Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸಿಜೆ ರಾಯ್‌ ಆತ್ಮಹತ್ಯೆ ಹಿಂದಿನ ಕಾರಣವೇನು?; ಮಾಹಿತಿ ಕಲೆಹಾಕಿದ SIT
ಕರ್ನಾಟಕಪ್ರಮುಖ

ಸಿಜೆ ರಾಯ್‌ ಆತ್ಮಹತ್ಯೆ ಹಿಂದಿನ ಕಾರಣವೇನು?; ಮಾಹಿತಿ ಕಲೆಹಾಕಿದ SIT

Share
2 Min Read
SHARE

https://youtube.com/shorts/2Z4I0oFUbOQ?si=E_8G5fLxr2N6s9QC

Subscribe ನ್ಯೂಸಿಕ್ಸ್ ಕನ್ನಡ

newsics.com

ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಹೊಸ ಮಜಲನ್ನು ಪಡೆದುಕೊಂಡಿದ್ದು, SIT ಹಾಗೂ ಪೊಲೀಸರು ಈ ಪ್ರಕರಣವನ್ನು ಭೇದಿಸಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಎಸ್‌ಐಟಿ ಅಧಿಕಾರಿಗಳು ರಾಯ್‌ ಅವರ ಡೈರಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿನ ಮಾಹಿತಿ ಆಧಾರದ ಮೇಲೆ ಹಾಗೂ ಅವರ ಕುಟುಂಬದ ವಿಚಾರಣೆಗಳ ಮೂಲಕ ಈ ತನಿಖೆಯನ್ನು ಮಾಡುತ್ತಿದ್ದು, ಐಟಿ ಅಧಿಕಾರಿಗಳ ವಿಚಾರಣೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಇದೀಗ ಹೊಸ ಮಾಹಿತಿಯೊಂದು ಹೊರಬಿದ್ದಿದೆ.
ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧಕರಿಂದ (CA) ಎಸ್‌ಐಟಿ ಅಧಿಕಾರಿಗಳು ಪೊಲೀಸರು ಕಂಪನಿಗೆ ಸಂಬಂಧಿಸಿದ ಮಾಹಿರಿ ಪಡೆದಿದ್ದಾರೆ ಎನ್ನಲಾಗಿದೆ. ಎಸ್‌ಐಟಿ ಅಧಿಕಾರಿಗಳು ಕಾನ್ಫಿಡೆಂಟ್‌ ಗ್ರೂಪ್‌ನ ಲೆಕ್ಕ ಪರಿಶೋಧಕರಿಂದ ಕಂಪನಿಯ ವಾರ್ಷಿಕ ವಹಿವಾಟು, ಸಾಲ, ವಿದೇಶದಲ್ಲಿ ಹೂಡಿಕೆ, ಕಂಪನಿಯ ಎಲ್ಲಾ ವ್ಯವಹಾರಗಳ ಸಂಪೂರ್ಣ ಲೆಕ್ಕದ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ. ಕಾನ್ಸಿಡೆಂಟ್ ಗ್ರೂಪ್ ಕರ್ನಾಟಕ, ಕೇರಳ, ದುಬೈ ಸೇರಿದೇಶದ ಬಹುತೇಕ ಭಾಗಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸುತ್ತಿತ್ತು.
ಆದರೆ ಕಂಪನಿಯವರು ಸಂಪೂರ್ಣ ಮಾಹಿತಿ ನೀಡಲ ಕೆಲ ಸಮಯ ಬೇಕು ಎಂದಿದ್ದಾರಂತೆ. ಅಲ್ಲದೇ ಈ ಲೆಕ್ಕಗಳನ್ನು ನೋಡಿ ರಾಯ್‌ ಅವರು ಏನಾದರೂ ಸಾಲದಲ್ಲಿ ಇದ್ದರೇ? ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಆಯಾಮದಲ್ಲಿ ಪರಿಶೀಲಿಸಲು SIT ಈ ಕ್ರಮಕ್ಕೆ ಮುಂದಾಗಿದೆ. ಇನ್ನು, ಸದ್ಯ ವಶಡಿಸಿಕೊಂಡಿರುವರಾಯ್‌ ಅವರ ಫೋನ್‌ ಹಾಗೂ ಡೈರಿಯನ್ನು ಪೊಲೀಸರು FSL ಗೆ ಕಳುಹಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಮಾಹಿತಿ ಬರಬೇಕಿದೆ. ಆದರೆ ಐಫೋನ್‌ ಪಾಸ್‌ವರ್ಡ್‌ ಇರುವ ಕಾರಣ ಅದನ್ನು ಕ್ರ್ಯಾಕ್‌ ಮಾಡಲಾಗುತ್ತಿಲ್ಲ ಅನಿಸಬಹುದು.ಸದ್ಯ ಸಿಜೆ ರಾಯ್‌ ಅವರ ಸಾವಿಗೆ ಸ್ಪಷ್ಟವಾದ ಕಾರನ ಈವರೆಗೂ SIT ಅಥವಾ ಪೊಲೀಸರು ತಿಳಿಸಿಲ್ಲ. ಆದರೆ ಕೆಲ ಮೂಲಗಳ ಪ್ರಕಾರ ರಾಯ್‌ ಸ್ವಲ್ಪ ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗುತ್ತಿದೆ. ರಿಯಲ್‌ ಎಸ್ಟೇಟ್‌ ಕುಸಿತವಾದ ಕಾರಣ ಬೇರೆ ಹೊಸ ವ್ಯವಹಾರ ಮಾಡುವ ಆಲೋಚನೆಯನ್ನೂ ಮಾಡಿದ್ದರು ಎನ್ನಲಾಗುತ್ತಿದೆ. ಅಲ್ಲದೇ ರಾಯ್‌ ದೇಶ-ವಿದೇಶಗಳಲ್ಲಿನ ಹೂಡಿಕೆಯಲ್ಲಿ ಯಾವುದೇ ಬ್ಯಾಂಕ್‌ ಸಾಲ ಮಾಡದಿರುವ ಕಾರಣ ಏನಾದರೂ ಅಕ್ರಮ ಹಣದಿಂದ ಈ ವ್ಯವಹಾರ ಮಾಡುತ್ತಿದ್ದರೇ ಎಂದು ತನಿಖಾ ಸಂಸ್ಥೆಗಳಿಗೆ ಶಂಕೆ ವ್ಯಕ್ತವಾಗಿದೆ.ರಾಯ್ ಅವರ ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೇ ಕಾರಣ ಎಂಬ ಆರೋಪ ಬಲವಾಗಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ. ಕೊಚ್ಚಿಯಿಂದ ಬಂದಿರುವ ಐಆರ್ ಎಸ್ ಅಧಿಕಾರಿ ಕೃಷ್ಣಪ್ರಸಾದ್ ನೇತೃತ್ವದ ಐಟಿ ಅಧಿಕಾರಿಗಳ ತಂಡ ಸಿಜೆ ರಾಯ್ ಅವರ ಕಚೇರಿಗಳ ಮೇಲೆ ದಾಳಿ ನಡೆಸಿತ್ತು, ಈ ಹಿನ್ನೆಲೆಯಲ್ಲಿ ಈ ಅಧಿಕಾರಿಯ ತಂಡಕ್ಕೆ ಬೆಂಗಳೂರು ನಗರ ಬಿಟ್ಟು ತೆರಳದಂತೆ ಸೂಚನೆ ನೀಡಿದ್ದಲ್ಲದೆ, ಅವಶ್ಯಕತೆ ಬಿದ್ದಲ್ಲಿ ಹೇಳಿಕೆ ದಾಖಲಿಸುವುದಾಗಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಿಯಕರನೊಂದಿಗೆ ಸೇರಿ ನಡು ರಸ್ತೆಯಲ್ಲಿ ಮಾವನಿಗೆ ಬೆಂಕಿ ಹಚ್ಚಿದ ಸೊಸೆ

TAGGED:What was the reason behind CJ Roy's suicide?; SIT gathers information
Share This Article
Facebook Twitter Copy Link Print
Previous Article ಪ್ರಿಯಕರನೊಂದಿಗೆ ಸೇರಿ ನಡು ರಸ್ತೆಯಲ್ಲಿ ಮಾವನಿಗೆ ಬೆಂಕಿ ಹಚ್ಚಿದ ಸೊಸೆ
Next Article ಸುಪ್ರೀಂನಲ್ಲೂ ದೀದಿ ಹೈಡ್ರಾಮಾ: ಕೋರ್ಟ್‌ನಲ್ಲಿ ತಾನೇ ವಾದ ಮಾಡಲು ಮುಂದಾದ ಪಶ್ಚಿಮ ಬಂಗಾಳ ಸಿಎಂ, ಸಿಜೆಐ ಅಸಮಾಧಾನ

Popular Posts

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?