Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ವರಾಹನಾಥ ಕಲ್ಲಹಳ್ಳಿಯಲ್ಲಿರುವ ಐತಿಹಾಸಿಕ ಭೂವರಾಹನಾಥ ದೇವಸ್ಥಾನಕ್ಕೆ ಶನಿವಾರ ಡಿಸಿಎಂ ಭೇಟಿ ನೀಡಿ ಮೃತ್ಯುಂಜಯ ಹೋಮದಲ್ಲಿ ಭಾಗಿಯಾದರು.
ಸಿಎಂ ಜತೆಗಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಮುಗಿಸಿದ ಬಳಿಕ ನೇರವಾಗಿ ದೇವಸ್ಥಾನಕ್ಕೆ ತೆರಳಿದ ಡಿಕೆ ಶಿವಕುಮಾರ್, ವಿಶೇಷ ಪೂಜೆ ಸಲ್ಲಿಸಿ ಬಳಿಕ ಹೋಮದಲ್ಲಿ ಭಾಗಿಯಾದರು.
ಈ ಮಧ್ಯೆ, ಡಿಕೆಶಿ ಆಗಮನಕ್ಕೂ ಮುನ್ನವೇ ದೇಗುಲದ ಆವರಣದಲ್ಲಿ ಹೆಜ್ಜೇನುಗಳು ದಾಳಿ ಮಾಡಿದ್ದು, ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಒಂದಿಬ್ಬರು ಭಕ್ತರ ಮೇಲೆ ಜೇನುಗಳು ದಾಳಿ ಮಾಡಿವೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಸ್ಥಳದಲ್ಲಿದ್ದ ಭಕ್ತರು ಕೆಲ ಕಾಲ ಆತಂಕಗೊಂಡರು.