Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮಾರ್ಕ್‌ ಜುಕರ್‌ಬರ್ಗ್‌ ದಾಖಲೆ ಮುರಿದು ಬರೀ 22 ವರ್ಷಕ್ಕೆ ಕೋಟ್ಯಧಿಪತಿಯಾದ ಭಾರತದ 22 ವರ್ಷದ ಆದರ್ಶ್ ಹಿರೇಮಠ
ಕರ್ನಾಟಕಪ್ರಮುಖವಿದೇಶ

ಮಾರ್ಕ್‌ ಜುಕರ್‌ಬರ್ಗ್‌ ದಾಖಲೆ ಮುರಿದು ಬರೀ 22 ವರ್ಷಕ್ಕೆ ಕೋಟ್ಯಧಿಪತಿಯಾದ ಭಾರತದ 22 ವರ್ಷದ ಆದರ್ಶ್ ಹಿರೇಮಠ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮೆರ್ಕರ್ ಎನ್ನುವ ಎಐ ಸರ್ವಿಸ್ ಕಂಪನಿಯ ಸಹ-ಸಂಸ್ಥಾಪಕ ಆದರ್ಶ್ ಹಿರೇಮಠ ಅವರು ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್ ಎನಿಸಿದ್ದಾರೆ.

ವಯಸ್ಸು 22, ಹಾರ್ವರ್ಡ್ ವಿಶ್ವವಿದ್ಯಾಲಯದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಕನ್ನಡಿಗ ಆದರ್ಶ ಹಿರೇಮಠ ಅವರು ಸ್ನೇಹಿತರ ಜತೆಗೂಡಿ ತಮ್ಮದೇ ಸಂಸ್ಥೆ ಸ್ಥಾಪಿಸುವ ಮೂಲಕ ಶತಕೋಟಿ ಒಡೆಯ ಎನಿಸಿಕೊಂಡಿದ್ದಾರೆ.

ಶತಕೋಟಿ ಒಡೆಯನಾಗಲು ಆದರ್ಶ್ ಅವರಿಗೆ ನೆರವಾಗಿದ್ದು ಕೃತಕ ಬುದ್ಧಿಮತ್ತೆ. ಸ್ಟಾರ್ಟ್‌ಅಪ್‌ಗಳಿಗೆ ನೆರವಾಗಿರುವ ಇವರ ತಂತ್ರಾಂಶದ ಮೌಲ್ಯ 10 ಶತಕೋಟಿ ಅಮೆರಿಕನ್ ಡಾಲರ್ ಅಂದರೆ ₹90 ಸಾವಿರ ಕೋಟಿಗೆ ಏರಿಕೆಯಾಗಿದ್ದು, ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.
ಈ ಸಾಹಸದಲ್ಲಿ ಆದರ್ಶ್ ಅವರಿಗೆ ನೆರವಾದವರು ಅವರ ಸ್ನೇಹಿತರಾದ ಭಾರತ ಮೂಲದ ಸೂರ್ಯ ಮಿಧಾ ಮತ್ತು ಅಮೆರಿಕದವರೇ ಆದ ಬ್ರೆಂಡಾನ್‌ ಫುಡಿ. ಈ ಮೂವರು ಮೊದಲು ಭೇಟಿಯಾಗಿದ್ದು ಶಾಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ. ಇದೇ ತಂಡ ಪ್ರತಿಷ್ಠಿತ ಥೀಲ್ ಶಿಷ್ಯವೇತನವನ್ನೂ ಪಡೆಯಿತು. ನಂತರ ಕಾಲೇಜು ತೊರೆದ ಈ ತಂಡ ಆರಂಭಿಸಿದ್ದು ಸ್ಟಾರ್ಟ್‌ಅಪ್‌. ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸುವ ಮೂಲಕ ಅತಿದೊಡ್ಡ ನೇಮಕಾತಿ ಮಾರುಕಟ್ಟೆ ವೇದಿಕೆಯನ್ನು ಇವರು ಕಲ್ಪಿಸಿದ್ದಾರೆ.
2023ರಲ್ಲಿ ಇವರ ಕಂಪನಿ ಆರಂಭಗೊಂಡಿತು. ಅದೇ ವರ್ಷ 9 ತಿಂಗಳ ಒಳಗಾಗಿ ಇವರ ಕಂಪನಿ ₹9 ಕೋಟಿ ಆದಾಯ ಗಳಿಸಿತು. ಆದರೆ 2025ರ ಜೂನ್‌ನಲ್ಲಿ ಮೆಟಾ ಕಂಪನಿಯು ಸ್ಕೇಲ್‌.ಎಐನ ಶೇ 49ರಷ್ಟು ಪಾಲನ್ನು ₹1.25 ಲಕ್ಷ ಕೋಟಿ ಕೊಟ್ಟು ಖರೀದಿಸಿತು. ಇದರಿಂದ ಬಹಳಷ್ಟು ಬಳಕೆದಾರರು ಸ್ಕೇಲ್ ತೊರೆದು ತಟಸ್ಥ ಧೋರಣೆ ಹೊಂದಿರುವ ಆದರ್ಶ್ ಅವರ ಮೆರ್ಕರ್‌ನ ಎಐ ಸಾಧನ ಬಳಸಲು ಆರಂಭಿಸಿದರು.
ಇದರ ಪರಿಣಾಮ ಮೆರ್ಕರ್ ವೇದಿಕೆಯು ವಾರ್ಷಿಕ ₹4.5 ಸಾವಿರ ಕೋಟಿ ಆದಾಯ ಖರೀದಿಸಿತು. ವೈದ್ಯರು, ವಕೀಲರು, ಸಮಾಲೋಚಕರು, ಬ್ಯಾಂಕರ್‌ಗಳನ್ನು ಒಳಗೊಂಡ 30 ಸಾವಿರ ತಜ್ಞರೊಂದಿಗೆ ಕಂಪನಿ ಒಡಂಬಡಿಕೆ ಮಾಡಿಕೊಂಡಿತು. ಅವರಿಗೆ ತರಬೇತಿ, ಪರೀಕ್ಷೆ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ತಮ್ಮ ಕೃತಕ ಬುದ್ಧಿಮತ್ತೆಗೆ ತುಂಬಿದರು. ಇದಕ್ಕಾಗಿ ತಜ್ಞರಿಗೆ ಪ್ರತಿ ಗಂಟೆಗೆ 85 ಡಾಲರ್‌ ನೀಡಿತು. ಸದ್ಯ ಮೆರ್ಕರ್ ಕಂಪನಿಯು ತಮ್ಮ ಈ ಸಂಪರ್ಕ ಜಾಲಕ್ಕಾಗಿಯೇ ಪ್ರತಿನಿತ್ಯ ₹13.5 ಕೋಟಿ ಖರ್ಚು ಮಾಡುತ್ತಿದೆ.
ಕಂಪನಿಯ ಈ ಬೆಳವಣಿಗೆಯು 2 ಶತಕೋಟಿ ಡಾಲರ್ ಕಂಪನಿಯನ್ನು 10 ಶತಕೋಟಿ ಡಾಲರ್ ಕಂಪನಿಯ ಮಟ್ಟಕ್ಕೆ ಬೆಳೆಸಿದೆ.

ಕಾರ್‌ನಿಂದ ಇಳಿದ ತಕ್ಷಣ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಯಾರಿಗೆ?ವೈರಲ್ ವಿಡಿಯೋ ನೋಡಿ

TAGGED:a 22-year-old IndianAdarsh ​​Hiremathbreaks Mark Zuckerberg's record and becomes a billionaire at just 22 years old
Share This Article
Facebook Twitter Copy Link Print
Previous Article ಕಾರ್‌ನಿಂದ ಇಳಿದ ತಕ್ಷಣ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಯಾರಿಗೆ?ವೈರಲ್ ವಿಡಿಯೋ ನೋಡಿ
Next Article ಮತಾಂತರ ಮತ್ತು ಕೊಲೆ ಬೆದರಿಕೆ; ವಿವಾಹಿತ ಮಹಿಳೆ ಆತ್ಮಹತ್ಯೆ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?