https://youtube.com/shorts/2Z4I0oFUbOQ?si=2AWNIubhEa82xcJv
Subscribe ನ್ಯೂಸಿಕ್ಸ್ ಕನ್ನಡ
newsics.com
ಶಿವಮೊಗ್ಗದ ಕಮಲಾಕರ ಭಟ್ ಗುರೂಜಿ ಹಾಗೂ ವಿವಾಹಿತ ಮಹಿಳೆ ಸುಚಿತ್ರಾ ನಡುವಿನ ಅಕ್ರಮ ಸಂಬಂಧದ ಕಥೆ ಈಗ ಜಗಜ್ಜಾಹೀರಾಗಿದೆ. 20 ವರ್ಷಗಳ ಸುದೀರ್ಘ ದಾಂಪತ್ಯವನ್ನು ಬದಿಗಿಟ್ಟು ಗುರೂಜಿ ಜೊತೆ ಪತ್ನಿ ನಡೆಸುತ್ತಿದ್ದ ಸಂಸಾರವನ್ನು ಮಗಳೇ ತಂದೆಗೆ ರಹಸ್ಯವಾಗಿ ತಿಳಿಸಿದ್ದರಿಂದ ಈ ಮಹಾಸ್ಫೋಟ ಸಂಭವಿಸಿದೆ.
ಸುಚಿತ್ರಾ ಕಳೆದ ಆರು ತಿಂಗಳ ಹಿಂದೆ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಗಂಡ ಮಹೇಶ್‌ಗೆ ತಿಳಿಸದೆ ನಾಪತ್ತೆಯಾಗಿದ್ದಳು. ಅವಳು ಶಿವಮೊಗ್ಗದಲ್ಲಿ ಕಮಲಾಕರ ಭಟ್ ಗುರೂಜಿ ಜೊತೆ ವಾಸವಿರುವುದು ಯಾರಿಗೂ ತಿಳಿದಿರಲಿಲ್ಲ. ಆದರೆ, ಸುಚಿತ್ರಾ ಮಗಳು ರಹಸ್ಯವಾಗಿ ತಂದೆಗೆ ಮೆಸೇಜ್ ಕಳುಹಿಸಿ ಸತ್ಯ ಬಿಚ್ಚಿಟ್ಟಿದ್ದಳು.
ಅಪ್ಪ, ನಾನು ಮತ್ತು ತಂಗಿ ಒಂದು ರೂಮಿನಲ್ಲಿ ಮಲಗುತ್ತೇವೆ. ಅಮ್ಮ ಮತ್ತು ಗುರೂಜಿ ಬೇರೆ ರೂಮಿನಲ್ಲಿ ಇರುತ್ತಾರೆ. ಅಮ್ಮ ನನಗೆ ತುಂಬಾ ಹಿಂಸೆ ನೀಡುತ್ತಿದ್ದಾಳೆ, ದಯವಿಟ್ಟು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು, ಇಲ್ಲದಿದ್ದರೆ ನಾನು ಸಾಯುತ್ತೇನೆ,” ಎಂದು ಮಗಳು ಬೇಸರದಿಂದ ತನ್ನ ತಂದೆ ಮಹೇಶ್‌ಗೆ ಸಂದೇಶ ಕಳಿಸಿದ್ದಳು.
ಈ ನಡುವೆ, ಸುಚಿತ್ರಾ ಮತ್ತು ಗುರೂಜಿ ಎಷ್ಟು ಅನ್ಯೋನ್ಯವಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳು ಲಭ್ಯವಾಗಿವೆ. ಸುಚಿತ್ರಾಳ ಹೆಗಲ ಮೇಲೆ ಕೈಹಾಕಿ ಗುರೂಜಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಹಾಗೂ “ನನ್ನ ಕುಟುಂಬ” ಎಂದು ಗುರೂಜಿ ಶೀರ್ಷಿಕೆ ನೀಡಿರುವ ಫೋಟೋಗಳು ಇಬ್ಬರ ನಡುವಿನ ಸಂಬಂಧಕ್ಕೆ ಪುಷ್ಟಿ ನೀಡುವಂತಿದೆ.
ನನ್ನ ಹೆಂಡತಿ ನನ್ನ ಜೊತೆಯಲ್ಲೇ ಇದ್ದಳು. ಆದರೆ, ಫೇಸ್‌ಬುಕ್‌ನಲ್ಲಿ ಇದ್ದ ಬದ್ದ ಹುಡುಗರ ಜೊತೆ ಕಾಂಟಾಕ್ಟ್ ಮಾಡೋದು ಮಾಡ್ತಿದ್ದಳು. ಅವರ ಜೊತೆಗೆಲ್ಲಾ ಆಕೆ ತಿರುತ್ತಾ ಇರುತ್ತಿದ್ದಳು. ಈ ಬಗ್ಗೆ ನನಗೆ ಗೊತ್ತಾದಾಗ ಆಕೆಗೆ ಬೈದಿದ್ದೆ. ಆದರೂ ಆಕೆ ಪಾಠ ಕಲಿತಿರಲಿಲ್ಲ. ಈಗ ನನ್ನ ಬಿಟ್ಟು ಮಕ್ಕಳನ್ನು ಕರ್ಕೊಂಡು ಶಿವಮೊಗ್ಗ ಬಂದು ಸೆಟಲ್ ಆಗಿದ್ದಳು. ಯಾರೋ ಸ್ವಾಮಿ ಜೊತೆ ಇದ್ದಾಳೆ ಅಂತಾ ನನಗೆ ಮೊದಲು ಸುದ್ದಿ ಸಿಕ್ಕಿತ್ತು.
ಮಗಳು ಕೂಡ ಆಕೆಯ ಜೊತೆಯಲ್ಲೇ ಇದ್ದಳು. ಮಗಳು ಫೆ. 1ಕ್ಕೆ ನನಗೆ ಫೋನ್ ಮಾಡಿ, ‘ಪಪ್ಪ ನನ್ನ ಕರ್ಕೊಂಡು ಹೋಗು. ನಾನು ಮಮ್ಮಿ ಜೊತೆ ಇರಲ್ಲ. ನನಗೆ ಟಾರ್ಚರ್ ಕೊಡ್ತಾ ಇದ್ದಾಳೆ. ನಾನು ಇರಲ್ಲ. ನೀನು ಕರ್ಕೊಂಡು ಹೋಗು ಇಲ್ಲ ಅಂದ್ರೆ ನಾನು ಸತ್ತು ಹೋಗ್ತಿನಿ ಅಂತಾ ಹೇಳಿದ್ಲು’ ಅದಕ್ಕೆ ನಾನು, ‘ಮಗಳೇ ಬಸ್ ಹತ್ತಿ ಬಾರಮ್ಮ..’ಅಂತಾ ಹೇಳಿದೆ.
ಮಗಳು ನನ್ನ ಬಳಿ ಬಂದ ಬಳಿಕವೇ ಈ ರೀತಿ ಗಲಾಟೆ ಆಗಿದೆ. ಶಿವಮೊಗ್ಗದಿಂದ ರೌಡಿಗಳನ್ನು ಕರೆದುಕೊಂಡು ಬಂದು ನನಗೆ, ನನ್ನ ಅಣ್ಣನಿಗೆ ಹಾಗೂ ನನ್ನ ಫ್ರೆಂಡ್‌ಗೆ, ತಂದೆ-ತಾಯಿಗೆ ಎಲ್ಲರಿಗೂ ಚಾಕು ಚುಚ್ಚಿಬಿಟ್ಟಿದ್ದಾರೆ. ಮಗಳನ್ನು ಕರ್ಕೊಂಡು ಬಂದಿದ್ದಕ್ಕೆ, ಈ ರೀತಿಯಲ್ಲಿ ಹೊಡೆದಿದ್ದಾರೆ. ಹೊಡೆಸಿರೋದು ನನ್ನ ಹೆಂಡತಿಯೇ. ನಮ್ಮ ಮನೆ ಅವರಗುಪ್ಪದಲ್ಲಿ ಇರೋದು ಸರ್. ನನಗೆ, ನನ್ನ ಅಣ್ಣ ಹಾಗೂ ಫ್ರೆಂಡ್‌ಗೆ ಚಾಕುವಿನಿಂದ ಚುಚ್ಚಿದ್ದಾರೆ. ಆ ಜ್ಯೋತಿಷಿ ಕಮಲಾಕರ್ ಭಟ್ ಅಂತಾ ಹೇಳ್ತಾರೆ. ಅವರು ಶಾಸ್ತ್ರ ಹೇಳುವವರು. ಅವರ ಜೊತೆಗೆ ಇದ್ದಾಳೆ ಅಂತ ನನಗೆ ಸುದ್ದಿ ಸಿಕ್ಕಿರೋದು. ನನ್ನ ಹೆಂಡಿ ಹಾಗೂ ನಾಲ್ಕು ಹುಡುಗರ ಮೇಲೆ ಎಫ್‌ಐಆರ್ ಆಗಿದೆ ಎಂದು ಮಹೇಶ್ ಹೇಳಿದ್ದಾರೆ.
ಇನ್ನು ಮಗಳು ತಂದೆಯ ಬಳಿ ಬಂದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ಆಕ್ರೋಶಗೊಂಡ ಸುಚಿತ್ರಾ ಮತ್ತು ಆಕೆಯ ತಂದೆ, ಇತರ ನಾಲ್ವರೊಂದಿಗೆ ರಾತ್ರಿ ವೇಳೆ ಮಹೇಶ್ ಮನೆಗೆ ನುಗ್ಗಿದ್ದಾರೆ. ಚಾಕು ಹಿಡಿದು ನಡೆಸಿದ ಈ ದಾಳಿಯಲ್ಲಿ ಮಹೇಶ್ ಅವರ ತಮ್ಮ ವಸಂತ್ ನಾಯ್ಕ್ ಮತ್ತು ನೆರೆಯ ಕುಮಾರ್ ಅವರಿಗೆ ತೀವ್ರವಾಗಿ ಇರಿಯಲಾಗಿದೆ. ಈ ರಕ್ತಸಿಕ್ತ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದು, ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಸಿಎಂ ಸಿದ್ದರಾಮಯ್ಯ ಜೊತೆ ಕಮಲಾಕರ್ ಭಟ್ ಇರೋ ಫೋಟೋ ಟ್ವೀಟ್ ಮಾಡಿದ ಶಾಸಕ ಸುರೇಶ್‌ಕುಮಾರ್