Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೆಮ್ಮೆಯ ಪ್ರತಿಭೆ, ಚಲನಚಿತ್ರ ನಿರ್ದೇಶಕಿ ಅನೂಯಾ ಸ್ವಾಮಿ ಅವರ ‘ಪಂಕಜ’ ಕಿರುಚಿತ್ರವು ವಿಶ್ವದ ಅತ್ಯಂತ ಪ್ರಭಾವಶಾಲಿ ಚಲನಚಿತ್ರೋತ್ಸವಗಳಲ್ಲಿ ಒಂದಾದ ಸನ್‌ಡ್ಯಾನ್ಸ್ ಫಿಲ್ಮ್ ಫೆಸ್ಟಿವಲ್ 2026ಕ್ಕೆ ಆಯ್ಕೆಯಾಗಿದೆ.ಈ ಆಯ್ಕೆಯು ಅನೇಕ ದೃಷ್ಟಿಕೋನಗಳಿಂದ ಮಹತ್ವದ್ದಾಗಿದೆ. ಸನ್‌ಡ್ಯಾನ್ಸ್ ಫಿಲ್ಮ್ ಚಲನಚಿತ್ರೋತ್ಸವದಲ್ಲಿ ತಮ್ಮ ಚೊಚ್ಚಲ ಚಿತ್ರ ಪ್ರದರ್ಶನ ಮಾಡುತ್ತಿರುವ ಮೊದಲ ಕನ್ನಡತಿ ಅನೂಯಾ ಸ್ವಾಮಿಯವರು ನಿರ್ದೇಶಕಿಯಾಗಿ ಕನ್ನಡ ನಾಡಿಗೆ ಹೆಮ್ಮೆ ತಂದಿದ್ದಾರೆ.ಸನ್‌ಡ್ಯಾನ್ಸ್ ಫಿಲ್ಮ್ ಫೆಸ್ಟಿವಲ್ ಗೆ ಅಧಿಕೃತವಾಗಿ ಆಯ್ಕೆಯಾದ ಮೊದಲ ಕನ್ನಡ ಕಿರುಚಿತ್ರ ಎಂಬ ಹೆಗ್ಗಳಿಕೆ ‘ಪಂಕಜ’ ಕಿರು ಚಿತ್ರಕ್ಕಿದೆ. ಇದು ಪ್ರಾದೇಶಿಕ ಭಾರತೀಯ ಸಿನಿಮಾಗೆ ಜಾಗತಿಕ ವೇದಿಕೆಯಲ್ಲಿ ಸಿಕ್ಕಿರುವ ದೊಡ್ಡ ಮನ್ನಣೆಯಾಗಿದೆ.ಸನ್‌ಡ್ಯಾನ್ಸ್ ಚಲನಚಿತ್ರೋತ್ಸವವು ಸನ್‌ಡ್ಯಾನ್ಸ್ ಸಂಸ್ಥೆಯು ಆಯೋಜಿಸುವ ವಾರ್ಷಿಕ ಚಲನಚಿತ್ರೋತ್ಸವವಾಗಿದೆ. ಇದು ಯುನೈಟೆಡ್ ಸ್ಟೇಟ್ನಲ್ಲಿಯೇ ಅತಿ ದೊಡ್ಡ ಸ್ವತಂತ್ರ ಚಲನಚಿತ್ರೋತ್ಸವವಾಗಿದೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಜಾಹ್ನವಿ ಏನು ಮಾಡ್ತಿದ್ದಾರೆ? ಸಿನಿಮಾ ಬಗ್ಗೆ ಹೇಳಿದ್ದೇನು?