Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು : ನಮ್ಮ ಮೆಟ್ರೋ ರೈಲುಗಳು ಬೆಂಗಳೂರಿಗರಿಗೆ ವರದಾನವೇ ಆಗಿದೆ. ಸುಖಕರ ಪ್ರಯಾಣಕ್ಕೆ ಮೆಟ್ರೋ ದಿ ಬೆಸ್ಟ್ ಎನ್ನಬಹುದು. ಸಿಲಿಕಾನ್ ಸಿಟಿಯ ಟ್ರಾಫಿಕ್ ಜಾಮ್ ಜಂಜಾಟದ ನಡುವೆ ಟೈಮಿಗೆ ಸರಿಯಾಗಿ ಆಫೀಸ್, ಸ್ಕೂಲ್, ಕಾಲೇಜು ತಲುಪಲು ಮೆಟ್ರೋ ಉಪಯುಕ್ತವಾಗಿದೆ. ಮೆಟ್ರೋದಲ್ಲಿ ಪ್ರಯಾಣಿಸುವವರು ಕೆಲ ರೂಲ್ಸ್ಗಳನ್ನ ಫಾಲೋ ಮಾಡಲೇಬೇಕು. ನಿಯಮ ಮೀರಿದ್ರೆ ದಂಡಾಸ್ತ್ರ ಫಿಕ್ಸ್.
ಮೆಟ್ರೋ ಟ್ರಾವೆಲಿಂಗ್ ವೇಳೆ ಸೌಂಡ್ ಜಾಸ್ತಿ ಇಟ್ಟುಕೊಂಡು ಮೊಬೈಲ್ ಬಳಕೆ ಮಾಡಬಾರದು ಅನ್ನೋ ನಿಯಮ ಇದ್ದರೂ ಉಲ್ಲಂಘನೆ ಆಗುತ್ತಿದೆ. ಇದೇ ಕಾರಣಕ್ಕೆ ದಂಡಾಸ್ತ ಪ್ರಯೋಗಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ.
ಮೊಬೈಲ್ ಅಲ್ಲಿ ವಾಲ್ಯೂಮ್ ಜಾಸ್ತಿ ಕೊಡುವುದು, ಬ್ಲೂಟೂತ್ ಬಳಕೆ ಮಾಡಿ ಗಟ್ಟಿಯಾಗಿ ಮಾತನಾಡಿ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು, ಅಲ್ಲಲ್ಲಿ ಊಟ, ತಿಂಡಿ ಮಾಡುವುದು, ತಂಬಾಕು ಸೇವನೆ ಮಾಡುವ ದೂರು ಕಂಡು ಬರುತ್ತಲೇ ಇದೆ. ಡಿಸೆಂಬರ್ 5ರಿಂದ 25ರವರೆಗಿನ ಡೇಟಾ ಪ್ರಕಾರ 6,520 ಮಂದಿ ವಿರುದ್ಧ ಲೌಡ್ ಸೌಂಡ್ ಕೇಸ್ ದಾಖಲಾಗಿದೆ.
ಮೆಟ್ರೋದಲ್ಲಿ ತಿಂಡಿ ತಿಂದು 268 ಕೇಸ್ ದಾಖಲು ಆಗಿದೆ. ತಂಬಾಕು ಸೇವನೆಯ ಅಡಿ 641 ದೂರು ರಿಜಿಸ್ಟರ್ ಆಗಿದೆ. ಹಲವು ಬಾರಿ ಹಲವರಿಗೆ ವಾರ್ನಿಂಗ್ ಕೊಟ್ಟು ಕೊಟ್ಟು ಸಾಕಾದ ಹಿನ್ನೆಲೆ ದಂಡಾಸ್ತ್ರ ಪ್ರಯೋಗಕ್ಕೆ ಬಿಎಂಆರ್‌ಸಿಎಲ್ ಪ್ಲ್ಯಾನ್ ಮಾಡುತ್ತಿದ್ದು, ಶೀಘ್ರದಲ್ಲೇ ಫೈನ್ ಅಸ್ತ ಪ್ರಯೋಗ ಪ್ಲಾನ್ ಅನುಷ್ಠಾನಕ್ಕೆ ಬರಲಿದೆ.
https://www.newsics.com/2025/12/28/tv-serials-teach-women-how-to-be-housewives-haveri-sp-yashoda/