Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೈಸೂರು ಮಹಾನಗರ ಪಾಲಿಕೆ ಬೀದಿ ನಾಯಿಗಳ ವಿಚಾರದಲ್ಲಿ ವಿಶೇಷವಾದ ಕಾರ್ಯವೊಂದನ್ನು ಮಾಡಿದೆ.
ಬೀದಿ ನಾಯಿಗಳನ್ನು ರಕ್ಷಿಸಲು ಹೊಸ ಉಪಾಯ
ಹೌದು, ಬೀದಿ ನಾಯಿಗಳನ್ನು ರಕ್ಷಣೆ ಮಾಡುವುದಕ್ಕೆ ಮೈಸೂರು ಮಹಾನಗರ ಪಾಲಿಕೆ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನೆ ಇಲಾಖೆಯ ವತಿಯಿಂದ ಬೀದಿ ನಾಯಿಗಳನ್ನು ಶ್ವಾನ ಪ್ರಿಯರಿಗೆ ದತ್ತು ನೀಡಿದರು. ಒಟ್ಟಾರೆ 20 ನಾಯಿಗಳನ್ನು ಪಂಜರದಲ್ಲಿ ಸ್ಥಳಕ್ಕೆ ತರಲಾಗಿತ್ತು, ಅದರಲ್ಲಿ5 ನಾಯಿಗಳನ್ನು ದತ್ತು ತೆಗೆದುಕೊಂಡ ಜನರು ತಮ್ಮ ಮನೆಗೆ ಒಯ್ದರು. ಆಗ ತಾನೇ ಹುಟ್ಟಿದ ಮರಿಗಳಿಂದ 2-3 ವರ್ಷ ವಯಸ್ಸಿನ ನಾಯಿಗಳೂ ಇಲ್ಲಿದ್ದವು. ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಪ್ರತಿಮಾ ಹಾಗೂ ಆನಂದ್ ಅವರೂ ಒಂದೊಂದು ನಾಯಿ ದತ್ತು ಪಡೆದರು.
ನಗರದ ಟೌನ್ ಹಾಲ್ ಬಳಿ ನಡೆದ ದತ್ತು ಕಾರ್ಯಕ್ರಮದಲ್ಲಿ ನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸೀಫ್ ಬೀದಿ ನಾಯಿಗಳಿಗೆ ತಿಂಡಿಯನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಈ ಒಂದು ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕ ಜನರು ಬೀದಿ ನಾಯಿಗಳನ್ನು ದತ್ತು ಸ್ವೀಕಾರ ಮಾಡಿದರು. ಇನ್ನೂ ಈ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ವಿದೇಶಿ ಪ್ರಜೆಗಳು ಕೂಡ ಭಾಗವಹಿಸಿ ಎರಡು ಬೀದಿ ನಾಯಿಗಳನ್ನು ದತ್ತು ಸ್ವೀಕಾರ ಮಾಡಿ ಸಂತಸಪಟ್ಟರು. ಜರ್ಮನಿಯ ಫೀನಿಯಾ ಹಾಗೂ ಅರೀನಾ ಇವರಿಬ್ಬರೂ ಮೈಸೂರಿಗೆ ಬಂದ ಪ್ರವಾಸಿಗರಾಗಿದ್ದು ತಾವು ಈ ಬೀದಿ ನಾಯಿಗಳನ್ನು ಕೊಂಡೊಯ್ಯುವ ಯೋಚನೆಯಲ್ಲಿದ್ದಾರೆ.