Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗುಡ್ ನ್ಯೂಸ್: ಇನ್ಮುಂದೆ ಈ ರೈಲಿನಲ್ಲಿ ಊಟ ಉಚಿತ
ದೇಶಪ್ರಮುಖ

ಗುಡ್ ನ್ಯೂಸ್: ಇನ್ಮುಂದೆ ಈ ರೈಲಿನಲ್ಲಿ ಊಟ ಉಚಿತ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳಾದ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಿಸುವವರಿಗೆ ಒಂದು ವಿಶೇಷ ಸೌಲಭ್ಯವಿದೆ.
ನಿಮ್ಮ ರೈಲು (ರಾಜಧಾನಿ, ಶತಾಬ್ದಿ ಅಥವಾ ದುರಂತೋ) ಅದರ ನಿಗದಿತ ಸಮಯಕ್ಕಿಂತ 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಉಚಿತವಾಗಿ ಉಪಾಹಾರ ನೀಡಬೇಕು.
ಇನ್ನು ಈ ನಿಯಮವು ಮುಖ್ಯವಾಗಿ ಟಿಕೆಟ್ ದರದೊಂದಿಗೆ ಆಹಾರದ ಶುಲ್ಕವನ್ನೂ ಒಳಗೊಂಡಿರುವ ಪ್ರೀಮಿಯಂ ರೈಲುಗಳಿಗೆ ಅನ್ವಯಿಸುತ್ತದೆ. ವಿಳಂಬವಾದ ಸಮಯಕ್ಕೆ ಅನುಗುಣವಾಗಿ ರೈಲಿನಲ್ಲಿ ನೀಡುವ ಊಟದಲ್ಲೂ ಬದಲಾವಣೆಗಳು ಆಗುತ್ತದೆ. ಮುಂಜಾನೆ ಅಥವಾ ಸಂಜೆ ರೈಲು ವಿಳಂಬವಾದರೆ, ಆ ಹೊತ್ತಿಗೆ ಚಹಾ ಅಥವಾ ಕಾಫಿ ಮತ್ತು ಬಿಸ್ಕತ್ತುಗಳನ್ನು ನೀಡಲಾಗುವುದು. ಬೆಳಗಿನ ಉಪಾಹಾರದಲ್ಲಿ ಬ್ರೆಡ್ ಸ್ಲೈಸ್‌ಗಳು, ಬೆಣ್ಣೆ ಮತ್ತು ಜ್ಯೂಸ್ ನೀಡಲಾಗುವುದು. ಮಧ್ಯಾಹ್ನ ಅಥವಾ ರಾತ್ರಿ ರೈಲು ವಿಳಂಬವಾದರೆ, ಅನ್ನ, ದಾಲ್ (ಬೇಳೆ ಸಾರು), ರಾಜ್ಮಾ ಅಥವಾ ಚೋಲೆ, ಮತ್ತು ಉಪ್ಪಿನಕಾಯಿ. ಕೆಲವು ಸಂದರ್ಭಗಳಲ್ಲಿ 7 ಪೂರಿ ಮತ್ತು ಮಿಕ್ಸ್ ವೆಜಿಟೆಬಲ್ ಸಾಗುವನ್ನು ನೀಡಲಾಗುತ್ತದೆ.
ಅನೇಕ ಬಾರಿ ರೈಲ್ವೆ ಸಿಬ್ಬಂದಿ ಸ್ವತಃ ಆಹಾರ ನೀಡದಿದ್ದರೆ, ಪ್ರಯಾಣಿಕರು ಈ ನಿಯಮವನ್ನು ನೆನಪಿಸಿ ಆಹಾರವನ್ನು ಕೇಳಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ಇಲಾಖೆ ಹೇಳಿದೆ. ಒಂದು ವೇಳೆ ರೈಲು 3 ಗಂಟೆಗಿಂತ ಹೆಚ್ಚು ವಿಳಂಬವಾದರೆ ಅಥವಾ ಮಾರ್ಗ ಬದಲಾವಣೆಯಾದರೆ, ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸಿ ಪೂರ್ಣ ಹಣವನ್ನು ಮರಳಿ ಪಡೆಯಬಹುದು. ಇದರ ಜತೆಗೆ ವಿಳಂಬವಾದ ಸಂದರ್ಭದಲ್ಲಿ ನಿಲ್ದಾಣಗಳಲ್ಲಿರುವ ವೇಟಿಂಗ್ ರೂಮ್‌ಗಳನ್ನು ಪ್ರಯಾಣಿಕರು ಉಚಿತವಾಗಿ ಬಳಸಿಕೊಳ್ಳಬಹುದು. ಈ ನಿಯಮವು ರೈಲ್ವೆಯ ಈ ನೀತಿಯು ವಿಶೇಷವಾಗಿ ಚಳಿಗಾಲದಲ್ಲಿ ಮಂಜಿನಿಂದಾಗಿ ರೈಲುಗಳು ವಿಳಂಬವಾದಾಗ ಪ್ರಯಾಣಿಕರಿಗೆ ತುಂಬಾ ಸಹಕಾರಿಯಾಗುತ್ತದೆ.
ಆನ್‌ಲೈನ್‌ನಲ್ಲಿ ಟಿಕೆಟ್ ರಿಫಂಡ್ (TDR) ಪಡೆಯುವುದು ಹೇಗೆ?
ರೈಲು ಅದರ ಪ್ರಾರಂಭದ ನಿಲ್ದಾಣದಿಂದ (Source Station) 3 ಗಂಟೆಗಿಂತ ಹೆಚ್ಚು ವಿಳಂಬವಾಗಿದ್ದರೆ ಮತ್ತು ನೀವು ಆ ರೈಲಿನಲ್ಲಿ ಪ್ರಯಾಣ ಮಾಡದಿದ್ದರೆ, ನೀವು ಪೂರ್ಣ ಹಣವನ್ನು (Full Refund) ಪಡೆಯಲು TDR ಸಲ್ಲಿಸಬಹುದು. ರೈಲು ಹೊರಡುವ ಮುನ್ನ ಅಥವಾ ರೈಲು ಹೊರಟ ಕೆಲವೇ ಗಂಟೆಗಳ ಒಳಗೆ (ಸಾಮಾನ್ಯವಾಗಿ 3-6 ಗಂಟೆ) TDR ಸಲ್ಲಿಸಬೇಕು.
ಆನ್‌ಲೈನ್‌ನಲ್ಲಿ TDR ಸಲ್ಲಿಸುವುದು ಹೇಗೆ?
ಮೊದಲು IRCTC ವೆಬ್‌ಸೈಟ್ ಅಥವಾ ಆಪ್‌ಗೆ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
ಮೆನುವಿನಲ್ಲಿರುವ ‘My Account’ ವಿಭಾಗಕ್ಕೆ ಹೋಗಿ, ಅಲ್ಲಿ ‘My Transactions’ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಕಾಣುವ ‘File TDR’ ಎಂಬ ಆಯ್ಕೆಯನ್ನು ಆರಿಸಿ.
ನೀವು ಯಾವ ಟಿಕೆಟ್‌ಗೆ ರಿಫಂಡ್ ಪಡೆಯಬೇಕೋ ಆ PNR ಸಂಖ್ಯೆಯನ್ನು ಆರಿಸಿ.
ಅಲ್ಲಿ ಹಲವು ಕಾರಣಗಳ ಆಯಕ್ಎ ಇರುತ್ತದೆ. ರೈಲು ವಿಳಂಬವಾಗಿದ್ದರೆ “Train Late More Than Three Hours and Passenger Not Traveled” ಎಂಬ ಆಯ್ಕೆಯನ್ನು ಆರಿಸಿ.
ಫೈಲ್ ಮಾಡಿದ ನಂತರ ನಿಮಗೆ ಒಂದು ಕನ್ಫರ್ಮೇಷನ್ ಸಿಗುತ್ತದೆ.
ಹಣ ಯಾವಾಗ ವಾಪಸ್ ಬರುತ್ತದೆ?

  • TDR ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಲು ರೈಲ್ವೆ ಇಲಾಖೆಯು 15 ರಿಂದ 90 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು.
  • ಹಣವು ನೀವು ಟಿಕೆಟ್ ಬುಕ್ ಮಾಡುವಾಗ ಬಳಸಿದ ಬ್ಯಾಂಕ್ ಅಕೌಂಟ್‌ಗೆ (Original Payment Method) ನೇರವಾಗಿ ಜಮೆಯಾಗುತ್ತದೆ.

ಒಂದು ಚಿತ್ರ ಸೈನ್ ಮಾಡಲು ರಿಷಬ್ ಶೆಟ್ರು ಎಷ್ಟು ಕೋಟಿ ಕೇಳ್ತಾರೆಂತೆ ಗೊತ್ತೇ?

TAGGED:Good News: Meals are now free on this train
Share This Article
Facebook Twitter Copy Link Print
Previous Article ಒಂದು ಚಿತ್ರ ಸೈನ್ ಮಾಡಲು ರಿಷಬ್ ಶೆಟ್ರು ಎಷ್ಟು ಕೋಟಿ ಕೇಳ್ತಾರೆಂತೆ ಗೊತ್ತೇ?
Next Article ತಿಂಗಳಿಗೆ 6 ಲಕ್ಷ ದುಡಿಯುತ್ತಾನೆ 18 ವರ್ಷದ ಈ ಯುವಕ

Popular Posts

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

You Might Also Like

ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read
ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?