬನಿಂದ ತಮಗೆ 10 ಕೋಟಿ ರೂಪಾಯಿ ಸುಲಿಗೆಯ ಬೆದರಿಕೆ ಬಂದಿದೆ ಎಂದು ಪಂಜಾಬಿ ನಟಿ ಹಿಮಾಂಶಿ ಖುರಾನಾ ಮೊಹಾಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರರಂಗದ ಹೈ ಪ್ರೊಫೈಲ್ ಜನರನ್ನು ಗುರಿಯಾಗಿಸಿಕೊಂಡ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಿಮಾಂಶಿ ಪಂಜಾಬಿ ಚಲನಚಿತ್ರೋದ್ಯಮದ ಪ್ರಸಿದ್ಧ ನಟಿ. ಈ ಬೆದರಿಕೆ ವಿರುದ್ಧ ಅವರು ಮೊಹಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏತನ್ಮಧ್ಯೆ, ಈ ಬೆದರಿಕೆ ಇ-ಮೇಲ್ ಬಗ್ಗೆ ಸೋಹಾನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅವರ ವೈಯಕ್ತಿಕ ಇ-ಮೇಲ್ ಐಡಿಯಲ್ಲಿ ಬೆದರಿಕೆ ಇ-ಮೇಲ್ ಬಂದಿದ್ದು, ಅದರಲ್ಲಿ ಒಂದು ಕಿರು ಸಂದೇಶ ಮತ್ತು ಆಡಿಯೊ ಕ್ಲಿಪ್ ಕೂಡ ಇದೆ.
ಆ ಆಡಿಯೋ ಕ್ಲಿಪ್ ವಿದೇಶಿ ದರೋಡೆಕೋರನದ್ದು ಎಂದು ಹೇಳಲಾಗುತ್ತಿದೆ. 10 ಕೋಟಿ ರೂಗೆ ಆತ ಬೇಡಿಕೆ ಇಟ್ಟಿದ್ದಾನೆ. ಪಿಟಿಐ ವರದಿಯ ಪ್ರಕಾರ, ಈ ಸಂದೇಶವನ್ನು ವಿದೇಶದಲ್ಲಿರುವ ದರೋಡೆಕೋರ ಕಳುಹಿಸಿದ್ದಾನೆ ಎಂದು ಹೇಲಲಾಗಿದೆ. ಆರೋಪಿಯನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.
ದೂರಿನ ಮೇಲೆ ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು, ಶನಿವಾರ ಸೋಹಾನಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 308(4) (ಸುಲಿಗೆ) ಮತ್ತು 351(3) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.