Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಟಿ ಜೋಶಿತಾ ಹಾಗೂ ಅವರ ತಂದೆ-ತಾಯಿಯ ಮೇಲೆ ಆಕೆಯ ಗಂಡ ಸುರೇಶ್ ನಡು ರಸ್ತೆಯಲ್ಲಿಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಮೂಲಕ ಜೋಶಿತಾ ಅವರ ಸಂಸಾರ ಬೀದಿಗೆ ಬಂದಿದೆ.
ಹಲ್ಲೆಗೊಳಗಾದ ಸುರೇಶ್ ಪತ್ನಿ ನಟಿ ಜೋಶಿತ ಮಾತನಾಡಿದ್ದು, ಮದುವೆಯಾದ ಪ್ರಾರಂಭದಲ್ಲಿ ನನಗೆ ಇಂತವನು ಅಂತ ಗೊತ್ತಾಗಿಲ್ಲ. ಮೂರು ತಿಂಗಳಿಗೆ ಬಾಣಂತನ ದಿಂದ ಕರೆದುಕೊಂಡು ಬಂದುಬಿಟ್ಟು, ಪಬ್, ಕ್ಲಬ್ ಹೋಗೋಣ ಅಂತಿದ್ದ. ಇಷ್ಟ ಇಲ್ಲದೆ ತಾಯಿ ಮನೆಗೆ ಬಂದೆ. ಮದುವೆಗೆ ಮುಂಚೆ ದೇವಸ್ಥಾನಕ್ಕೆ ಕರೆದೊಯ್ಯುತ್ತೇನೆ ಎಂದು ಅ*ತ್ಯಾಚಾರ ಮಾಡಿದ್ದಾನೆ. ಜ್ಯೂಸ್‌ಗೆ ಮತ್ತು ಬರುವ ಏನೂ ಹಾಕಿ ರೂಮ್ ಗೆ ಕರೆದೊಯ್ದು ಅ*ತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಮಗು ನೋಡಿಕೊಳ್ಳೋಕೆ ಹಣ ಕೊಡಲಿ. ಇಲ್ಲ ಅಂದರೆ ನಾನು ಹೇಗೆ ನೋಡಿಕೊಳ್ಳಲಿ. ನಮ್ಮ ತಂದೆ ತಾಯಿ ಬಳಿ ಹಣ ಇಲ್ಲ. ರೌಡಿಗಳ ಜೊತೆ ಬ್ಯಾಗ್ರೌಂಡ್ ನಲ್ಲಿ ಕೆಲಸ ಮಾಡ್ತಾನೆ. ಅವನ ಬಳಿ ನೂರು ಇನ್ಸ್ಟಾಗ್ರಾಮ್ ಐಡಿ, ನೂರು ಫೇಸ್ ಬುಕ್ ಐಡಿ ಇದೆ. ನೂರು ಮೊಬೈಲ್ ನಂಬರ್ ಚೇಂಜ್ ಮಾಡ್ತಾನೆ. ನಮಗೆ ನ್ಯಾಯ ಕೊಡಿಸಿ ಎಂದು ಜೋಶಿತಾ ಹೇಳಿದ್ದಾರೆ.
ಮದಗಜ ಸಿನಿಮಾ ಅಲ್ಲದೆ, ರೈತ, ಸ್ವಯಂವರ ಎನ್ನುವ ಶಾರ್ಟ್ ಮೂವಿ, ಶ್ರೀದೇವಿ ಮಹಾತ್ಮೆ ಅನ್ನೋ ಸೀರಿಯಲ್‌ನಲ್ಲೂ ಕೂಡ ಜೋಶಿತಾ ನಟಿಸಿದ್ದರು ಹಲ್ಲೆ ಒಳಗಾಗಿರುವ ಜೋಶಿತಾ ಸಿನಿಮಾ ಹಾಗೂ ಸೀರಿಯಲ್ ನಟಿ ಮಾತ್ರವಲ್ಲದೆ, ಚೈಲ್ಡ್ ಆರ್ಟಿಸ್ಟ್ ಹಾಗೂ ಡಬ್ಬಿಂಗ್ ಕಲಾವಿದೆ ಕೂಡ ಆಗಿದ್ದಾರೆ.
Accused gets 30 years in prison ಅಪ್ರಾಪ್ತ ಮೂಕಿ ಮೇಲೆ ಅಚ್ಯಾಚಾರವೆಸಗಿದ ಆರೋಪಿಗೆ 30 ವರ್ಷ ಜೈಲು