Subscribe ನ್ಯೂಸಿಕ್ಸ್ ಕನ್ನಡ
newsics.com
ಬಾಲಿವುಡ್ ಚಿತ್ರರಂಗದ ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನ ಪಯಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಅವರ ನಿರ್ಧಾರ ಕೇಳಿ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.ಸುದೀರ್ಘ ವೃತಿ ಬದುಕಿಗೆ ಅರಿಜಿತ್ ವಿದಾಯ ಹೇಳಿದ್ದಾರೆ. ಇನ್ಮುಂದೆ ತಾನು ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುವುದಿಲ್ಲ.ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ, 38 ವರ್ಷದ ಅರಿಜಿತ್ ಸಿಂಗ್ ಈ ಘೋಷಣೆ ಮಾಡಿರುವುದು, ಅವರ ಅಭಿಮಾನಿಗಳಲ್ಲಿ ಆಘಾತ-ನಿರಾಸೆಗೆ ಕಾರಣವಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು,’ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಲು ನಿರ್ಧರಿಸಿರುವೆ. ಅದೊಂದು ಅದ್ಭುತ ಪಯಣ. ಇಷ್ಟು ವರ್ಷಗಳ ಕಾಲ ನನ್ನ ಹಾಡುಗಳನ್ನು ಕೇಳಿ, ಅಪಾರ ಪ್ರೀತಿ ತೋರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಲು ಬಯಸುವೆ’ ಎಂದು ಹೇಳಿದ್ದಾರೆ.
‘ಸ್ವತಂತ್ರವಾಗಿ ಸಂಗೀತ ಸಂಯೋಜನೆ ಕಾರ್ಯವನ್ನು ಮುಂದುವರಿಸುವೆ ಹಾಗೂ ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಸುಟ್ಟು ಕರಕಲಾಗಿದ್ದ ದೇಹಗಳ ನಡುವೆ ಅಜಿತ್ ಪವಾರ್ ಮೃತದೇಹ ಗುರುತಿಸಿದ್ದು ಹೇಗೆ?