Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪ್ರಧಾನಿ ನರೇಂದ್ರ ಮೋದಿ ಆಹ್ವಾನದ ಮೇರೆಗೆ ಭಾರತಕ್ಕೆ ಭೇಟಿ ನೀಡಿದ್ದು ಈ ವೇಳೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯ್ತು. ಈ ವೇಳೆ ಪುಟಿನ್ ಕಾರಿನಿಂದ ಇಳಿದ ತಕ್ಷಣ ತಲೆಯಾಡಿಸಿ ಎಲ್ಲರಿಗೂ ನಮಸ್ಕರಿಸಿದರು. ನಂತರ ಅವರು ರಾಷ್ಟ್ರಪತಿ ಕಡೆಗೆ ತಿರುಗಿದರು. ಆ ಹಂತದಲ್ಲಿ ಅವರು ಇದ್ದಕ್ಕಿದ್ದಂತೆ ಒಂದು ಕ್ಷಣ ನಿಂತು, ಸ್ವಲ್ಪ ಬಲಕ್ಕೆ ತಿರುಗಿ ಒಬ್ಬ ವ್ಯಕ್ತಿಯೊಂದಿಗೆ ಕೈಕುಲುಕಿದರು. ನಂತರ ಅವರು ಮುಂದೆ ಸಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ನಂತರ ಪ್ರಧಾನಿ ಮೋದಿ ಅವರೊಂದಿಗೆ ಕೈಕುಲುಕಿದರು.
ಕಾರ್ನಿಂದ ಇಳಿದ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಮೇಜರ್ ಜನರಲ್ ವೂದೇವ್ ಪರಿದಾ ಅವರಿಗೆ ಕೈಕುಲುಕಿದರು. ಅವರು ರಾಷ್ಟ್ರಪತಿಯ ಮಿಲಿಟರಿ ಕಾರ್ಯದರ್ಶಿಯಾಗಿದ್ದು, ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುತ್ತಾರೆ. ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿರುವ ವೂದೇವ್ ಪರಿದಾ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮಾರಂಭಗಳು, ಪ್ರಯಾಣ ಮತ್ತು ಆಹ್ವಾನಗಳ ಮಿಲಿಟರಿ ಕಾರ್ಯದರ್ಶಿಯಾಗಿದ್ದಾರೆ. ಅವರಿಗೆ ವಿಶಿಷ್ಟ ಸೇವಾ ಪದಕವನ್ನೂ ನೀಡಲಾಗಿದೆ. ಅದಕ್ಕಾಗಿಯೇ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಾಗತಿಸಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳೊಂದಿಗೆ ನಿಂತಿದ್ದರು.
ಪುಟಿನ್ ಅವರು ವೂದೇವ್ ಪರಿದಾ ಅವರೊಂದಿಗೆ ಕೈಕುಲುಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಜನರು ಪುಟಿನ್ ಅವರ ವರ್ತನೆಯನ್ನು ಶ್ಲಾಘಿಸುತ್ತಿದ್ದಾರೆ.