Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಾರ್ಮೆಂಟ್ಸ್ ಕಂಪನಿ ಶುರು ಮಾಡಿದ ಆಸ್ಟ್ರೇಲಿಯನ್ ಉದ್ಯಮಿ ಕೆಲಸಗಾರರ ವಿಷಯಕ್ಕೆ ಬೇಸತ್ತಿದ್ಯಾಕೆ?
ಕರ್ನಾಟಕಪ್ರಮುಖಲೈಫ್‌ಸ್ಟೈಲ್

ಗಾರ್ಮೆಂಟ್ಸ್ ಕಂಪನಿ ಶುರು ಮಾಡಿದ ಆಸ್ಟ್ರೇಲಿಯನ್ ಉದ್ಯಮಿ ಕೆಲಸಗಾರರ ವಿಷಯಕ್ಕೆ ಬೇಸತ್ತಿದ್ಯಾಕೆ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಆಸ್ಟ್ರೇಲಿಯಾದ ಕ್ರಿಸ್ ಎಂಬುವವರ ಪತ್ನಿಗೆ ಬೆಂಗಳೂರಿನಲ್ಲಿ ಟೆಕ್ ಕೆಲಸ ಸಿಕ್ಕಿತ್ತು. ಎರಡು ವರ್ಷದ ಹಿಂದೆ ಕ್ರಿಸ್ ಸಿಲಿಕಾನ್ ಸಿಟಿಗೆ ಬಂದಿದ್ದಾರೆ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆ, ಕಡಿಮೆ ಸಂಬಳ, ಮಹಿಳೆಯರಿಗೆ ದೌರ್ಜನ್ಯ ಇತ್ಯಾದಿ ಬಗ್ಗೆ ಅವರು ಓದಿ ತಿಳಿದು, ಬೆನಿವೊಲೆಂಶಿಯಾ ಎನ್ನುವ ಒಂದು ಗಾರ್ಮೆಂಟ್ಸ್ ಕಂಪನಿಯನ್ನೇ ಶುರು ಮಾಡುತ್ತಾರೆ.

ಟೈಲರ್ಗಳು ಸೇರಿದಂತೆ ವಿವಿಧ ಕಾರ್ಮಿಕರಿಗೆ ಕೈತುಂಬ ಸಂಬಳ ಕೊಡುತ್ತಾರೆ. ಬೇರೆ ಕಡೆ 8,000 ರೂ ಸಂಬಳ ಪಡೆಯುವ ಟೈಲರ್ಗಳಿಗೆ 30,000 ರೂ ಸಂಬಳ ಕೊಡುತ್ತಾರೆ. ತರಬೇತಿ ಕೊಟ್ಟು ಆ ಟೈಲರ್ ಅನ್ನು ಸರಿಯಾಗಿ ಕೆಲಸಕ್ಕೆ ಬಳಸಿಕೊಳ್ಳಬೇಕೆನ್ನುವಷ್ಟರಲ್ಲಿ ಕೆಲಸ ಬಿಟ್ಟು ಹೋಗುವುದು ಇತ್ಯಾದಿ ಸಮಸ್ಯೆಗಳು ಅವರಿಗೆ ಅಡಿಗಡಿಗೆ ಬಂದೊದಗುತ್ತಿರುತ್ತವೆ.

ಒಬ್ಬ ಲೇಡಿ ಟೈಲರ್ಳ ಕೆಲಸವನ್ನು ಕ್ರಿಸ್ ಬಹುವಾಗಿ ಪ್ರಶಂಸಿಸುತ್ತಾರೆ. ಆದರೆ, ಆಕೆಯ ಗಂಡನಿಗೆ ಇದನ್ನು ಸಹಿಸಿಕೊಳ್ಳಲು ಆಗದೆ ಪತ್ನಿಯನ್ನು ಕೆಲಸದಿಂದ ಬಿಡಿಸುತ್ತಾನೆ. ‘ಆಕೆ ತರಬೇತಿಯಲ್ಲಿ ಹೊಸ ಕೌಶಲ್ಯಗಳನ್ನು ಚೆನ್ನಾಗಿ ಕಲಿಯುತ್ತಿದ್ದಳು. ನಾನು ಪ್ರಶಂಸಿಸಿದ್ದೆ. ಒಮ್ಮೆ ಮಳೆ ಬರುತ್ತಿತ್ತು. ಆಕೆಯ ಶೂ ನೀರಿನಲ್ಲಿ ನೆನೆಯಬಾರದೆಂದು ಪಕ್ಕಕ್ಕೆ ಜರುಗಿಸಿದೆ. ಅದು ಆಕೆಯ ಪತಿಗೆ ಇಷ್ಟವಾಗಲಿಲ್ಲ. ಆಸ್ಟ್ರೇಲಿಯಾದಲ್ಲಾಗಿದ್ದರೆ ಯಾರಿಗೇ ಆದರೂ ನಾವು ಈ ಕೆಲಸ ಮಾಡುತ್ತಿರುತ್ತೇವೆ’ ಎಂದು ಕ್ರಿಸ್ ಅಚ್ಚರಿಗೊಂಡಿದ್ದಾರೆ.

ಕ್ರಿಸ್ ತಮ್ಮ ಕಂಪನಿಯ ಸೋಷಿಯಲ್ ಮೀಡಿಯಾ ಮ್ಯಾನೇಜ್ ಮಾಡಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡುತ್ತಾರೆ. ದಿನವೂ ಇನ್ಸ್ಟಾದಲ್ಲಿ ಒಂದು ಪೋಸ್ಟ್ ಹಾಕುವಂತೆ ಹೇಳಿರುತ್ತಾರೆ. ಆ ವ್ಯಕ್ತಿ ಎರಡು ತಿಂಗಳಲ್ಲಿ ಹಾಕಿದ್ದು ಮೂರೇ ಪೋಸ್ಟ್. ಇನ್ನು, ಸಂದರ್ಶನಕ್ಕೆಂದು ಬಂದವರು ತಮ್ಮ ಕೌಶಲ್ಯ ತೋರಿಸಲು ಕೇಳಿದಾಗ ಪ್ರತಿಕ್ರಿಯಿಸುವುದೇ ಇಲ್ಲ. ಮತ್ತೊಬ್ಬ ವ್ಯಕ್ತಿ, ಇಂಟರ್ವ್ಯೂಗೆ ಬರಲು ಆಗುವ ವೆಚ್ಚವನ್ನೂ ಭರಿಸಬೇಕೆಂದು ಕೇಳಿದ್ದಾರೆ. ಹೀಗೆ ಬೆಂಗಳೂರಿನಲ್ಲಿ ಕೆಲಸಗಾರರ ವರ್ತನೆಯಿಂದ ಆಸ್ಟ್ರೇಲಿಯಾದ ಕ್ರಿಸ್ ಹೈರಾಣಾಗಿ ಹೋಗಿದ್ದಾರೆ.

ಕೆಲಸಗಾರರು ಸರಿಯಾಗಿ ನಿಲ್ಲದ ಕಾರಣ ಒಂದು ವರ್ಷದಲ್ಲಿ ಇವರ ಕಂಪನಿಗೆ 30 ಲಕ್ಷ ರೂ ನಷ್ಟವಾಗಿದೆಯಂತೆ. ಕೆಲಸಗಾರರಿಗೆ ಉತ್ತಮ ಸೌಕರ್ಯ ಕೊಡಲು ಮತ್ತು ಸೌಜನ್ಯದಿಂದ ನೋಡಿಕೊಳ್ಳಲು ಹೋಗಿ ಇವರೇ ಕಷ್ಟಕ್ಕೆ ಸಿಕ್ಕಿಕೊಂಡಂತಾಗಿದೆ. ತಮ್ಮ ಹಾಗೂ ಕೆಲಸಗಾರರ ಮಧ್ಯೆ ಸಾಂಸ್ಕೃತಿಕ ವ್ಯತ್ಯಾಸ ಇರಬಹುದೆಂದು ಗ್ರಹಿಸಿ, ಸ್ಥಳೀಯ ವ್ಯಕ್ತಿಯೊಬ್ಬರನ್ನು ಆಪರೇಷನಲ್ ಮ್ಯಾನೇಜರ್ ಆಗಿ ನೇಮಕ ಮಾಡಿದ್ದಾರೆ. ಭಾರತೀಯ ಕಾರ್ಮಿಕರನ್ನು ಹೇಗೆ ನಿಭಾಯಿಸಬೇಕೆಂಬ ಪಾಠವನ್ನು ಅವರಿಂದ ಕ್ರಿಸ್ ಕಲಿಯುತ್ತಿದ್ದಾರೆ.

‘ಕೆಲಸಗಾರರೊಂದಿಗೆ ಅಂತರ ಕಾಯ್ದುಕೊಳ್ಳುವುದು, ಹೆಚ್ಚು ಸ್ನೇಹಪೂರ್ವಕವಾಗಿ ವರ್ತಿಸದೇ ಇರುವುದು, ಬಾಸಿಸಂ ತೋರುವುದು ಇವನ್ನು ಆ ಮ್ಯಾನೇಜರ್ ನನಗೆ ಕಲಿಸುತ್ತಿದ್ದಾರೆ’ ಎಂದು ತಮಾಷೆ ಮಾಡುವ ಕ್ರಿಸ್, ಮುಂದಿನ ದಿನಗಳಲ್ಲೂ ಪರಿಸ್ಥಿತಿ ಸರಿ ಹೋಗದಿದ್ದರೆ ಕಂಪನಿಯನ್ನೇ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ.

ಠಾಣೆಯಲ್ಲೇ ಜೀವ ಕಳೆದುಕೊಂಡ ಹೆಡ್ ಕಾನ್ಸ್ಟೆಬಲ್! ಡೆತ್‌ನೋಟ್‌ನಲ್ಲೇನಿದೆ?

TAGGED:An Australian businessman who started a garment company got fed up with the way workers were treated
Share This Article
Facebook Twitter Copy Link Print
Previous Article ಪತಿಯ ನೆರವಿನೊಂದಿಗೆ ಸಮುದ್ರ ತೀರಕ್ಕೆ ತೆರಳಿ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ
Next Article ಸ್ಕೀಯಿಂಗ್ ವೇಳೆ ಗಾಯಗೊಂಡಿದ್ದ ವೇದಾಂತ ಸಂಸ್ಥಾಪಕ ಅನಿಲ್ ಪುತ್ರ ಅಗ್ನಿವೇಶ್ ನಿಧನ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?