Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಆರೋಗ್ಯವಾಗಿರಲು ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ 7 ರಿಂ 9 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಬೇಕು.
ಆದರೆ ಇಂದು ಅನೇಕರು ಒತ್ತಡ, ಕಳಪೆ ಜೀವನಶೈಲಿಯ ಕಾರಣದಿಂದಾಗಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೇಗ ಮಲಗಿದರೂ ಸಹ ನಿದ್ರೆ ಮಾತ್ರ ಬರೋದೆ ಇಲ್ಲ ಎನ್ನುತ್ತಿರುತ್ತಾರೆ.
ಮಲಗಿದ ತಕ್ಷಣ ನಿದ್ರೆ ಬರಲು ಏನು ಮಾಡಬೇಕು?
ಲೈಟ್ ಆಫ್ ಮಾಡಿ: ನೀವು ಮಲಗಿದ ತಕ್ಷಣ ನಿದ್ರಿಸಲು ಬಯಸಿದರೆ, ಕೋಣೆಯ ಲೈಟ್ ಆಫ್ ಮಾಡಿ. ಬೆಳಕು ನಿಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಕೊಠಡಿ ಕತ್ತಲೆಯಾಗಿದ್ದರೆ, ನೀವು ಬೇಗ ನಿದ್ರಿಸುತ್ತೀರಿ. ಹಾಗಾಗಿ ಮಲಗುವ ಕೋಣೆ ಕತ್ತಲೆಯಿಂದಿರುವಂತೆ ನೋಡಿಕೊಳ್ಳಿ.
ಮೊಬೈಲ್ ನೋಡಬೇಡಿ: ಮಲಗುವ ಒಂದು ಗಂಟೆ ಮೊದಲು ನೀವು ಫೋನ್ ನೋಡುವುದನ್ನು ನಿಲ್ಲಿಸಿ. ಫೋನ್ ಮೆಲಟೋನಿನ್ ಉತ್ಪದನೆಗೆ ಅಡ್ಡಿಪಡಿಸಬಹುದು. ಇದು ನಿದ್ರೆ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನು ತಕ್ಷಣ ನಿಲ್ಲಿಸಿ
ಪುಸ್ತಕ ಓದಿ: ರಾತ್ರಿ ಮಲಗುವ ಮುನ್ನ ನಿಮ್ಮಿಷ್ಟದ ಪುಸ್ತಕ ಓದಿ. ಇದರಿಂದ ಮನಸ್ಸು ಹಗುರವಾಗುತ್ತದೆ. ನೀವು ಬೇಗನೆ ನಿದ್ರೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.
ಧ್ಯಾನ: ಮಲಗುವ ಮುನ್ನ 5 ನಿಮಿಷಗಳ ಕಾಲ ಧ್ಯಾನ ಮಾಡಿ. ಯಾವುದೇ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಲು ಬಿಡಬೇಡಿ. ನಿಮ್ಮ ಉಸಿರಾಟದ ಮೇಲೆ ಗಮನಹರಿಸಿ. ಇದು ನಿಮಗೆ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.
ಅರೋಮಾಥೆರಪಿ: ರಾತ್ರಿ ಮಲಗುವ ಮುನ್ನ ಅರೋಮಾಥೆರಪಿಯನ್ನು ಅನುಸರಿಸಿ. ಇದು ಮನಸ್ಸನ್ನು ಶಾಂತವಾಗಿಸುತ್ತದೆ ಮತ್ತು ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಸಂಗೀತ ಆಲಿಸಿ: ಸಂಗೀತ ಕೇಳುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ, ಅಲ್ಲದೆ ನಿದ್ರಾಹೀನತೆ ಕಡಿಮೆಯಾಗುತ್ತದೆ. ನೀವು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಲಗುವ ಮುನ್ನ ಸಂಗೀತ ಕೇಳಿ.
ಬಿಸಿ ನೀರಿನ ಸ್ನಾನ: ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡಿ, ಬಿಸಿ ನೀರಿನ ಸ್ನಾನ ಮಾಡುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ದೇಹದ ಉಷ್ಣತೆ ಚೆನ್ನಾಗಿರುತ್ತದೆ, ಇದು ನಿಮಗೆ ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ.
Gold Rate Today Bangalore: ಚಿನ್ನದ ಬೆಲೆ 10 ದಿನದಲ್ಲಿ 220 ರೂ ಏರಿಕೆ; ಇಂದಿನ ಬೆಲೆ ಎಷ್ಟು?