Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಇದೀಗ ಬಿಡುವು ಮಾಡಿಕೊಂಡು ತಮ್ಮ ಗೆಳತಿಯರ ಜೊತೆಗೆ ಶ್ರೀಲಂಕಾಕ್ಕೆ ತೆರಳಿದ್ದಾರೆ. ಪ್ರವಾಸದ ಫೋಟೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ನಟ ವಿಜಯ್ ದೇವರಕೊಂಡ ಅವರೊಂದಿಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಶೀಘ್ರದಲ್ಲೇ ಅವರೊಂದಿಗೆ ಹಸೆಮಣೆ ಏರಲಿದ್ದು, ಅದಕ್ಕೂ ಮುನ್ನ ಬ್ಯಾಚುಲರ್ ಪಾರ್ಟಿ ಟ್ರಿಪ್ ಇದಾಗಿದೆ ಎಂದು ಹಲವಾರು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಸಂಜೆ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರವಾಸದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಮತ್ತು ಅವರ ಸ್ನೇಹಿತರು ಶ್ರೀಲಂಕಾದ ಒಂದು ಸುಂದರ ಪರಿಸರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊಗಳಿವೆ.
ಚಿತ್ರಗಳ ಜೊತೆಗೆ ರಶ್ಮಿಕಾ, ‘ಇತ್ತೀಚೆಗೆ ನನಗೆ 2 ದಿನಗಳ ರಜೆ ಸಿಕ್ಕಿತು ಮತ್ತು ನನ್ನ ಗೆಳತಿಯರೊಂದಿಗೆ ಸಮಯ ಕಳೆಯಲು ನನಗೆ ಈ ಅವಕಾಶ ಸಿಕ್ಕಿತು ಮತ್ತು ನಾವು ಶ್ರೀಲಂಕಾದ ಈ ಸುಂದರ ಸ್ಥಳಕ್ಕೆ ಹೋಗಿದ್ದೆವು… ಹುಡುಗಿಯರ ಪ್ರವಾಸಗಳು – ಎಷ್ಟೇ ಚಿಕ್ಕದಾದರೂ ಅದು ಅತ್ಯುತ್ತಮವಾಗಿರುತ್ತದೆ!! ನನ್ನ ಹುಡುಗಿಯರು ಅತ್ಯುತ್ತಮ! ಕೆಲವರು ಕಾಣೆಯಾಗಿದ್ದಾರೆ ಆದರೆ, ಅವರು ಅತ್ಯುತ್ತಮ!!’ ಎಂದು ಬರೆದಿದ್ದಾರೆ.
https://www.instagram.com/p/DSVNYNVk_5L/?igsh=MTlqajBzdHJyNnE3bg==