Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಂಧನ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ಹೋದ್ರಾ ಬೈರತಿ ಬಸವರಾಜ್?; ಮಾಜಿ ಸಚಿವನಿಗಾಗಿ ಸಿಐಡಿಯ 3 ತಂಡದಿಂದ ಶೋಧ
ಕರ್ನಾಟಕಪ್ರಮುಖ

ಬಂಧನ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ಹೋದ್ರಾ ಬೈರತಿ ಬಸವರಾಜ್?; ಮಾಜಿ ಸಚಿವನಿಗಾಗಿ ಸಿಐಡಿಯ 3 ತಂಡದಿಂದ ಶೋಧ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ರೌಡಿ ಶೀಟರ್ ಬಿಕ್ಲ ಶಿವನ ಹತ್ಯೆ ಕೇಸ್‌ನಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ಗೆ ಸಂಕಷ್ಟ ಎದುರಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಇದರ ಬೆನ್ನಲ್ಲೇ ಬೈರತಿ ಬಸವರಾಜ್‌ಗೆ ಬಂಧನ ಭೀತಿ ಎದುರಾಗಿತ್ತು. ಆದರೀಗ ಬೈರತಿ ಬಸವರಾಜ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಸಿಐಡಿ ಅಧಿಕಾರಿಗಳ ವಿಶೇಷ ತಂಡಗಳು ಬೈರತಿ ಬೆನ್ನು ಬಿದ್ದಿವೆ. ನಾಳೆ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಬೈರತಿ ಬಸವರಾಜ್ ಭವಿಷ್ಯ ನಿರ್ಧಾರವಾಗಲಿದೆ.

ಕಳೆದ ಜುಲೈನಲ್ಲಿ ಶುರುವಾದ ಕೊಲೆ ಕೇಸ್‌ನ ತಲೆನೋವು ಈಗ ಮತ್ತಷ್ಟು ಹೆಚ್ಚಾಗಿದ್ದು, ಹೈಕೋರ್ಟ್ ಮಧ್ಯಂತರ ರಕ್ಷಣೆ ಸಾಧ್ಯವಿಲ್ಲ ಅಂತಾ ಆದೇಶ ನೀಡಿದ ಬಳಿಕ ಬೈರತಿ ಭೂಗತರಾಗಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೆ ಹಾಕಿಕೊಂಡಿದ್ದ ನಿರೀಕ್ಷಣಾ ಜಾಮೀನು ಅರ್ಜಿ ನಾಳೆಗೆ ವಿಚಾರಣೆಗೆ ಬರಲಿದೆ. ಇತ್ತ ಮಾಜಿ ಸಚಿವ ಕರ್ನಾಟಕ, ಗೋವಾ, ಮಹಾರಾಷ್ಟ್ರ ಅಂತಾ ರಾಜ್ಯದಿಂದ ರಾಜ್ಯಕ್ಕೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಲೆಯುತ್ತಿದ್ದಾರೆ.

ಇತ್ತ ಸಿಐಡಿ ಅಧಿಕಾರಿಗಳ ಮೂರು ವಿಶೇಷ ತಂಡಗಳು ಅವರ ಬೆನ್ನಟ್ಟಿವೆ. ಶಾಸಕ ಬೈರತಿ ಬಸವರಾಜ್ ಪತ್ತೆಗೆ ಶೋಧ ಮುಂದುವರೆದಿದ್ದು, ಗೋವಾದಲ್ಲಿ ಅವರು ಕೊನೆಯದಾಗಿ ಮೊಬೈಲ್ ಲೊಕೇಷನ್ ತೋರಿಸಿದ್ದು, ಟೀಂ ಬೀಡುಬಿಟ್ಟಿದೆ. ಒಟ್ಟು ಮೂರು ವಿಶೇಷ ತಂಡಗಳಿಂದ ಶಾಸಕರ ಹುಡುಕಾಟ ನಡೆಸಲಾಗುತ್ತಿದ್ದು, ಗೋವಾ ಹಾಗೂ ಅಲ್ಲಿಂದ ಮಹಾರಾಷ್ಟ್ರಕ್ಕೆ ಜಂಪ್‌ ಆಗಿರಬಹುದು ಅಂತಾ ಮಹಾರಾಷ್ಟ್ರದಲ್ಲಿ ಕೂಡ ಮತ್ತೊಂದು ತಂಡ ಹುಡುಕಾಟ ನಡೆಸಿದೆ. ಇನ್ನೊಂದು ತಂಡ ಬೆಂಗಳೂರಿನಲ್ಲಿ ಅವರ ಆಪ್ತರ ಮೇಲೆ ಕಣ್ಣಿಟ್ಟಿದೆ. ಅವರ ಆಪ್ತರು, ಕುಟುಂಬಸ್ಥರನ್ನು ಬೈರತಿ ಬಸವರಾಜ್ ಸಂಪರ್ಕಿಸಬಹುದು ಎಂದು ಒಂದು ತಂಡ ಮಾನಿಟರ್‌ ಮಾಡುತ್ತಿದೆ.

ನಾಳಿನ ಕೋರ್ಟ್ ನಿರ್ಧಾರದ ಮೇಲೆ ಶಾಸಕನ ಭವಿಷ್ಯ ನಿಂತಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ ನಾಳೆಗೆ ಕೋರ್ಟ್ ವಿಚಾರಣೆ ಮುಂದೂಡಿದೆ. ನಾಳೆ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕರೆ ರಿಲೀಫ್ ಸಿಗಬಹುದು.‌ ಇಲ್ಲವಾದರೆ, ಬೈರತಿ ಬಸವರಾಜ್ ಅರೆಸ್ಟ್ ಆಗೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈಗಾಗಲೇ ಬೈರತಿ ಬಸವರಾಜ್‌ಗೆ ಸಿಐಡಿ ತಂಡಗಳು ತೀವ್ರ ಹುಡುಕಾಟ ನಡೆಸುತ್ತಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸರ್ಚಿಂಗ್ ಮುಂದುವರೆಸಿವೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿ ಶಾಸಕ ತಲೆಮರೆಸಿಕೊಂಡಿದ್ದಾರೆ.

ರೌಡಿಶೀಟರ್ ಬಿಕ್ಲು ಶಿವನ ಬರ್ಬರ ಕೊಲೆಯ ಹಿಂದೆ ಶಾಸಕ ಬೈರತಿ ಬಸವರಾಜ್ ಕೈವಾಡದ ಶಂಕೆ ಹಿನ್ನೆಲೆ ಕೇಸಲ್ಲಿ ಐದನೇ ಆರೋಪಿಯಾಗಿದ್ದರು.

ಬೆಂಗಳೂರಿನಲ್ಲಿ ಚಳಿಯೋ ಚಳಿ ;8.5°C ದಾಖಲು?

TAGGED:Hodra Bairati Basavaraj flees to unknown location due to fear of arrest?; 3 CID teams search for former minister
Share This Article
Facebook Twitter Copy Link Print
Previous Article ಬೆಂಗಳೂರಿನಲ್ಲಿ ಚಳಿಯೋ ಚಳಿ ;8.5°C ದಾಖಲು?
Next Article ಎಣ್ಣೆ ಕುಡಿಯೋ ಮೊದಲು ಗ್ಲಾಸ್‌ನಲ್ಲಿರುವ ಒಂದೆರಡು ಹನಿಯನ್ನ ನೆಲಕ್ಕೆ ಹಾಕೋದ್ಯಾಕೆ?

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?