Subscribe ನ್ಯೂಸಿಕ್ಸ್ ಕನ್ನಡ
newsics.com
ಡಿವೈನ್ ಸ್ಟಾರ್ ರಿಷಬ್ ಶೆಟ್ರು ಇಂಡಿಯಾದ ಹೈಯೆಸ್ಟ್ ಪೇಡ್ ಆಯಕ್ಟರ್, ಡೈರೆಕ್ಟರ್,ರೈಟರ್ ಆಗಿದ್ದಾರೆ. ಮುಂಬೈ ಅಲ್ಲಿ ಆಫೀಸ್ ಬಾಯ್ ಆಗಿಯ ಕೆಲಸ ಮಾಡಿರೋ ಪ್ರಶಾಂತ್ ಇದೀಗ ಅತಿ ಹೆಚ್ಚು ಸಂಭಾವನೆ ಕೇಳುವ ಮಟ್ಟಿಗೆ ಬೆಳೆದಿದ್ದಾರೆ.
ಕಾಂತಾರ ಚಿತ್ರ ಬಂದಾಗ ಇವರ ಸಂಭಾವನೆ ನಾಲ್ಕು ಕೋಟಿ ಇತ್ತು. ಆದರೆ, ಕಾಂತಾರ ಚಾಪ್ಟರ್ ಒನ್ ಬಂದ್ಮೇಲೆ ಅದು ಡಬಲ್ ಟ್ರಿಪಲ್ ಆಗಿದೆ ಅನ್ನುವ ಸುದ್ದಿ ಇದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾರೂ ಏನೂ ಹೇಳಿಕೊಂಡಿಲ್ಲ.
ರಿಷಬ್ ಶೆಟ್ರು ಒಂದು ಚಿತ್ರದ ಲೀಡ್ ರೋಲ್ ಮಾಡೋಕೆ 80 ಕೋಟಿ ಕೇಳ್ತಾರಂತೆ. ಇದು ಎಷ್ಟು ಸತ್ಯ, ಅದೆಷ್ಟು ಸುಳ್ಳು ಅನ್ನೋದು ಸದ್ಯದ ಪ್ರಶ್ನೆ ಆಗಿದೆ.
ಆದರೆ, ಇವರ ಬೇಡಿಕೆ ಅಂತೂ ಜಾಸ್ತಿ ಇದೆ.
ಪ್ರಶಾಂತ್ ವರ್ಮಾ ಡೈರೆಕ್ಟ ಮಾಡ್ತಿರೋ ಜೈ ಹನುಮಾನ್ ಚಿತ್ರದಲ್ಲಿ ರಿಷಬ್ ಶೆಟ್ರು ಅಭಿನಯಿಸುತ್ತಿದ್ದಾರೆ. ಇದಕ್ಕೆ ಏನು ಬೇಕೋ ಆ ತಯಾರಿನೂ ಮಾಡಿಕೊಂಡಿದ್ದಾರೆ.