Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವೈದ್ಯಕೀಯ ಸಹಾಯವಿಲ್ಲದೆ ಸಮುದ್ರ ತೀರದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.
ಹೌದು, ಸಹಜ ಹೆರಿಗೆಯ ಕನಸನ್ನು ನನಸಾಗಿಸಲು, ಪತಿಯ ನೆರವಿನೊಂದಿಗೆ ಕಡಲತೀರಕ್ಕೆ ತೆರಳಿ ಆರೋಗ್ಯವಂತ ಗಂಡು ಮಗುವನ್ನು ಈ ಮಹಿಳೆ ಹೆತ್ತಿದ್ದಾರೆ. ಸದ್ಯ ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿದೆ.
ನೈಸರ್ಗಿಕವಾಗಿಯೇ ಮಗುವನ್ನು ಹೆರುವ ಸಲುವಾಗಿ ವೈದ್ಯರು, ಆಸ್ಪತ್ರೆಗಳ ಸಹಾಯವಿಲ್ಲದೇ ಸಮುದ್ರ ತೀರಕ್ಕೆ ಹೋಗಿ ಮಗು ಹೆತ್ತಿದ್ದಾಳೆ! ನಿಕರಾಗುವಾದಿಂದ ಬಂದ ಮಹಿಳೆ ಜೋಸಿ ಪ್ಯೂಕರ್ಟ್ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದ್ದಾರೆ.
ಜೋಸಿ ಪ್ಯೂಕರ್ಟ್ ಮತ್ತು ಆಕೆಯ ಗಂಡ ಬೆನ್ನಿ ಕಾರ್ನೆಲಿಯಸ್ ತಮ್ಮ ಮಗ ಬೋಧಿಯನ್ನು ಸ್ವಾಗತಿಸಲು ಬೀಚ್ಗೆ ಹೋಗಿದ್ದರು. ಇವರು ಹೆರಿಗೆಗೆ ಅವಶ್ಯಕವಾಗಿರುವ ಮೂಳ ಕಿಟ್ ಅನ್ನು ಮಾತ್ರ ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿಯೇ ಹೆರಿಗೆಯಾಗಿದೆ. ಮೂರುವರೆ ಕೆ.ಜಿ. ತೂಕವುಳ್ಳ ಮಗ ಹುಟ್ಟಿದ್ದಾನೆ. ಈ ಬಗ್ಗೆ ಮಾತನಾಡಿರುವ ಮಹಿಳೆ, ನನ್ನ ಮೇಲೆ, ನನ್ನ ದೇಹದ ಮೇಲೆ ನನಗೆ ನಂಬಿಕೆ ಇತ್ತು. ಇದೇ ರೀತಿ ನೈಸರ್ಗಿಕವಾಗಿ ಡೆಲವರಿ ಆಗುವ ಕನಸು ಕಂಡಿದ್ದು, ನನ್ನ ಮನಸ್ಸನ್ನು ಹಾಗೂ ದೇಹವನ್ನು ಇದಕ್ಕಾಗಿ ಸಿದ್ಧಗೊಳಿಸಿದ್ದೆ. ನನ್ನೊಂದಿಗೆ, ಟೆವೆಲ್ಗಳು, ಗಾಜಿನ ಪಾತ್ರೆ, ಟಿಶ್ಯೂ ಪೇಪರ್ಸ್ ಮತ್ತು ಕೆಲವು ಬಟ್ಟಲುಗಳನ್ನು ಕೊಂಡೊಯ್ದಿದ್ದೆ. ನನ್ನ ಪತಿ ಹೆರಿಗೆಗೆ ಸಹರಿಸಿದರು. ಹೆರಿಗೆ ನಂತರ, ಅದೇ ನೀರಿನಲ್ಲಿ ನನ್ನನ್ನು ಮತ್ತು ಮಗುವನ್ನು ತೊಳೆದು, ಶುದ್ಧ ಬಟ್ಟೆ ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ.